ಮಂಗಳವಾರ, ನವೆಂಬರ್ 19, 2019
27 °C

`ನಾಟಕ ಜನಜಾಗೃತಿಯ ಪ್ರಬಲ ಮಾಧ್ಯಮ'

Published:
Updated:

ಶಿರಸಿ: ನಾಟಕ ಜನರನ್ನು ಜಾಗೃತಿ ಗೊಳಿಸುವ ತಲುಪುವ ಪ್ರಬಲ ಮಾಧ್ಯಮವಾಗಿದ್ದು, ಕಲಾತ್ಮಕ ಅಂಶಗಳಿಂದ ರಂಗಭೂಮಿ ಬಹುಬೇಗ ಸಂವಹನ ಸಾಧಿಸುತ್ತದೆ ಎಂದು ಪತ್ರಕರ್ತ ಅಶೋಕ ಹಾಸ್ಯಗಾರ ಹೇಳಿದರು.ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, `ಮಿಯಾರ್ಡ್ಸ್' ಮೇದಿನಿ ರಂಗ ಅಧ್ಯಯನ ಕೇಂದ್ರ, ಸ್ಕೋಡ್‌ವೆಸ್, ಅಂಕಸಂಸಾರ, ರಂಗ ಬಳಗ ಮತ್ತಿಘಟ್ಟ, ಜೀವನ್ಮುಖಿ, ಚಿಂತನ ಉತ್ತರ ಕನ್ನಡ, ನಾವು-ನೀವು ಬಳಗ, ಗೋಳಿ ಸಿದ್ಧಿ ವಿನಾಯಕ ನಾಟ್ಯಸಂಘ, ರಂಗ ಚರಿತ ಸೋಂದಾ, ಆಳ್ವಾಸ್ ನುಡಿಸಿರಿ ವಿರಾಸತ್ ಶಿರಸಿ ಘಟಕ, ಒಡ್ಡೋಲಗ ರಂಗ ಪರ್ಯಟನ ಹಿತ್ಲಕೈ, ಎಂಇಎಸ್ ವಾಣಿಜ್ಯ ಕಾಲೇಜು ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉತ್ತರ ಕನ್ನಡ ಜಿಲ್ಲೆ ಪ್ರಾಚೀನ ರಂಗಭೂಮಿ ಮತ್ತು ಆಧುನಿಕ ರಂಗಭೂಮಿ ಎರಡನ್ನೂ ಪೋಷಿಸಿಕೊಂಡು ಬಂದ ಜಿಲ್ಲೆಯಾಗಿದೆ ಎಂದರು.ಈ ಸಂದರ್ಭದಲ್ಲಿ ಗೋಳಿ ಸಿದ್ಧಿವಿನಾಯಕ ನಾಟ್ಯಸಂಘದಲ್ಲಿ ಹಿರಿಯ ರಂಗಕರ್ಮಿಯಾಗಿ ಕಾರ್ಯನಿರ್ವಹಿಸಿದ ಹೊಸ್ಮನೆ ಸುಬ್ಬಣ್ಣ  (ಸುಬ್ರಾಯ ನಾರಾಯಣ ಭಟ್ಟ) ಮತ್ತು ಸಾವಿರಕ್ಕಿಂತ ಹೆಚ್ಚಿನ  ಸಾಮಾಜಿಕ ನಾಟಕಗಳಲ್ಲಿ ಸ್ತ್ರೀಪಾತ್ರ ನಿರ್ವಹಿಸಿದ ರೇಣುಕಾ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.ಎಂಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ, ಮಿಯಾರ್ಡ್ಸ್ ಮೇದಿನಿ ರಂಗ ಅಧ್ಯಯನ ಕೇಂದ್ರದ ಅಧ್ಯಕ್ಷ ನಾರಾಯಣ ಹೆಗಡೆ ಗಡಿಕೈ, ಪ್ರೊ. ರವಿ ನಾಯಕ, ಡಾ. ಪ್ರಕಾಶ ಗರುಡ, ರಂಗಕರ್ಮಿ ಕೆ.ಆರ್. ಪ್ರಕಾಶ ಮಾತನಾಡಿದರು.

ರಂಗಕರ್ಮಿ ಶ್ರೀಪಾದ ಭಟ್ಟ ರಂಗಗೀತೆ ಹಾಡಿದರು. ಪ್ರಕಾಶ ಭಾಗವತ ಸ್ವಾಗತಿಸಿದರು. ಮಾನಸಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಎಂ.ಎಂ. ಭಟ್ಟ ವಂದಿಸಿದರು.ಒಡ್ಡೋಲಗ ರಂಗ ಪರ್ಯಟನ ಹಿತ್ಲಕೈ ತಂಡದಿಂದ ದಾರಿಯೋಪೋನ ರಚಿತ ಒನ್‌ವಾಸ್ ನ್ಯೂಡ್ ಒನ್ ಓರ್‌ಟೇಲ್ಸ್ ನಾಟಕ ಆಧರಿತ 'ಗಾರ್ಬೆಜ್ ಸಿಟಿಯಲ್ಲಿ ಬೆತ್ತಲೆ ಮನುಷ್ಯ' ನಾಟಕ ಡಾ. ಪ್ರಕಾಶ ಗರುಡ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.ಒಡ್ಡೋಲಗದ ಪ್ರಮುಖ ಗಣಪತಿ ಹಿತ್ಲಕೈ ಅವರನ್ನು ಎಲ್.ಎಂ. ಹೆಗಡೆ ಗೋಳಿಕೊಪ್ಪ ಹಾಗೂ ಕನ್ನೇಶ ನಾಯ್ಕ ಕೋಲಸಿರ್ಸಿ ಗೌರವಿಸಿದರು.

ಪ್ರತಿಕ್ರಿಯಿಸಿ (+)