ಮಂಗಳವಾರ, ಮೇ 11, 2021
25 °C

ನಾಟಕ ಪ್ರತಿಭಟನೆ ಅಸ್ತ್ರವಾಗಲಿ: ಮಂಡ್ಯ ರಮೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಜನರಿಗೆ ಮನಸ್ಸು ತಟ್ಚಟುವ ಸಾಮರ್ಥ್ಯ ಇರುವ ನಾಟಕವನ್ನು ಅನ್ಯಾಯ, ಅಕ್ರಮಗಳ ವಿರುದ್ಧದ ಪ್ರತಿಭಟನೆಯ ಅಸ್ತ್ರವನ್ನಾಗಿ ಬಳಸಿಕೊಳ್ಳಬೇಕು ಎಂದು ಚಿತ್ರನಟ ಮಂಡ್ಯ ರಮೇಶ್ ಅಭಿಪ್ರಾಯಪಟ್ಟರು.  ತಾಲ್ಲೂಕಿನ ನೆಲಮನೆಯಲ್ಲಿ ಭಾನುವಾರ ರಾತ್ರಿ ಗ್ರಾಮರಂಗ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ `ಚೋರ ಚರಣದಾಸ~ ನಾಟಕ ಪ್ರದರ್ಶನ ಹಾಗೂ ಶ್ರೀ ವಿನಾಯಕ ಸ್ಪೋರ್ಟ್ಸ್ ಮತ್ತು ರಿಕ್ರಿಯೇಷನ್ ಕ್ಲಬ್ ಉದ್ಘಾಟಿಸಿ ಅವರು ಮಾತನಾಡಿದರು. ನಾಟಕ ಜನಜಾಗೃತಿ ವಸ್ತುವನ್ನು ಇಟ್ಟುಕೊಂಡು ಯುವಕರನ್ನು ಬಡಿದೆಬ್ಬಿಸಬೇಕು ಎಂದು ಹೇಳಿದರು.  ಚೋರ ಚರಣದಾಸ ನಾಟಕ ಇದುವರೆಗೆ 93 ಪ್ರದರ್ಶನ ಕಂಡಿದೆ. ಕಿರು ತೆರೆಯ ನಟ ಲೋಕೇಶ್ ಅಗಸನಕಟ್ಟೆ ಇತರರು ನಾಟಕದಲ್ಲಿ ಮನೋಜ್ಞ ಅಭಿನಯದ ಮೂಲಕ ರಸದೌತಣ ನೀಡುತ್ತಿದ್ದಾರೆ.ಜಾನಪದ ಕತೆ ಆಧಾರಿತ ಈ ನಾಟಕದಲ್ಲಿ ಕಳ್ಳನ ಸತ್ಯಸಂಧತೆ ಮುಖ್ಯ ವಸ್ತುವಾಗಿದ್ದು, ಜಾಗೃತಿ ಮೂಡಿಸುವ ನಾಟಕವಾಗಿದೆ ಎಂದರು. ಪಾಂಡವಪುರ ಗ್ರಾಮರಂಗ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಚಂದ್ರಶೇಖರಯ್ಯ, ತಿಮ್ಮೇಗೌಡ, ಕೆ.ಜೆ.ರವಿಶಂಕರ್, ಎನ್.ಎಂ.ಶ್ರೀಕಂಠು ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.