ನಾಟಕ ಸುಗ್ಗಿ

7

ನಾಟಕ ಸುಗ್ಗಿ

Published:
Updated:

ರಂಗ ಗೌರವ

ರಂಗಭೂಮಿ, ಕಿರುತೆರೆ, ಚಿತ್ರರಂಗಕ್ಕೆ ಹಲವು ಪ್ರತಿಭಾವಂತರನ್ನು ಕೊಟ್ಟಿರುವ ‘ಅಭಿನಯ ತರಂಗ’ ನಾಟಕ ಶಾಲೆಗೀಗ 30ರ ಹರೆಯ. ಈ ಸಂದರ್ಭದಲ್ಲಿ ಇಡೀ ವರ್ಷ ಸಾಂಸ್ಕೃತಿಕ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಶನಿವಾರ ಸಂಜೆ 6 ಗಂಟೆಗೆ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಬಿ.ವಿ.ರಾಜಾರಾಂ ಮತ್ತು ಶ್ರೀನಿವಾಸ ಜಿ. ಕಪ್ಪಣ್ಣ ಅವರಿಂದ ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನೆ,

ಅಭಿನಯ ತರಂಗದ ಸಂಸ್ಥಾಪಕರಾದ ಎ. ಎಸ್. ಮೂರ್ತಿ ಅವರಿಗೆ ರಂಗ ಗೌರವ. ನಟ ಎಚ್.ಜಿ. ಸೋಮಶೇಖರರಾವ್ ಹಾಗೂ ಅಭಿನಯ ತರಂಗದ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ.

ಸಂಜೆ 7.30ಕ್ಕೆ ‘ಅಭಿನಯ ತರಂಗ’ದ ವಿದ್ಯಾರ್ಥಿಗಳಿಂದ ‘ಟೋಬಾ ಟೇಕ್ ಸಿಂಗ್’ ನಾಟಕ ಪ್ರದರ್ಶನ

ಸ್ಥಳ: ರಂಗಶಂಕರ, ಜೆ.ಪಿ. ನಗರ 2ನೇ ಹಂತ.ನಾಟಕ ಬೆಂಗ್ಳೂರಲ್ಲಿ

ನಾಟಕ ಬೆಂಗ್ಳೂರು: ಭಾನುವಾರ ಮಧ್ಯಾಹ್ನ 3.30 ಹಾಗೂ 7.30ಕ್ಕೆ ಸಂಚಯ ತಂಡದಿಂದ ‘ಅಂಕೆ ತಪ್ಪಿದ ಶಂಕರಲಾಲ್’ (ರಚನೆ: ಬರ್ಟೊಲ್ಡ್ ಬ್ರೆಕ್ಟ್/ ಡಾ.ಕೆ.ವಿ. ನಾರಾಯಣ. ನಿ: ಗಣೇಶ ಕೆ.ಆರ್).

ಸೋಮವಾರ ಸಂಜೆ 7.30ಕ್ಕೆ ರಂಗಸಿರಿ ತಂಡದಿಂದ ‘ವಾಸಾಂಸಿ ಜೀರ್ಣಾನಿ’ (ರಚನೆ: ಮಹೇಶ್ ಎಲಕಂಚೆವಾರ್/ ಗಿರೀಶ್ ಕಾರ್ನಾಡ್. ನಿ: ಸಂದೀಪ್ ಪೈ).

ಸ್ಥಳ: ರಂಗಶಂಕರ, ಜೆ ಪಿ ನಗರ 2ನೇ ಹಂತ.

ಮಾಹಿತಿಗೆ: 9845753944,9844109706.ಹಂಗಾದ್ರೆ...?!!

ಪಂಚಮುಖಿ ನಟರ ಸಮೂಹ: ಭಾನುವಾರ ಹಂಗಾದ್ರೆ...?!! (ರಚನೆ: ಎಸ್.ಪಿ. ಮಹೇಶ್. ನಿ: ಪ್ರಭಾಕರ್ ರಾವ್) ನಾಟಕ.

ಅನಾದಿಕಾಲದಿಂದಲೂ ಗಂಡಸಿನ ಹಂಗಿನಲ್ಲೇ ನರಳುತ್ತಿದ್ದಾಳೆ ಹೆಣ್ಣು. ಆದ್ರೆ ಕಾಲಕಾಲಕ್ಕೆ ಕೆಲವು ಧೀಮಂತ ಹೆಣ್ಣುಗಳು ಅನ್ಯಾಯದ ವಿರುದ್ಧ ಸಿಡಿದೆದ್ದಿದ್ದಾರೆ. ಭಾರತದಲ್ಲಂತೂ ಹೆಣ್ಣು ಆರ್ಥಿಕವಾಗಿ ಸ್ವತಂತ್ರಳಾದಂತೆಲ್ಲ ಮನಸಿನ ಮಾತುಗಳಿಗೆ ಅಕ್ಷರ ಜೋಡಿಸ್ತಿದ್ದಾಳೆ. ನಾನು ಇಂದಿನ ಸಧೃಡ ಮಹಿಳೆ, ಅಬಲೆಯಲ್ಲ ಎಂದು ಸಾರಿ ಹೇಳ್ತಿದ್ದಾಳೆ.ಹಂಗಾದ್ರೆ!!!? ನಾಟಕದ ಪ್ರಮುಖ ಪಾತ್ರಧಾರಿಯಾದ ಅಂಜಲಿ ತನ್ನ ಜೀವನದಲ್ಲಿ ಘಟಿಸಿದ ಕೆಲವು ಘಟನೆಗಳನ್ನು ಒಂದೊಂದಾಗಿ ನಮ್ಮ ಮಂದೆ ತೆರೆದಿಡುತ್ತಾಹೋಗ್ತಾಳೆ. ಜೊತೆ ಜೊತೆಗೆ ತನ್ನ ಪರಿಸ್ಥಿತಿಯನ್ನು ಮಹಾಭಾರತ ದ್ರೌಪದಿಯ ಪರಿಸ್ಥಿತಿಯ ಜೊತೆ ತಾಳೆ ಹಾಕುತ್ತಾ, ಒಂದಾದ ಮೇಲೊಂದು ಪ್ರಶ್ನೆಗಳನ್ನು ನಮ್ಮಡೆಗೆ ತೂರುತ್ತಾ ಹೊಸ ಚಿಂತನೆಗಳೆಡೆಗೆ ದೂಡುತ್ತಾಳೆ.

ಸ್ಥಳ: ಕೆ.ಹೆಚ್.ಕಲಾಸೌಧ, ಹನುಮಂತನಗರ. ಸಂಜೆ 7.ರಂಗಸಮಾಜ ನಾಟಕೋತ್ಸವ

ರಂಗ ಸಮಾಜ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಮೂರು ದಿನಗಳ ನಾಟಕೋತ್ಸವ. ಶನಿವಾರ ಉದ್ಘಾಟನೆ.ಕಲಾಶಿಖರ ನಾಟಕ ತಂಡದಿಂದ ’ಕತ್ತಲೆ ದಾರಿ’ (ರಚನೆ, ನಿ: ವೆಂಕಟೇಶ್) ಮತ್ತು ರಂಗ ಸಮಾಜದಿಂದ ‘ಪೆಕರ್ಮಾವ ಚತುರ್‌ಳಿಯ’ (ರಚನೆ: ಮೈಸೂರು ರಮಾನಂದ್, ನಿ: ಎಸ್.ತಿಲಕ್‌ರಾಜ್).ಭಾನುವಾರ ಶಾರದಾ ಕಲಾನಿಕೇತನ ತಂಡದಿಂದ ‘ಹೋಂ ರೂಲೂ’ (ರಚನೆ: ಟಿ.ಪಿ.ಕೈಲಾಸಂ, ನಿ: ಕೆ. ಪ್ರದೀಪ್), ಪೃಥ್ವೀ ಯುವ ರಂಗ ಸಾಂಸ್ಕೃತಿಕ ವೇದಿಕೆ ತಂಡದಿಂದ ‘ಲಾಕೌಟ್ ಅಲ್ಲ ನಾಕೌಟ್’ (ರಚನೆ: ಎಂ.ಎಸ್.ನರಸಿಂಹಮೂರ್ತಿ. ನಿ: ಜಿ.ವಿ.ಪ್ರಸನ್ನ). ಸೋಮವಾರ ಎಂ.ಎಸ್.ರಮೇಶ್ ಮಿತ್ರಕೂಟ ತಂಡದಿಂದ ’ಜೀವನ ಚಕ್ರ’ (ರಚನೆ, ನಿರ್ದೇಶನ ಮತ್ತು ರೂಪಾಂತರ: ಎಂ.ಎಸ್.ರಮೇಶ್), ದಾನ ಪ್ರಕಾಶ ಎನ್.ತಿಮ್ಮಪ್ಪ ತಂಡದಿಂದ ‘ಕಿವುಡು ಸಾರ್ ಕಿವುಡು’ (ರಚನೆ: ಎಂ.ಎಸ್.ನರಸಿಂಹಮೂರ್ತಿ, ನಿ: ಜೆ.ವಿ. ರಾಘವೇಂದ್ರರಾವ್).

ಸ್ಥಳ: ಉದಯಭಾನು ಕಲಾಸಂಘದ ಸಭಾಂಗಣ, ಕೆಂಪೇಗೌಡನಗರ. ನಿತ್ಯ ಸಂಜೆ 6.30.ರಾಜ ರಾಣಿ ಮಂತ್ರಿ ತಂತ್ರಿ

ಸಮುದಾಯ ಬೆಂಗಳೂರು: ಶನಿವಾರ ಮತ್ತು ಭಾನುವಾರ ರಾಜ ರಾಣಿ ಮಂತ್ರಿ ತಂತ್ರಿ (ಬಂಗಾಳಿ ಮೂಲ: ಗುರುದೇವ ರವೀಂದ್ರನಾಥ ಟ್ಯಾಗೋರ್‌ರ ’ತಾಷೆರ್ ದೇಶ್’. ಕನ್ನಡ ರೂಪಾಂತರ: ಕೆ.ಪಿ. ವಾಸುದೇವನ್. ನಿ: ಎಂ.ಎಸ್. ಸತ್ಯು. ಸಂಗೀತ: ಶ್ರೀನಿವಾಸ ಭಟ್. ಬೆಳಕು: ಮಹದೇವ್ ಪ್ರಸಾದ್. ಪ್ರಸಾದನ: ರಾಮಕೃಷ್ಣ ಬೆಳ್ತೂರು. ನೃತ್ಯ ನಿರ್ದೇಶನ: ಮಯೂರಿ ಉಪಾಧ್ಯ).

ಇದು ಮೇಲ್ನೋಟಕ್ಕೆ ಮಕ್ಕಳ ನಾಟಕ ಎನಿಸಿದರೂ 40ರ ದಶಕದಲ್ಲಿ ಗಾಂಧೀಜಿ ಮತ್ತು ನೇತಾಜಿ ನಡುವೆ ಉಂಟಾದ ರಾಜಕೀಯ, ಸೈದ್ಧಾಂತಿಕ ಭಿನ್ನಾಭಿಪ್ರಾಯಕ್ಕೆ ಟ್ಯಾಗೋರ್ ನೀಡಿದ ವಿಡಂಬನಾತ್ಮಕ ನಾಟಕ ರೂಪ.

ಸ್ಥಳ: ಸೇವಾ ಸದನ, ಮಲ್ಲೇಶ್ವರಂ ಸಾಯಿ ಮಂದಿರ ಬಳಿ. ಸಂಜೆ 7. ಮಾಹಿತಿಗೆ: 99001 82400.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry