ನಾಟಕ ಬೆಂಗ್ಳೂರು

7

ನಾಟಕ ಬೆಂಗ್ಳೂರು

Published:
Updated:

ಅದು 2008ನೇ ಇಸ್ವಿ. ರವೀಂದ್ರ ಕಲಾಕ್ಷೇತ್ರ ಕ್ಯಾಂಟೀನ್ ಬಳಿ ಸಂಜೆಗತ್ತಲಲ್ಲಿ ಒಂದಷ್ಟು ರಂಗಗೆಳೆಯರ ಹರಟೆ ಸಾಗಿತ್ತು. ಮಾತಿನ ನಡುವೆ ಮೊಳೆತದ್ದು ‘ನಾಟಕ ಬೆಂಗ್ಳೂರು’. ನಾಟಕೋತ್ಸವದ ಚಿಂತನೆ ಇಂದು ಕನ್ನಡ ರಂಗಭೂಮಿಗೊಂದು ಪ್ರೇರಕ ಶಕ್ತಿಯಾಗಿದೆ. ‘ನಾಟಕ ಬೆಂಗ್ಳೂರು ರಂಗಭೂಮಿ ಸಂಭ್ರಮ’ ಒಂದು ವಿಭಿನ್ನವಾದ, ಬಹುಮುಖ್ಯವಾದ ರಂಗ ಚಳವಳಿ. ಹೊಸ ಪ್ರಯೋಗಗಳೊಟ್ಟಿಗೆ, ಹೊಸ ಪ್ರೇಕ್ಷಕರನ್ನು ಒಳಗೊಳ್ಳುವ ಇಂದಿನ ತುರ್ತಿಗೆ ಸ್ಪಂದಿಸುವ ನಾಟಕೋತ್ಸವವಾಗಿ ರೂಪಗೊಳ್ಳುತ್ತ ಸಾಗುತ್ತಿದೆ. ಹಳತು ಹೊಸತು ರಂಗತಂಡಗಳು ಕಲೆತು ಸಹಕಾರಿ ತತ್ವದ ಆಧಾರದಲ್ಲಿ ವರ್ಷಕ್ಕೊಂದು ಹೊಸ ಪ್ರಯೋಗ ನೀಡುವ, ವರ್ಷವಿಡೀ ನಾಟಕ ಪ್ರದರ್ಶನ ನೀಡುವ, ಬಡಾವಣೆಗಳತ್ತ ಪಯಣ ಬೆಳೆಸಿ ನಾಟಕಗಳು ಪ್ರೇಕ್ಷಕರ ಬಳಿಗೆ ಹೋಗಬೇಕೆನ್ನುವ ಆಶಯದೊಂದಿಗೆ ಈ ಉತ್ಸವ ಆರಂಭವಾದಾಗ ಒಟ್ಟಾಗಿ ಇದ್ದುದು 17 ರಂಗ ತಂಡಗಳು. 2009ರಲ್ಲಿ ಮೊದಲ ಬಾರಿಗೆ 15 ನಾಟಕಗಳು ಪ್ರದರ್ಶನಗೊಂಡು, ಮರುವರ್ಷ 16 ರಂಗತಂಡಗಳು ಉತ್ಸವದ ಯಶಸ್ಸಿಗೆ ಶ್ರಮಿಸಿವೆ. ಅಪರಿಮಿತ ಆಸಕ್ತಿ, ಉತ್ತಮ ನಾಟಕಗಳನ್ನಾಡುವ ಬದ್ಧತೆ, ಪ್ರೇಕ್ಷಕರನ್ನು ತಲುಪುವ ಬಯಕೆ ಈ ಉತ್ಸಾಹಿ ತಂಡಗಳದ್ದು.ಈ ಬಾರಿಯ ನಾಟಕ ಬೆಂಗ್ಳೂರು ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ, ರಾಷ್ಟ್ರೀಯ ನಾಟಕ ಶಾಲೆ, ಪ್ರಾದೇಶಿಕ ಸಂಪನ್ಮೂಲ ಕೇಂದ್ರ ಬೆಂಗಳೂರು, ವಾರ್ತಾ ಇಲಾಖೆ ಸಹಕಾರ ನೀಡಿವೆ. ಮಂಗಳವಾರದಿಂದ ಫೆ. 22ರ ವರೆಗೆ ಒಟ್ಟು ಏಳು ತಂಡಗಳು ಪ್ರದರ್ಶನ ನೀಡಲಿವೆ.ಮುದ್ದಣ್ಣನ ಪ್ರಮೋಷನ್, ನಾಯೀಕತೆ

ಮಂಗಳವಾರ ಶಿವರಂಗ ತಂಡದಿಂದ ‘ಮುದ್ದಣ್ಣನ ಪ್ರಮೋಷನ್ ಪ್ರಸಂಗ’ (ರಚನೆ, ರಂಗರೂಪ: ರಾಜೇಂದ್ರ ಕಾರಂತ. ನಿ: ಮೈಕೊ ಶಿವಣ್ಣ) ಹಾಸ್ಯ ನಾಟಕ. ಪ್ರಾಮಾಣಿಕತೆಗೆ ಬೆಲೆಯಿಲ್ಲದ ಈ ದಿನಗಳಲ್ಲಿ ಮುಗ್ಧ ಮುದ್ದಣ್ಣ ಪ್ರಮೋಷನ್ ಪಡೆಯಲು ಪಡುವ ಪರದಾಟ ನಾಟಕದ ವಸ್ತು.ಬುಧವಾರ ಸಮಷ್ಟಿ ತಂಡದಿಂದ ‘ನಾಯೀಕತೆ’ (ರಚನೆ: ಚಂದ್ರಶೇಖರ ಕಂಬಾರ. ನಿ: ರವೀಂದ್ರ ಪೂಜಾರಿ) ನಾಟಕ. ಉತ್ತರ ಕರ್ನಾಟಕದ ಭಾಷೆ, ಜಾನಪದ ಸೊಗಡಿನ, ಸಂಗೀತ ಪ್ರಧಾನವಾದ ಈ ನಾಟಕ ಪ್ರೀತಿ, ಶ್ರೀಮಂತಿಕೆಯ ದ್ವಂದ್ವಗಳ ಹಿನ್ನೆಲೆಯಲ್ಲಿ ದೊಂಬಿದಾಸರ ಬದುಕನ್ನು ಚಿತ್ರಿಸುತ್ತದೆ.ಸ್ಥಳ: ರಂಗಶಂಕರ, ಜೆ ಪಿ ನಗರ 2ನೇ ಹಂತ.

ಸಂಜೆ 7.30.

ಮಾಹಿತಿಗೆ 98451 23399, 98451 63380.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry