ಗುರುವಾರ , ಜೂನ್ 24, 2021
27 °C

ನಾಡಗೀತೆಗೆ ಧಾಟಿ ಗುರುತಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ಸರ್ಕಾರ ಕುವೆಂಪು ಅವರ `ಜೈ ಭಾರತ ಜನನಿಯ ತನುಜಾತೆ~ ಕವನವನ್ನು ನಾಡಗೀತೆಯಾಗಿ ಘೋಷಿಸಿ ಆದೇಶ ಹೊರಡಿಸಿತ್ತು. ಆಗ ಈ ಗೀತೆಯ ಪಲ್ಲವಿ ಮತ್ತು ಮೂರು ಚರಣಗಳನ್ನು ಬಳಸಿಕೊಳ್ಳಬೇಕೆಂದು ತೀರ್ಮಾನಿಸಲಾಗಿತ್ತು.

 

ನಂತರ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಸರ್ಕಾರ ಮರು ಆದೇಶ ಹೊರಡಿಸಿ ನಾಡಗೀತೆಯ ಪೂರ್ಣ ಪಾಠವನ್ನು ಬಳಸಿಕೊಳ್ಳಬೇಕೆಂದು ಆದೇಶ ಹೊರಡಿಸಿತು. ನಂತರ ನಾಡಗೀತೆಯ ಧಾಟಿಗೆ ಸಂಬಂಧಿಸಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚನೆಯಾಯಿತು. ಈ ಸಮಿತಿಯು ಸರ್ಕಾರಕ್ಕೆ ಕೆಲವು ಶಿಫಾರಸುಗಳನ್ನು ಮಾಡಿದೆ. ಆದರೆ ಒಂಬತ್ತು ವರ್ಷಗಳಾದರೂ ಯಾವುದೇ ನಿರ್ಧಾರ ಹೊರಬಂದಿಲ್ಲ. ನಾಡಗೀತೆಯನ್ನು ಯಾರು ಹೇಗೆ ಬೇಕಾದರೂ ಹಾಡಬಹುದೆಂಬ ವಾತಾವರಣ ಸೃಷ್ಟಿಯಾಗಿದೆ. ನಾಡಗೀತೆಯನ್ನು ಕೆಲವು ಸಂದರ್ಭದಲ್ಲಿ ಮೈಸೂರು ಅನಂತಸ್ವಾಮಿಯವರು ಸಂಯೋಜಿಸಿರುವಂತೆ ಪ್ರಸ್ತುತಪಡಿಸಿದರೆ, ಕೆಲವರು ಸಿ. ಅಶ್ವಥ್ ಅವರ ಶೈಲಿಯಲ್ಲಿಯೂ, ಮತ್ತೆ ಕೆಲವರು ವಿಜಯಭಾಸ್ಕರ್ ಅವರು ಚಲನಚಿತ್ರವೊಂದಕ್ಕೆ ಮಾಡಿರುವ ಧಾಟಿಯಲ್ಲಿಯೂ ಹಾಡುವ ಪರಿಪಾಠ ಇದೆ. ಸರ್ಕಾರದ ಕೆಲವು ಕಾರ್ಯಕ್ರಮಗಳಲ್ಲಿ ನಾಡಗೀತೆಯನ್ನು ಮೊಟಕುಗೊಳಿಸಿ ಕೇವಲ ಎರಡು ಚರಣಗಳನ್ನು ಮಾತ್ರ ಹಾಡುವ ಪರಿಪಾಠವೂ ಬೆಳೆದಿದೆ. ಈ ಬಗ್ಗೆ ಸುಗಮ ಸಂಗೀತ ಪರಿಷತ್ತು ಹಲವಾರು ಬಾರಿ ಸರ್ಕಾರದ ಗಮನಕ್ಕೆ ತಂದರೂ ಫಲಕಾರಿಯಾಗಿಲ್ಲ. ಈಗಲಾದರೂ ಸರ್ಕಾರ ಈ ಬಗ್ಗೆ  ಗಮನ ಹರಿಸಿ ಕೂಡಲೆ ತಜ್ಞರ ಸಮಿತಿಯನ್ನು ರಚಿಸಿ ನಾಡಗೀತೆಗೆ ಒಂದು ನಿರ್ದಿಷ್ಟ ಧಾಟಿಯನ್ನು ನಿಗದಿಪಡಿಸುವಂತೆ ಆಗ್ರಹಿಸುತ್ತೇನೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.