ನಾಟಕ ಸಮಾಜದ ಜೀವಂತ ಕಲೆ

7

ನಾಟಕ ಸಮಾಜದ ಜೀವಂತ ಕಲೆ

Published:
Updated:

ನ್ಯಾಮತಿ: ಸಮಾಜದಲ್ಲಿ ದೈನಂದಿನ ಬದುಕಿನಲ್ಲಿ ನಡೆಯುವ ಸತ್ಯ ಘಟನೆಗಳನ್ನು ನಾಟಕದ ದೃಶ್ಯಗಳ ಮೂಲಕ ಪ್ರತಿಬಿಂಬಿಸುವುದೇ ಈ ಕಲೆಯ ಉದ್ದೇಶ ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಅಭಿಪ್ರಾಯಪಟ್ಟರು. ಹೊನ್ನಾಳಿ ತಾಲ್ಲೂಕು ಹನಗವಾಡಿ ಗ್ರಾಮದಲ್ಲಿ ಈಚೆಗೆ ಮಹೇಶ್ವರ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಗರಗಳಿಗಿಂತ ಗ್ರಾಮೀಣರ ಬದುಕು ಬಹಳ ವಿಶಿಷ್ಟವಾದದ್ದು, ನಮ್ಮ ಪೂರ್ವಜರು ನಮಗೆ ಬಿಟ್ಟುಹೋದ ಯಕ್ಷಗಾನ, ಬಯಲಾಟ, ನಾಟಕ ಮುಂತಾದ ಜಾನಪದ ಸೊಗಡಿನ ಕಲೆಗಳು ಇಂದಿನ ವಿಜ್ಞಾನ ಯುಗದಲ್ಲಿಯೂ ಉಳಿಸಿ ಬೆಳೆಸುತ್ತಿರುವುದು ಹೆಮ್ಮೆಯ ವಿಚಾರ. ಸಮಾಜದ ಓರೆ-ಕೋರೆಗಳನ್ನು ತಿದ್ದಿ-ತೀಡುವಂತಹ ವಿಶಿಷ್ಟ ಪರಂಪರೆ ನಾಟಕ ಕಲೆಗೆ ಇದೆ, ಜಾತ್ರೆ, ಹಬ್ಬ-ಹರಿದಿನಗಳಲ್ಲಿ ಎಲ್ಲಾ ವರ್ಗದ ಜನರು ಒಂದೆಡೆ ಕುಳಿತು ಭಾವೈಕ್ಯ ಮೆರೆಯುವ ಗ್ರಾಮೀಣ ನೈಜ ಬದುಕಿಗೆ ಹೊಸ ಪರಂಪರೆ ನೀಡುತ್ತಿರುವುದು ಶ್ಲಾಘನೀಯ ಎಂದರು.ಕಲಾ ರಂಗದಲ್ಲಿ ಹಲವಾರು ಮಹನೀಯರು ರಾಷ್ಟ್ರಮಟ್ಟದವರೆಗೂ ಬೆಳೆದು ನಿಂತಿದ್ದಾರೆ. ಇಂತಹವರನ್ನು ಸರ್ಕಾರ ನಾಟಕ ಅಕಾಡೆಮಿ ಮುಖಾಂತರ ಗುರುತಿಸಿ ಪ್ರಶಸ್ತಿ, ಮಾಸಾಶನ ನೀಡುವ ಮೂಲಕ ಕೋಟ್ಯಂತರ ರೂಗಳನ್ನು ವೆಚ್ಚ ಮಾಡುತ್ತಿದ್ದು, ಜಾನಪದ ಕಲೆಗಳನ್ನು ಉಳಿಸಲು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದೆ ಎಂದು ನುಡಿದರು.ಸಮಾರಂಭದಲ್ಲಿ ಲಿಂಗಾಪುರ ಗ್ರಾ.ಪಂ. ಅಧ್ಯಕ್ಷೆ ಭಾಗ್ಯಾ ಚಂದ್ರಪ್ಪ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುಣಸಘಟ್ಟ ಗದ್ದಿಗೇಶ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಉಮಾ ಓಂಕಾರ್, ಮಾಜಿ ಜಿ.ಪಂ. ಸದಸ್ಯ ಚಂದ್ರಶೇಖರಪ್ಪ, ಬಸವರಾಜ, ಡಾ.ರಾಮಕೃಷ್ಣರೆಡ್ಡಿ ಹಾಗೂ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry