ನಾಗರಿಕ ಹಕ್ಕು ರಕ್ಷಣೆ ಪತ್ರಕರ್ತರ ಜವಬ್ದಾರಿ

7

ನಾಗರಿಕ ಹಕ್ಕು ರಕ್ಷಣೆ ಪತ್ರಕರ್ತರ ಜವಬ್ದಾರಿ

Published:
Updated:

ಕುಂದಾಪುರ: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಆಡಳಿತ ಯಂತ್ರವನ್ನು ಚುರುಕು ಗೊಳಿಸುವ ಹಾಗೂ ನಾಗರಿಕ ಹಕ್ಕುಗಳನ್ನು ರಕ್ಷಣೆಯನ್ನು ಮಾಡುವ ಮಹತ್ತರವಾದ ಜವಾಬ್ದಾರಿ ಪತ್ರಿಕೆಗಳಿಗಿದೆ. ಪತ್ರಕರ್ತರು ಸುದ್ದಿಗಳನ್ನು ವೈಭಿಕರೀಸದೆ ನೈಜ ಮೌಲ್ಯಗಳನ್ನು ಸಮಾಜದ ಮುಂದಿಡಬೇಕು ಎಂದು ಮಣಿಪಾಲ ಇನ್‌ಸ್ಟಿಟೂಟ್ ಆಫ್ ಕಮ್ಯುನಿಕೇಶನ್‌ನ ನಿರ್ದೇಶಕ ವರದೇಶ್ ಹಿರೇಗಂಗೆ ಹೇಳಿದರು.ಭಾನುವಾರ ಕುಂದಾಪುರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಹೊಟೇಲ್ ಹರಿಪ್ರಸಾದ್‌ನ ಅಕ್ಷತಾ ಸಭಾಭವನದಲ್ಲಿ ನಡೆದ `ಪ್ರಜಾಪ್ರಭುತ್ವ ಮತ್ತು ಪತ್ರಕರ್ತರು~ ಎನ್ನುವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮತನಾಡಿದರು.ಪತ್ರಿಕೆಗಳು ಆಡಳಿತ ಯಂತ್ರದ ವಿರೋಧಿ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಪತ್ರಿಕಾರಂಗ ಯಶಸ್ಸು ಕಾಣಲು ಸಾಧ್ಯ. ಪತ್ರಿಕಾ ರಂಗದಲ್ಲಿ ಹಲವು ನಿಬಂಧನೆಗಳಿದ್ದರೂ ಇತರ ಕ್ಷೇತ್ರಗಳಿಗಿರುವ ಜವಾಬ್ಧಾರಿಗಿಂತ ಹೆಚ್ಚಿನ ಸ್ವಾತಂತ್ರ್ಯವಿದ್ದರೂ, ಪೂರ್ಣ ಸ್ವಾತಂತ್ರ್ಯ ಇಲ್ಲದೆ ಇರುವ  ನಿಬಂಧನೆಗಳ ಅಡಿಯಲ್ಲಿ ಕೆಲಸ ಮಾಡುವ ಒಂದು ತರಹದ ಮಧ್ಯಂತರ ಸ್ಥಿತಿಯಲ್ಲಿ ಇಲ್ಲಿನ ಪತ್ರಿಕೋದ್ಯಮ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಛಾಯಾಚಿತ್ರ ಪತ್ರಕರ್ತರಾದ ಸಂತೋಷ ಕುಂದೇಶ್ವರ, ಹೇಮನಾಥ ಪಡುಬಿದ್ರಿ, ಉಮೇಶ್ ಮಾರ್ಪಳ್ಳಿ, ಜನಾರ್ಧನ ಕೊಡವೂರು, ಗಣೇಶ್ ಬೀಜಾಡಿ, ದುರ್ಗಾ ಪ್ರಸಾದ್ ಕಡಿಯಾಳಿಯವರನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕಿರಣ್ ಮಂಜನಬೈಲು ಸನ್ಮಾನಿಸಿದರು.ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮೋಡಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ ಅತಿಥಿಗಳಾಗಿದ್ದರು.

ಸಂಘದ ಮಾಜಿ ಅಧ್ಯಕ್ಷ ಎ.ರಾಮಕೃಷ್ಣ ಹೇರ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಗೀಶ್ ಡಿ. ಕುಂಭಾಶಿ ಸ್ವಾಗತಿಸಿದರು.

ರಾಜೇಶ್ ಸ್ಪಂದನ ಹಾಗೂ ಜಯಶೇಖರ್ ಮಡಪ್ಪಾಡಿ ಪರಿಚಯಿಸಿದರು. ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ನಾಗರಾಜ ರಾಯಪ್ಪನಮಠ ವಂದಿಸಿದರು. ಚಂದ್ರಶೇಖರ್ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry