ಶುಕ್ರವಾರ, ಜೂನ್ 25, 2021
29 °C

ನಾಡಿನ ಸಂಸ್ಕೃತಿ ಅರಿಯಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪೇಟೆ: ನಮ್ಮ ನಾಡಿನ ಭವ್ಯವಾದ ಪುರಾತನ ಸಂಸ್ಕೃತಿ ಮತ್ತು ಪರಂಪರೆಗಳ ಬಗ್ಗೆ ತಿಳಿದುಕೊಳ್ಳಲು ಯುವಜನರು ಆಸಕ್ತಿ ಹೊಂದಬೇಕು ಎಂದು ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ.ಎಂ.ವಿ.ಶ್ರೀನಿವಾಸ್ ಸಲಹೆ ನೀಡಿದರು.ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಘಟಕ, ರಾಜ್ಯ ಪತ್ರಗಾರ ಇಲಾಖೆಯ ಸಹಯೋಗದಲ್ಲಿ ಪಟ್ಟಣದ ಕಲ್ಪತರು ಪದವಿ ಕಾಲೇಜಿನಲ್ಲಿ ಶುಕ್ರವಾರ ಹೊಯ್ಸಳ ಕಲೆಗಳ ಕುರಿತ ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಮಾತನಾಡಿ ಪ್ರಾಚೀನ ದೇವಾಲಯಗಳು ಮತ್ತು ಸ್ಮಾರಕಗಳು ನಮ್ಮ ಇತಿಹಾಸದ ಕೊಂಡಿಗಳಾಗಿದ್ದು, ಅವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಯುವಜನರು ಮುಂದಾಗಬೇಕು ಎಂದರು.ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ ಗೌಡ ಮಾತನಾಡಿ, ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿರುವ ಶಿಲ್ಪಕಲಾಕೃತಿಗಳನ್ನು ಜೋಪಾನ ಮಾಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.ವಿಮರ್ಶಕ ಡಾ.ರಾಗೌ ಅಧ್ಯಕ್ಷತೆ ವಹಿಸಿದ್ದರು. ವಿದ್ವಾಂಸ ಡಾ.ಎನ್.ಎಸ್.ತಾರಾನಾಥ್ ಹೊಯ್ಸಳ ಶಾಸನಗಳ ಕುರಿತು, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಅಧೀಕ್ಷಕ ಜಿ.ಎಸ್.ನರಸಿಂಹನ್ ದೇವಾಲಯಗಳ ವೈಜ್ಞಾನಿಕ ಸಂರಕ್ಷಣೆ ಕುರಿತು, ಉಡುಪಿಯ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ.ಪಿ.ಎನ್.ನರಸಿಂಹಮೂರ್ತಿ ಹೊಯ್ಸಳ ಚಾರಿತ್ರಿಕ ಹಿನ್ನೆಲೆ ಕುರಿತು ವಿಷಯ ಮಂಡಿಸಿದರು.ರಾಜ್ಯ ಪತ್ರಗಾರ ಇಲಾಖೆ ನಿರ್ದೇಶಕ ಕಂಚಿ ವರದಯ್ಯ, ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಕೆ.ಎಸ್.ಸೋಮಶೇಖರ್, ಕಲ್ಪತರು ಕಾಲೇಜಿನ ಪ್ರಾಚಾರ್ಯ ಎಂ.ಬಿ.ಸುರೇಶ್, ಪತ್ರಗಾರ ಇಲಾಖೆ ಅಧಿಕಾರಿ ಹನುಮಂತರಾಯಪ್ಪ, ಸಾಹಿತಿ ಕೆ.ಜಿ.ನಾಗರಾಜು, ಪ್ರಶಿಕ್ಷಕ ಗೌಡ ನಂಜಪ್ಪ, ಉಪನ್ಯಾಸಕ ರಾಮಚಂದ್ರು ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.