ಬುಧವಾರ, ನವೆಂಬರ್ 13, 2019
28 °C

ನಾಗಾರಾಧನೆಗೆ ಯುಗಾಂತರಗಳ ಐತಿಹ್ಯ: ಸ್ವಾಮೀಜಿ

Published:
Updated:

ಕಮಲಶಿಲೆ (ಸಿದ್ದಾಪುರ):  ನಾಗಾರಾಧನೆ ಕರಾವಳಿ ಜಿಲ್ಲೆಗಳಲ್ಲಿ  ಪ್ರಚಲಿತ ಆರಾಧನೆಯಾದರೂ ಇದಕ್ಕೆ  ಯುಗಾಂತರಗಳ ಐಹಿತ್ಯವಿದೆ. ನಾಗರಾಜನು ತ್ರೇತಾಯುಗದಲ್ಲಿ ಆಂಜನೆಯ ರೂಪನಾಗಿ, ದ್ವಾಪರ ಯುಗದಲ್ಲಿ ಬಲರಾಮನಾಗಿ ಮತ್ತು ಕಲಿಯುಗದಲ್ಲಿ ಶಿಲಾರೂಪಿ ನಾಗರಾಜನಾಗಿ ಗೋಚರಿಸುತ್ತಿದ್ದಾನೆ. ಅವನು ಯುಗಾಂತರವಾಸಿ ಎಂದು ಉಡುಪಿ  ಶಿರೂರು ಮಠದ  ಲಕ್ಷ್ಮೀವರ ತೀರ್ಥ ಸ್ವಾಮೀಜಿ ಹೇಳಿದರು.ಹಳ್ಳಿಹೊಳೆ ಸಮೀಪದ ಬಾಚಗುಳಿ ರಾಥೋಡ್‌ನಲ್ಲಿ ಗುರುವಾರ ನಡೆದ ಚತುಃಪವಿತ್ರ ನಾಗಮಂಡಲೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಮಲಶಿಲೆ, ದೇವಳದ ಧರ್ಮದರ್ಶಿ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಗಾರಾಧನೆ ವಿಶಿಷ್ಟ ಸ್ಥಾನಮಾನವನ್ನು ಹೊಂದಿದೆ. ಭಕ್ತಿಯಿಂದ ದೇವರ ಆರಾಧನೆಯಿಂದ ಜೀವನದಲ್ಲಿ ಮಹತ್ವದ ಬದಲಾವಣೆಗೆ ಸಾಧ್ಯವಿದೆ. ದೇವರಲ್ಲಿ ದೃಢವಾದ ನಂಬಿಕೆ ಇಟ್ಟು ಕಾರ್ಯ ಹಮ್ಮಿಕೊಂಡಾಗ ಯಶಸ್ಸು ಕಾಣಲು ಪಡೆಯಲು ಸಾಧ್ಯ. ಶುದ್ಧ ಮನಸ್ಸಿನಿಂದ ದೇವರನ್ನು ಪ್ರಾರ್ಥಿಸಿದಾಗ ಬದುಕಿನಲ್ಲಿ ಮುಕ್ತಿ ದೊರೆಯುತ್ತದೆ ಎಂದರು.ಎಸ್‌ಎಡಿ ನಿವೃತ್ತ ಕಂಟ್ರೋಲರ್ ಪಿ.ರಾಮಕೃಷ್ಣ ನಾಯ್ಕ, ಜಂಟಿ ಕಂಟ್ರೋಲ್‌ರ ಎಸ್.ಆರ್.ವಾರಂಬಳ್ಳಿ, ಅರಣ್ಯ ಇಲಾಖೆ ನಿವೃತ್ತ ಅಧಿಕಾರಿ ಡಾ.ಕೆ.ಸುಂದರ ನಾಯ್ಕ, ಮಾನಂಜೆ ವಿ.ಎಸ್.ಎಸ್.ಎನ್ ನಿವೃತ್ತ ಜನರಲ್ ಮ್ಯೋನೇಜರ್ ವಿ.ಸತ್ಯನಾರಾಯಣ ರಾವ್, ಕರ್ನಾಟಕ ಮರಾಠಿ ಸಂಘದ ಅಧ್ಯಕ್ಷ ಸಿ.ಟಿ.ನಾಯ್ಕ, ಟಿ.ವಾಸುದೇವ ಜೋಯಿಸ್, ನಾಗಪಾತ್ರಿ ಸಾಸ್ತಾನ ಐರೋಡಿ ಎ.ಸುಬ್ರಮಣ್ಯ ಮಧ್ಯಸ್ಥ, ವೈದ್ಯರಾದ ಸುಬ್ರಮಣ್ಯ ವೈದ್ಯ, ಬಾಚಗುಳಿ ಬಿ.ನಾರಾಯಣ ನಾಯ್ಕ, ಪಿ.ರಾಜೀವಿ, ನಾರಾಯಣ ನಾಯ್ಕ, ಶಂಕರ ನಾಯ್ಕ ದುಡ್ಡಿನಗುಳಿ, ಯು.ರಾಮ ನಾಯ್ಕ, ಉಳಾಲ್‌ಮಠ, ಪಾರ್ವತಿ ದುಡ್ಡಿನಗುಳಿ, ಲಚ್ಚು ನಾಯ್ಕ ಹರ್ಕೋಡು, ಭಾಸ್ಕರ ನಾಯ್ಕ ನೇತ್ರಾಡಿ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.ನಾಗಮಂಡಲೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆದವು. ಬ್ರಹ್ಮಕಲಶತತ್ವ ಪೂಜೆ, ಪ್ರಧಾನ ಹೋಮ, ಬ್ರಹ್ಮಕಲಶಾಭಿಷೇಕ, ವೇದ ಪಾರಾಯಣ, ಬ್ರಾಹ್ಮಣ ವಟು ಸುವಾಸಿನಿ ಆರಾಧನೆ, ಮಹಾಪೂಜೆ, ಪಲ್ಲಪೂಜೆ, ನಾಗದರ್ಶನ, ಮಹಾಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ, ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಸುಗಮ ಸಂಗೀತ ನಡೆದವು.

ಶರತ್ಚಂದ್ರ ನಾಯ್ಕ ಸ್ವಾಗತಿಸಿದರು. ನಾಗರಾಜ ಭಟ್ ವೇದಗೋಣೆ ಮೂಲಕ ಕಾರ್ಯಕ್ರಮ ಆರಂಭವಾಯಿತು. ಉಪನ್ಯಾಸಕ ಪ್ರತಾಪಚಂದ್ರ ಶೆಟ್ಟಿ ಹಳ್ನಾಡು ಕಾರ್ಯಕ್ರಮ ನಿರೂಪಿಸಿದರು. ಸಂತೋಷ ದುಡ್ಡಿನಗುಳಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ನವ್ಯ ಶಿವರಾಮ ವಂದಿಸಿದರು.

ಪ್ರತಿಕ್ರಿಯಿಸಿ (+)