ನಾಟಿ ತಳಿಯಲ್ಲೇ ಅಧಿಕ ಇಳುವರಿ

7

ನಾಟಿ ತಳಿಯಲ್ಲೇ ಅಧಿಕ ಇಳುವರಿ

Published:
Updated:

ರಾಜ್ಯದಲ್ಲಿ ಈಗ ಅಭಿವೃದ್ಧಿ ಮಾಡಬೇಕೆಂದಿರುವ ಹೈಬ್ರೀಡ್ ತೆಂಗು ಅತ್ಯಧಿಕ ಇಳುವರಿಯಾದ ಹೆಕ್ಟೇರ್‌ಗೆ 14 ಸಾವಿರ ತೆಂಗಿನಕಾಯನ್ನು ನೀಡುತ್ತದೆ ಎಂದು ಹೇಳುತ್ತಾರೆ.ಆದರೆ ಇಂದು ನಮ್ಮಲ್ಲಿರುವ (ನಾನು ಸಹ ತೆಂಗು ಬೆಳೆಗಾರ) ನಾಟಿ ತಳಿಯ ಮರಗಳಿಂದ (ಒಂದು ಹೆಕ್ಟೇರ್ ಪ್ರದೇಶದಲ್ಲಿ 115 ತೆಂಗಿನ ಮರ) 12 ಸಾವಿರ ತೆಂಗಿನಕಾಯಿ ಪಡೆಯುತ್ತಿದ್ದೇವೆ. ಆದರೆ ಈ ಇಳುವರಿಯನ್ನು ಪಡೆಯಲು ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು. ಅದಕ್ಕೆ ಪ್ರತೀ ವರ್ಷ ಜೂನ್ ಅಥವಾ ಜುಲೈ ತಿಂಗಳಲ್ಲಿ ಹಸಿರೆಲೆ ಗೊಬ್ಬರವಾದ ಸೆಣಬನ್ನು (ಅಥವಾ ಚಂಬೆ, ಹಲಸಂದೆ, ಉದ್ದು) ತೋಟದಲ್ಲೇ ಬೆಳೆಸಿ, ಮಣ್ಣನ್ನು ಕೆಸರು ಮಾಡಿ ಮಣ್ಣಿಗೆ ಸೇರಿಸಬೇಕು.ಜೊತೆಗೆ ಪ್ರತೀ ವರ್ಷ, ತೆಂಗಿನ ಮರಗಳಿಗೆ ಕೊಟ್ಟಿಗೆ ಗೊಬ್ಬರವನ್ನು ಮರದ ಕಾಂಡದಿಂದ 1.5 ಅಡಿಗಳ ದೂರದಲ್ಲಿ 1 ಅಡಿ ಅಗಲ ಹಾಗೂ 1.5 ಅಡಿ ಆಳದ ಗುಂಡಿ ಮಾಡಿ ಅದರಲ್ಲಿ ಅರ್ಧ ಭಾಗಕ್ಕೆ ಒಂದು ಮರಕ್ಕೆ ಸುಮಾರು 50 ರಿಂದ 60 ಕೆ.ಜಿ ಯಷ್ಟು ಕೊಟ್ಟಿಗೆ ಗೊಬ್ಬರ, ಇನ್ನರ್ಧ ಭಾಗದಲ್ಲಿ 1 ಕೆ.ಜಿ. ಯೂರಿಯಾ, 1 ಕೆ.ಜಿ, ಡಿ.ಎ.ಪಿ, 0.5 ಕೆ.ಜಿ ಪೊಟಾಷ್ ಅನ್ನು ಪ್ರತಿ ಮರಕ್ಕೆ ವರ್ಷಕ್ಕೊಂದು ಬಾರಿ ಕೊಡಬೇಕು. ಇದರ ಜೊತೆಗೆ ತೋಟದ ಮಣ್ಣಿಗೆ 1 ಎಕರೆಗೆ 8 ಕೆ.ಜಿ. ಝಿಂಕ್ ಸಲ್ಫೇಟನ್ನು ಮಿಶ್ರಣ ಮಾಡಿ, ಪ್ರತಿ 15 ರಿಂದ 20 ದಿನಗಳಿಗೊಮ್ಮೆ ನೀರನ್ನು ಕಾಲುವೆಯ ಮಾದರಿಯಲ್ಲಾದರೂ ಸರಿ, ಅಥವಾ ಹಾಯಿಸುವ ಮಾದರಿಯಲ್ಲಿಯಾದರೂ ಸರಿ,  ಹಾಯಿಸಿದರೆ ಪ್ರತಿ 40 ರಿಂದ 50 ದಿನಗಳಿಗೊಮ್ಮೆ ಅತ್ಯುತ್ತಮವಾದ, ದಪ್ಪವಾದ ಸುಮಾರು 1500 ರಿಂದ 2000 ತೆಂಗಿನ ಕಾಯಿಗಳನ್ನು ಪಡೆಯಬಹುದು.ಹೀಗಾಗಿ ಹೈಬ್ರೀಡ್ ತಳಿಯನ್ನು ಬೆಳೆಸಿ ಕೇವಲ 35 ವರ್ಷಕ್ಕೆ ಮರಗಳನ್ನು ಕಳೆದುಕೊಳ್ಳುವುದಕ್ಕಿಂತ ನಾಟಿ ತಳಿಗಳನ್ನು ಉಳಿಸಿ, ಬೆಳೆಸಿಕೊಂಡು ನೂರಾರು ವರ್ಷ ಫಲವನ್ನು ಪಡೆಯುವುದು ಮೇಲಲ್ಲವೇ, ಯೋಚಿಸಿ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry