ನಾಡಹಬ್ಬ ಸೌಹಾರ್ದದ ಪ್ರತೀಕ

6

ನಾಡಹಬ್ಬ ಸೌಹಾರ್ದದ ಪ್ರತೀಕ

Published:
Updated:

ಭದ್ರಾವತಿ: `ಶಾಂತಿ, ಸೌಹಾರ್ದ ಹಾಗೂ ನೆಮ್ಮದಿಯ ಬದುಕಿನ ಪ್ರತೀಕ ನಾಡಹಬ್ಬ ದಸರೆ~ ಎಂದು ಶಾಸಕ ಬಿ.ಕೆ. ಸಂಗಮೇಶ್ವರ ಬಣ್ಣಿಸಿದರು.ಇಲ್ಲಿನ ಲೋಯರ್ ಹುತ್ತಾ ತಿರುಮಲ ವೆಂಕಟೇಶ್ವರ ದೇವಸ್ಥಾನ ಮುಂಭಾಗದಲ್ಲಿ ಗುರುವಾರ, ಅಲಂಕೃತ ವಾಹನದಲ್ಲಿ ಪ್ರತಿಷ್ಠಾಪಿಸಿದ್ದ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಪೂಜೆ ಸಲ್ಲಿಸಿ, ನಾಡಹಬ್ಬ ದಸರೆಯ ಅದ್ದೂರಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಪರಸ್ಪರರಲ್ಲಿ ಅಡಗಿರುವ ದ್ವೇಷ, ಅಸೂಯೆ ದೂರವಾಗಿ ಎಲ್ಲರೂ ಒಂದಾಗಿ ಸಹಬಾಳ್ವೆಯಿಂದ ಬದುಕು ನಡೆಸಲು ತಾಯಿ ಭುವನೇಶ್ವರಿ ಹರಸಲಿ ಎಂದರು.ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಬಿ.ಕೆ. ಮೋಹನ್, ಉಪಾಧ್ಯಕ್ಷೆ ಶಾರದಮ್ಮ ಭೀಮಾಬೋವಿ, ವಿವಿಧ ಸಮಿತಿಗಳ ಅಧ್ಯಕ್ಷರಾದ ವೇಣುಗೋಪಾಲ್, ಎಚ್. ಲಕ್ಷ್ಮಮ್ಮ, ಪುಟ್ಟೇಗೌಡ, ವಿ. ಕದಿರೇಶ್, ಜಿ.ಡಿ. ನಟರಾಜ್, ಎಸ್.ಪಿ. ಮೋಹನ್‌ರಾವ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಸೋಮಶೇಖರಯ್ಯ ಸೇರಿದಂತೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry