ನಾಟಕದ ಹೊರತು ಬದುಕಿಲ್ಲ

7

ನಾಟಕದ ಹೊರತು ಬದುಕಿಲ್ಲ

Published:
Updated:
ನಾಟಕದ ಹೊರತು ಬದುಕಿಲ್ಲ

ಏನಿದು ಅಂತರರಾಷ್ಟ್ರೀಯ ನಾಟಕೋತ್ಸವ?

ರಂಗಶಂಕರ ಮೊತ್ತಮೊದಲ ಬಾರಿಗೆ ಅಂತರರಾಷ್ಟ್ರೀಯ ನಾಟಕೋತ್ಸವ ನಡೆಸಲು ನಿರ್ಧರಿಸಿದೆ. ಶೇಕ್ಸ್‌ಪಿಯರ್ ಐನೂರನೇ ವರ್ಷಾಚರಣೆ ಪ್ರಯುಕ್ತ ಲಂಡನ್‌ನಲ್ಲಿ `ಗ್ಲೋಬ್ ಟು ಗ್ಲೋಬ್~ ಎಂಬ ಅಂತರರಾಷ್ಟ್ರೀಯ ನಾಟಕೋತ್ಸವ ನಡೆಸಿದ್ದರು. ಅಲ್ಲಿ ಪಾಲ್ಗೊಂಡ ದೇಶದ ಗುಜರಾತಿ ಹಾಗೂ ಹಿಂದಿ ತಂಡಗಳೂ ಸೇರಿದಂತೆ ದಕ್ಷಿಣ ಸೂಡಾನ್, ಕೀನ್ಯಾ, ಜಾರ್ಜಿಯಾ, ಬಾಂಗ್ಲಾದೇಶದ ತಂಡಗಳು ಶೇಕ್ಸ್‌ಪಿಯರ್‌ನ ನಾಟಕಗಳನ್ನು ಈ ಉತ್ಸವದಲ್ಲಿ ಪ್ರದರ್ಶಿಸಲಿವೆ. ಇದರೊಂದಿಗೆ ಕನ್ನಡದ ನಿರ್ದೇಶಕರ ಹ್ಯಾಮ್ಲೆಟ್ (ನಿರ್ದೇಶನ, ನಟನೆ: ಶ್ರೀನಿವಾಸ ಪ್ರಭು) ಹಾಗೂ ಲೇಡಿ ಮ್ಯಾಕ್‌ಬೆತ್ (ನಿರ್ದೇಶನ, ನಟನೆ: ಲಕ್ಷ್ಮೀಚಂದ್ರಶೇಖರ್) ಪ್ರದರ್ಶನ ಕಾಣಲಿವೆ. ಲಂಡನ್‌ನಲ್ಲಿ ನಡೆದ ಉತ್ಸವದಲ್ಲಿ ಪಾಲ್ಗೊಳ್ಳಲು ಕನ್ನಡ ರಂಗಭೂಮಿಗೆ ಅವಕಾಶ ದೊರೆತಿರಲಿಲ್ಲ. ನಾಟಕೋತ್ಸವದ ವಿಶೇಷಗಳೇನು?

ಎಂಟು ಭಾಷೆಗಳಲ್ಲಿ, ಇಂಗ್ಲಿಷ್ ಸಬ್‌ಟೈಟಲ್ ಸಹಿತ ನಾಟಕ ಪ್ರದರ್ಶನಗೊಳ್ಳಲಿದೆ. ಕಲೆ ಮತ್ತು ನಾಟಕ ರಸಗ್ರಹಣ ಶಿಬಿರ ನಡೆಯಲಿದ್ದು, ಸದಾನಂದ ಮೆನನ್, ಗಿರೀಶ್ ಕಾರ್ನಾಡ್, ಅಶೋಕ್ ವಾಜಪೇಯಿ, ಗಿರೀಶ್ ಕಾಸರವಳ್ಳಿ, ಎಸ್.ಜಿ. ವಾಸುದೇವ್, ಉದಯ್ ಭವಳ್ಕರ್, ಲಿನ್ ಫರ್ನಾಂಡಿಸ್, ಸುರೂಪ ಸೇನ, ಬಿಜಯಿನಿ ಸತ್ಪತಿ ಮತ್ತು ಅನ್ಮೋಲ್ ವೆಲ್ಲಾನಿ ಉಪನ್ಯಾಸಕರಾಗಿರುವರು. ಮಕ್ಬೂಲ್-ವಿಶಾಲ್ ಭಾರದ್ವಾಜ್ ನಿರ್ದೇಶಿಸಿರುವ ಮ್ಯಾಕ್‌ಬೆತ್ ನಾಟಕ ಆಧಾರಿತ ಚಲನಚಿತ್ರವೂ ಪ್ರದರ್ಶನಗೊಳ್ಳಲಿದೆ.ಶಂಕರ್‌ನಾಗ್ ಹೆಸರಿನಲ್ಲಿ ಪ್ರಶಸ್ತಿ ಕೊಡುವ ಯೋಜನೆ ಇದೆಯೇ?

(ನಗುತ್ತಾ) ಯಾವುದಕ್ಕೆ ಕೊಡಲಿ? ನಟನೆಗೋ, ನಿರ್ದೇಶನಕ್ಕೋ? ಇಲ್ಲ, ಇನ್ನೂ ಆ ಬಗ್ಗೆ ಯೋಚಿಸಿಲ್ಲ. ಈ ವರ್ಷದಿಂದ ಅಂತರಶಾಲಾ ಸ್ಪರ್ಧೆ ಏರ್ಪಡಿಸಿ ಮಕ್ಕಳಿಗೆ ಪ್ರಶಸ್ತಿ ನೀಡಬೇಕೆಂದಿದ್ದೇನೆ. ಯಾಕೆಂದರೆ ನಾನು ಶಂಕರ್‌ನನ್ನು ಮೊದಲು ಭೇಟಿಯಾಗಿದ್ದು ಅಂತರಕಾಲೇಜು ಉತ್ಸವದಲ್ಲಿ.ಕನ್ನಡ ರಂಗಭೂಮಿಯ ಗುಣಮಟ್ಟ ಕುಸಿಯುತ್ತಿದೆ ಎಂಬ ಮಾತು ಕೇಳಿಬರುತ್ತಿದೆಯಲ್ಲಾ?

ನನಗೇನೋ ಹಾಗೆನಿಸುವುದಿಲ್ಲ. ಮುನ್ನೂರು ಮಂದಿ ಏಕಕಾಲದಲ್ಲಿ ಕುಳಿತು ನೋಡಬಹುದಾದ ಥಿಯೇಟರ್ ಕಟ್ಟಿದ್ದೇನೆ. ಸೋಮವಾರದ ಹೊರತಾಗಿ ವಾರದ ಎಲ್ಲಾ ದಿನಗಳಲ್ಲಿ ಕನ್ನಡ ನಾಟಕಗಳೇ ಪ್ರದರ್ಶನಗೊಳ್ಳುತ್ತವೆ.  ಈ ತಂಡಗಳನ್ನೆಲ್ಲಾ ನಾವು ಹುಟ್ಟುಹಾಕುತ್ತಿಲ್ಲವಲ್ಲ. ಪ್ರತಿನಿತ್ಯ ಥಿಯೇಟರ್‌ನ ಎಲ್ಲಾ ಕುರ್ಚಿಗಳೂ ತುಂಬಿರುತ್ತವೆ. ಈ ವಾದ ಸುಳ್ಳೆನ್ನಲು  ಬೇರೆ ನಿದರ್ಶನ ಬೇಕಿಲ್ಲವಲ್ಲಾ. ಸಿನಿಮಾ ಮಾಡುವ ಉದ್ದೇಶವಿದೆಯೇ?

ಖಂಡಿತ ಇಲ್ಲ. ನಾನು ರಂಗಭೂಮಿಯಿಂದ ಬಂದವಳು. ನಾಟಕದ ಹೊರತಾಗಿ ನನಗೆ ಬೇರೆ ಬದುಕಿಲ್ಲ. ಸಿನಿಮಾ ನಟನೆಗಷ್ಟೇ ಸೀಮಿತ. ರಂಗಶಂಕರದಲ್ಲಿ ಒಂದು ನಾಟಕದ ಪ್ರದರ್ಶನದ ಬೆಲೆ 2000 ರೂಪಾಯಿ.ಕಲೆ ಯಾವತ್ತಿಗೂ ಸಾಮಾನ್ಯರ ಕೈಗೆಟಕುವಂತಿರಬೇಕು. ಹೇಳುವುದಿಷ್ಟೇ- ಇದು ಯುವಕರೂ ನೋಡಬಹುದಾದ ನಾಟಕ ಹಬ್ಬ. ಬನ್ನಿ, ನಮ್ಮಂದಿಗೆ ಕೈಜೋಡಿಸಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry