ನಾಗಾಯಿ ಸ್ಮಾರಕಗಳ ರಕ್ಷಣೆಗೆ ಆಗ್ರಹ

7

ನಾಗಾಯಿ ಸ್ಮಾರಕಗಳ ರಕ್ಷಣೆಗೆ ಆಗ್ರಹ

Published:
Updated:

ಚಿತ್ತಾಪುರ: ಇಲ್ಲಿನ ಐತಿಹಾಸಿಕ ಕ್ಷೇತ್ರ ನಾಗಾಯಿ ಪ್ರದೇಶವು ಪ್ರಾಚೀನ ಇತಿಹಾಸ ಹೊಂದಿದೆ. ಇಲ್ಲಿರುವ ಹಳೆಯ ದೇಗುಲ, ಮಂದಿರ ಮತ್ತು ಇತರೆ ಸ್ಮಾರಕಗಳು ನಿಧಿಗಳ್ಳರಿಂದ ಧ್ವಂಸವಾಗುತ್ತಿವೆ.ಅವಸಾನದ ಅಂಚಿನಲ್ಲಿರುವ ಅವಶೇಷಗಳನ್ನು ರಕ್ಷಣೆ ಮಾಡಲು ಸಂಬಂಧಿತ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಹೇಶ ಕಾಶಿ ಮತ್ತು ಪದಾಧಿಕಾರಿಗಳು ಆಗ್ರಹಿಸಿದ್ದಾರೆ.ಈ ಕುರಿತು ಇಲ್ಲಿನ ತಹಶೀಲ್ದಾರ್ ಅವರಿಗೆ ಈಚೆಗೆ ಮನವಿ ಪತ್ರ ಸಲ್ಲಿಸಿರುವ ಅವರು, ನಿಧಿ ಆಸೆಗೆ ಹಳೆಯ ದೇವಾಲಯಗಳಲ್ಲಿ ಭೂಮಿ ಅಗೆಯುವ ಕೆಲಸ ನಿರಂತರ ನಡೆಯುತ್ತಿದೆ. ಅದಕ್ಕೆ ಕಡಿವಾಣ ಹಾಕದಿದ್ದರೆ ಅಳಿದುಳಿದ ಸ್ಮಾರಕಗಳು ಇನ್ನಿಲ್ಲವಾಗುತ್ತವೆ. ಕೆಲವು ಶಿಲಾ ಮೂರ್ತಿಗಳನ್ನು ಮನೆಯಲ್ಲಿ ಇಟ್ಟು­ಕೊಂಡರೆ ಅದೃಷ್ಟ ಖುಲಾಯಿ­ಸುತ್ತದೆ ಎಂದು ನಂಬುವ ಜನರು ಅವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ, ಸಂಬಂಧಿಸಿದ ಇಲಾಖೆ ಯಾವ ಕ್ರಮಕ್ಕೂ ಮುಂದಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.ಪ್ರಾಚ್ಯವಸ್ತು ಇಲಾಖೆ ನಾಗಾಯಿ ಕುರಿತು ಗಮನ ಹರಿಸಿ ಪ್ರಾಚೀನ ಸ್ಮಾರಕಗಳ ರಕ್ಷಣೆಗೆ ಮುಂದಾಗಬೇಕು. ನಿಧಿಗಳ್ಳರ ಹಾವಳಿಗೆ ಕಡಿವಾಣ ಹಾಕಬೇಕು. ಸೂಕ್ತ ರಕ್ಷಣೆಯ ವ್ಯವಸ್ಥೆ ಮಾಡಬೇಕು. ನಾಗಾಯಿ ಪ್ರದೇಶ­ವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.ಮುಂದಿನ ಪೀಳಿಗೆಗಾಗಿ ನಾಗಾಯಿ ಅವಶೇಷ ಉಳಿಸಿಕೊಂಡು ಹೋಗ­ಬೇಕಿದೆ ಎಂದು ಅಧ್ಯಕ್ಷ ಮಹೇಶ ಕಾಶಿ, ಪ್ರಧಾನ ಕಾರ್ಯದರ್ಶಿ ಪರಶುರಾಮ ಕಂದಗಲ್, ತೆಂಗಳಿ ವಲಯ ಅಧ್ಯಕ್ಷ ವಿಶ್ವನಾಥ ಬೆಂಕಿ, ದಿಗ್ಗಾಂವ ವಲಯ ಅಧ್ಯಕ್ಷ ಭಾಸ್ಕರ್ ಭೀಮನಹಳ್ಳಿ, ಗ್ರಾಮ ಘಟಕದ ಅಧ್ಯಕ್ಷ ಬಸವರಾಜ, ನಗರ ಘಟಕದ ಅಧ್ಯಕ್ಷ ಅನೀಲ್ ಸ್ವಾಮಿ, ಸಂಘಟನಾ ಸಂಚಾಲಕ ಚಂದರ ಚವ್ಹಾಣ್, ಮೋಹನ ಕಾಶಿ, ಭೀಮ­ರಾವ ಕಾಶಿ, ರಾಘವೇಂದ್ರ ಕಾಶಿ, ಭ್ರಮಾ­­ನಂದ ಅವರು ಒತ್ತಾಯಿಸಿದ್ದಾರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry