ಸೋಮವಾರ, ಜನವರಿ 27, 2020
17 °C

ನಾಗೇಂದ್ರ ದೀಕ್ಷಿತ್‌ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗೇಂದ್ರ ದೀಕ್ಷಿತ್‌ ನಿಧನ

ಮೈಸೂರು: ಇಲ್ಲಿಗೆ ಸಮೀಪದ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ 45 ವರ್ಷ ಅರ್ಚಕ­ರಾಗಿ ಸೇವೆ ಸಲ್ಲಿಸಿದ್ದ ಎನ್‌. ನಾಗೇಂದ್ರ ದೀಕ್ಷಿತ್‌ (78) ಸೋಮ­ವಾರ ಬೆಳಗಿನ ಜಾವ ಮೃತಪಟ್ಟರು.ಶೀತಜ್ವರದಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.ಅಂತ್ಯಕ್ರಿಯೆ ಚಾಮುಂಡಿ ಬೆಟ್ಟದ ದೇವಿಕೆರೆ ಸಮೀಪದ ಸ್ಮಶಾನ­ದಲ್ಲಿ ಸೋಮ­ವಾರ ಸಂಜೆ ನೆರೆವೇರಿತು. ನಾಲ್ಕು ದಶಕಕ್ಕೂ ಹೆಚ್ಚು ಕಾಲ ಅರ್ಚಕ ಸೇವೆ ಮಾಡಿದ್ದ ನಾಗೇಂದ್ರ ದೀಕ್ಷಿತ್, 2006ರಲ್ಲಿ ಸ್ವಯಂ ನಿವೃತ್ತಿ ಪಡೆದಿ­ದ್ದರು. ದೀಕ್ಷಿತ್‌ ಅವರಿಗೆ ಪತ್ನಿ ಸರೋಜಮ್ಮ, ಪುತ್ರರಾದ ಶಶಿಶೇಖರ್‌ ದೀಕ್ಷಿತ್‌, ಶ್ರೀಧರ್‌ ದೀಕ್ಷಿತ್‌ ಇದ್ದಾರೆ.

ಪ್ರತಿಕ್ರಿಯಿಸಿ (+)