ಶನಿವಾರ, ಮೇ 15, 2021
22 °C

ನಾಟಕಗಳಿಂದ ಜ್ಞಾಪಕ ಶಕ್ತಿ ವೃದ್ಧಿ: ರಾಮನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ನಾಟಕಗಳಿಂದ ಶಾಲಾ-ಕಾಲೇಜು ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ~ ಎಂದು ಹಿರಿಯ ರಂಗಕರ್ಮಿ ಡಾ.ಎಚ್.ಕೆ.ರಾಮನಾಥ್ ಅಭಿಪ್ರಾಯಪಟ್ಟರು.ನಾದಬ್ರಹ್ಮ ಸಂಗೀತ ಸಭಾದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಆರ್.ಎಸ್. ವಾಸುದೇವಮೂರ್ತಿ (ಅಮರ ಕಲಾ ಸಂಘ) ನೆನಪಿನ ಜಿಲ್ಲಾ ನಾಟಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.`ನಾಟಕಗಳಲ್ಲಿ ಅಭಿನಯಿ ಸುವುದರಿಂದ ಭಾಷಾ ಶುದ್ಧತೆ, ಸಾಹಿತ್ಯ ಬೆಳವಣಿಗೆ, ಸಂಘಟನಾ ಶಕ್ತಿ ಹೆಚ್ಚಾಗುತ್ತದೆ. ಜ್ಞಾಪಕಶಕ್ತಿ ಹೆಚ್ಚಿಸುವಲ್ಲಿ ನಾಟಕಗಳ ಪಾತ್ರ ಬಹು ಮುಖ್ಯವಾಗಿದೆ. ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವ ಇಂತಹ ಸಂದರ್ಭದಲ್ಲಿ ಶಿಕ್ಷಕರು, ಪೋಷಕರು ಮಕ್ಕಳಿಗೆ ನಾಟಕದಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡಬೇಕು~ ಎಂದು ಆಶಿಸಿದರು.`ವಾಸುದೇವಮೂರ್ತಿ ಬದ್ಧತೆ, ನಿಷ್ಠೆ, ಪ್ರಾಮಾಣಿಕತೆಗೆ ಹೆಸರಾಗಿದ್ದರು. ಮಕ್ಕಳಿಗಾಗಿ ಅನೇಕ ನಾಟಕ ಸ್ಪರ್ಧೆಗಳನ್ನು ಆಯೋಜಿಸಿದ್ದರು. ಅಮರ ಕಲಾ ಸಂಘವನ್ನು ಸುಮಾರು 50 ವರ್ಷಗಳ ಕಾಲ ನಡೆಸಿಕೊಂಡು ಬಂದಿರುವ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ನಟ, ನಿರ್ದೇಶಕ, ಪ್ರಸಾಧನ ತಜ್ಞರಾಗಿದ್ದ ವಾಸು ಆದರ್ಶ ರಂಗಕರ್ಮಿಯೂ ಆಗಿದ್ದರು~ ಎಂದು ಹೇಳಿದರು.ಬಾಸುದೇವ ಸೋಮಾನಿ ಕಾಲೇಜಿನ ಪ್ರಾಂಶುಪಾಲ ಎಸ್.ಆರ್.ರಮೇಶ ಮಾತನಾಡಿ, `ಮಕ್ಕಳ ಮೂಲಕ ರಂಗಭೂಮಿಗೆ ಹೊಸ ಚೈತನ್ಯ ನೀಡಬೇಕಾಗಿದೆ. ಕರ್ನಾಟಕ ನಾಟಕ ಅಕಾಡೆಮಿ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಂಡು ನಾಟಕಗಳನ್ನು ಪ್ರದರ್ಶಿಸುತ್ತಿರುವುದು ಸ್ತುತ್ಯಾರ್ಹ. ಬದಲಾಗುತ್ತಿರುವ ಸಮಾಜದಲ್ಲಿ ರಂಗ ಚಟುವಟಿಕೆಗಳಲ್ಲೂ ಸೃಜನಾತ್ಮಕತೆ ಅಳವಡಿಸುವ ಮೂಲಕ ಹೊಸತನಕ್ಕೆ ತೆರೆದುಕೊಳ್ಳಬೇಕು~ ಎಂದು ಅಭಿಪ್ರಾಯಪಟ್ಟರು.ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಸಂಚಾಲಕ ನಾ.ನಾಗಚಂದ್ರ ಉಪಸ್ಥಿತರಿದ್ದರು.

ಮೂರು ದಿನಗಳ ಕಾಲ ನಾಟಕೋತ್ಸವ ನಡೆಯಲಿದ್ದು, ಮೊದಲ ದಿನ ಸುರುಚಿ ರಂಗಮನೆಯ ಕಲಾ ಸುರುಚಿ ಬಳಗದ ವಿಜಯಾ ಸಿಂಧುವಳ್ಳಿ ಮಾರ್ಗದರ್ಶನದ `ಹೂವಿ~ ನಾಟಕವನ್ನು ಮಕ್ಕಳು ಪ್ರಸ್ತುತ ಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.