ನಾಟ್ಯವೇದಂನಲ್ಲಿ ಮಂಜು ಭಾರ್ಗವಿ ನೃತ್ಯ

7

ನಾಟ್ಯವೇದಂನಲ್ಲಿ ಮಂಜು ಭಾರ್ಗವಿ ನೃತ್ಯ

Published:
Updated:
ನಾಟ್ಯವೇದಂನಲ್ಲಿ ಮಂಜು ಭಾರ್ಗವಿ ನೃತ್ಯ

ಮಂಜು ಭಾರ್ಗವಿ ಅವರ ಗೌರವಾರ್ಥ ದೀಪಾ ಶಶಿಧರನ್ ನಾಟ್ಯವೇದಂ ವಾರ್ಷಿಕ ನೃತ್ಯೋತ್ಸವವು ಇಂದು (ಶುಕ್ರವಾರ) ಹಾಗೂ ಶನಿವಾರ ನಡೆಯಲಿದೆ. ಶಾಸ್ತ್ರೀಯ ಮತ್ತು ಸಮಕಾಲೀನ ನೃತ್ಯ ಮಾದರಿಗಳನ್ನು ಖ್ಯಾತ ಕಲಾವಿದರು ಚೌಡಯ್ಯ ಸ್ಮಾರಕ ಭವನದ ವೇದಿಕೆಯಲ್ಲಿ ಪ್ರದರ್ಶಿಸಲಿದ್ದಾರೆ.ಶುಕ್ರವಾರ ರಮಾ ವೈದ್ಯನಾಥನ್ ಭರತನಾಟ್ಯ, ಮಂಜು ಭಾರ್ಗವಿ ಕೂಚುಪುಡಿ ನೃತ್ಯ ಕಾರ್ಯಕ್ರಮ ನಡೆಯಲಿದೆ.ನಾಟ್ಯವೇದಂ ವಾರ್ಷಿಕ ನೃತ್ಯೋತ್ಸವ ಕರ್ಮ ಕ್ರಿಯೇಟರ್ಸ್‌ ಸಂಸ್ಥಾಪಕಿ ದೀಪಾ ಶಶಿಧರನ್ ಅವರ ಕಲ್ಪನೆಯ ಕೂಸು.`ನನ್ನ ಗುರು ಮಂಜು ಭಾರ್ಗವಿ ಅವರಿಗೆ ಗೌರವ ಸಲ್ಲಿಸಲೆಂದೇ ಈ ನೃತ್ಯೋತ್ಸವ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಅಪರೂಪದ ಕಲಾವಿದರನ್ನು ಆಮಂತ್ರಿಸಿ ವಿಭಿನ್ನ ನೃತ್ಯಪ್ರಕಾರಗಳನ್ನು ಪ್ರಸ್ತುತಪಡಿಸಬೇಕು ಎಂಬ ಕನಸು ಈಗ ನಿಜವಾಗಿದೆ~ ಎಂಬುದು ದೀಪಾ ಅವರ ಮಾತು.

 

ದೀಪಾ ಕೂಚಿಪುಡಿ ನೃತ್ಯ ಪ್ರಕಾರದ ಅತ್ಯುತ್ತಮ ಕಲಾವಿದೆ. ಆ ಪ್ರಕಾರದಲ್ಲಿ ರಂಗಪ್ರವೇಶ ಮಾಡಿದ ಮಂಜು ಭಾರ್ಗವಿ ಅವರ ಮೊದಲ ಶಿಷ್ಯೆ ಎಂಬ ಹೆಮ್ಮೆಗೂ ದೀಪಾ ಭಾಜನರಾಗಿದ್ದರು.ಅತಿಥಿಗಳು: ಮಾಜಿ ಸಚಿವೆ ರಾಣಿ ಸತೀಶ್, ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್, ನಾಟ್ಯಲಕ್ಷಣ ಅಕಾಡೆಮಿ ನಿರ್ದೇಶಕಿ ಉಷಾ ವೆಂಕಟೇಶ್ವರನ್.

ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯ್ಯಾಲಿಕಾವಲ್, ಮಲ್ಲೇಶ್ವರಂ. ಪ್ರತಿದಿನ ಸಂಜೆ 6.15. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry