ನಾಟಕದಿಂದ ದೂರವಾಗಲು ಟಿವಿ ಕಾರಣ

7

ನಾಟಕದಿಂದ ದೂರವಾಗಲು ಟಿವಿ ಕಾರಣ

Published:
Updated:

ಮೈಸೂರು: ಟಿವಿ, ಐಪಾಡ್‌ಗಳು ಬಂದ ಮೇಲೆ ಜನರು ಸಿನೆಮಾ ಮತ್ತು ರಂಗಭೂಮಿಯಿಂದ ದೂರವಾ ಗಿದ್ದಾರೆ ಎಂದು ಕೇಂದ್ರ ಆಹಾರ ತಂತ್ರಜ್ಞಾನ ಸಂಸ್ಥೆಯ ಹಣಕಾಸು ನಿಯಂತ್ರಣಾಧಿಕಾರಿ ಎಂ.ಎಸ್. ವೈದ್ಯನಾಥನ್ ಹೇಳಿದರು.ಸಿಎಫ್‌ಟಿಆರ್‌ಐನ ಸಹೃದಯ ಬಳಗದ ವಾರ್ಷಿಕೋತ್ಸವದ ಅಂಗ ವಾಗಿ ಶುಕ್ರವಾರ ಆಯೋಜಿಸಲಾಗಿದ್ದ ಗುರು ಸಂಸ್ಥೆ ಹುಬ್ಬಳ್ಳಿಯ ಸಹ ಯೋಗದಲ್ಲಿ ಆಯೋಜಿಸಲಾಗಿರುವ ಮಯ್ಯಸ್ ರಂಗಾವಳಿ ನಾಟಕೋತ್ಸವ ಉದ್ಘಾಟನೆ ಸಮಾರಂಭದ ಅತಿಥಿ ಯಾಗಿದ್ದ ಅವರು ಮಾತನಾಡಿದರು.ಕಾರ್ಯಕ್ರಮ ಉದ್ಘಾಟಿಸಿದ ಜಿ.ವೆಂಕಟೇಶ್ವರ, `ಸಂಸ್ಥೆಯ ಕನ್ನಡೇತರರಿಗೆ ಕನ್ನಡ ಕಲಿಸುವ ಮತ್ತು ಕನ್ನಡ ಜಾಗೃತಿ ಮೂಡಿಸುವ ಕೆಲಸವನ್ನು ಸಹೃದಯ ಬಳಗ ಮಾಡುತ್ತಿದೆ~ ಎಂದು ಹೇಳಿದರು.ಈ ಸಂದರ್ಭದಲ್ಲಿ ನಿಯಂತ್ರಣಾಧಿ ಕಾರಿ ಎಂ.ಎಸ್. ವೈದ್ಯನಾಥನ್, ರಂಗಧಾಮಯ್ಯ, ಗುರು ಸಂಸ್ಥೆಯ ಗುರು, ಯಶವಂತ ಸರದೇಶಪಾಂಡೆ ಮತ್ತಿತರರು ಹಾಜರಿದ್ದರು.ರಾಶಿಚಕ್ರ: ರಾಶಿ ಭವಿಷ್ಯಗಳ ಸುತ್ತ ಇರುವ ಸ್ವಾರಸ್ಯಗಳನ್ನು ಎಳೆಎಳೆ ಯಾಗಿ ಬಿಡಿಸಿಟ್ಟ `ರಾಶಿಚಕ್ರ~ ಪ್ರಯೋ ಗವನ್ನು ಶುಕ್ರವಾರ ರಾತ್ರಿ ಪ್ರದರ್ಶಿ ಸಲಾಯಿತು. ಏಕವ್ಯಕ್ತಿ ಪ್ರದರ್ಶನ ನೀಡಿದ ಯಶವಂತ ಸರದೇಶಪಾಂಡೆ ಪ್ರೇಕ್ಷಕರನ್ನು ಸುಮಾರು ಎರಡೂವರೆ ತಾಸು ನಗೆಗಡಲಲ್ಲಿ ತೇಲಿಸಿದರು. ಜನ್ಮರಾಶಿಗಳ ಸುತ್ತ ಇರುವ ಕೌತುಕ ಮತ್ತು ವಿವರಣೆಗಳನ್ನು ಮನಮುಟ್ಟುವಂತೆ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry