ನಾಚಿಕೆ ಮುಳ್ಳಿನ ಔಷಧಿ

7

ನಾಚಿಕೆ ಮುಳ್ಳಿನ ಔಷಧಿ

Published:
Updated:

ನಾಚಿಕೆ ಎನ್ನುವುದು ಸಾಮಾನ್ಯವಾಗಿ ಮನುಷ್ಯನೂ ಸೇರಿ ಪ್ರಾಣಿಗಳಲ್ಲಿ ಮಾತ್ರ ಕಂಡುಬರುವ ಮನೋಭಾವ. ಆದರೆ ಸಸ್ಯಗಳಲ್ಲೂ ಈ ಗುಣವನ್ನು ನಾವು ಕಾಣಬಹುದು.ಇಂಥ ಸಸ್ಯ ಪ್ರಭೇದಗಳಲ್ಲಿ ಅದರ್ಲ್ಲಲೂ ಪ್ರಮುಖವಾಗಿ ಕಳೆ ಸಸ್ಯಗಳಲ್ಲಿ `ಮುಟ್ಟಿದರೆ ಮುನಿ~ ಪ್ರಮುಖವಾದುದು. ಆಕರ್ಷಕ ಹೂವನ್ನು ಹೊಂದಿರುವ ಇದು ನೋಡಲು ಸುಂದರವಾಗಿದೆ. ಆದರೆ ಬಹಳ ಸೂಕ್ಷ್ಮ ವಾದ ಮುಳ್ಳುಗಳನ್ನು ಹೊಂದಿದೆ.

 

ಹೀಗಿದ್ದೂ ಅನೇಕ ರೀತಿಯಲ್ಲಿ ಉಪಯುಕ್ತವಾಗಿದೆ. ಇದನ್ನು ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ. ಸಸ್ಯ ಶಾಸ್ತ್ರದಲ್ಲಿ ಮಿಮೋಸ ಪುಡಿಕಾ ಲಿನ್ನ್  ಎಂಬ ಹೆಸರು ಹೊಂದಿದ್ದು,  ಕನ್ನಡದಲ್ಲಿ `ನಾಚಿಕೆ ಮುಳ್ಳು~~, ಹಿಂದಿಯಲ್ಲಿ `ಲಾಜ್‌ವಂತಿ~, ಸಂಸ್ಕೃತದಲ್ಲಿ `ಲಜ್ಜಾ~ ಎಂದೂ ಕರೆಯಲಾಗುತ್ತದೆ.ಇದು ಹೆಚ್ಚಾಗಿ ಪಾಳು ಜಾಗದಲ್ಲಿ, ಹೊಲಗದ್ದೆಗಳ ಬದುವಿನಲ್ಲಿ ಮತ್ತು ತೋಟದ ನೀರಾವರಿ ಭೂಮಿಯಲ್ಲಿ ಹುಲುಸಾಗಿ ಬಳ್ಳಿಯಂತೆ ಬೆಳೆಯುತ್ತದೆ. ವಿಶಾಲವಾಗಿ ಹಬ್ಬುವ, ಗಟ್ಟಿಯಾಗಿ ಬೇರು ಬಿಡುವ ಗುಣದ ನಾಚಿಕೆ ಮುಳ್ಳು ಗಿಡವನ್ನು  ಮುಟ್ಟಿದೊಡನೆ ಇದರ ಎಲೆಗಳು ಮುಚ್ಚಿಕೊಳ್ಳುವುದರಿಂದ ಸುಲಭವಾಗಿ ಗುರುತಿಸಬಹುದು.ಉಪಯೋಗ

ಮುಟ್ಟಿದರೆ ಮುನಿ ಸಸ್ಯದ ಎಲ್ಲಾ ಭಾಗವೂ ಮನೆ ಔಷಧಿ ತಯಾರಿಕೆಗೆ ಬಹಳ ಉಪಯುಕ್ತವಾದುದು. ಗಂಟಲು ಬಾವು ಮತ್ತು ಇತರೆ ಬಾವುಗಳಿಂದ ತೊಂದರೆ ಅನುಭವಿಸುತ್ತಿರುವವರು ಇದರ ಕಾಂಡ, ಎಲೆಯನ್ನು ಚೆನ್ನಾಗಿ ಅರೆದು ಬಾವು ಆಗಿರುವ ಜಾಗದಲ್ಲಿ ಪಟ್ಟು ಹಾಕಬೇಕು.

 

ಇದರಿಂದ ನೋವು ಮತ್ತು ಬಾವಿನಿಂದಾದ ಊತದ ಉಪಶಮನ ಸಾಧ್ಯವಾಗುತ್ತದೆ. ಎಲೆ ಮತ್ತು ಬೇರುಗಳನ್ನು ಚೆನ್ನಾಗಿ ಅರೆದು ಕುಡಿಸುವುದು ಮಂಡಿನೋವು, ಮಂಡಿ ಊತ, ಮಲಬದ್ಧತೆ, ಮೂತ್ರಪಿಂಡ ಹಾಗೂ ಲಿವರ್‌ನ ತೊಂದರೆಗೆ ಉತ್ತಮ ಔಷಧ.

ಕಷಾಯ ವಿಧಾನಹೊಟ್ಟೆಗೆ ಸೇವನೆ ಮಾಡುವಾಗ, ಒಂದು ಲೋಟ ನೀರಿಗೆ ಮೂರು ಚಮಚ ಕಷಾಯದಂತೆ ತೆಗೆದುಕೊಳ್ಳಬೇಕು. ಈ ರೀತಿಯ ಎಚ್ಚರಿಕೆ ವಹಿಸುವುದರಿಂದ ಅಡ್ಡ ಪರಿಣಾಮ ತಡೆಯಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry