ನಾಡುನುಡಿ ಅಭಿಮಾನಕ್ಕೆ ನಾಡಹಬ್ಬ ಸ್ಫೂರ್ತಿ

7

ನಾಡುನುಡಿ ಅಭಿಮಾನಕ್ಕೆ ನಾಡಹಬ್ಬ ಸ್ಫೂರ್ತಿ

Published:
Updated:

ಬ್ಯಾಡಗಿ:  ಸಾರ್ವಜನಿಕರಲ್ಲಿ ನಮ್ಮ ನಾಡು, ನುಡಿ ಹಾಗೂ ಅಭಿಮಾನವನ್ನು ಹುಟ್ಟುಹಾಕಲು ನಾಡಹಬ್ಬಗಳು ಅತ್ಯಗತ್ಯವಾಗಿವೆ ಎಂದು ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ಪಿ.ಅಜಗಣ್ಣನವರ ಅವರು  ಹೇಳಿದರು.ಶುಕ್ರವಾರ ಸಂಜೆ ಪಟ್ಟಣದಲ್ಲಿ ನಾಡ ಹಬ್ಬ ಆಚರಣಾ ಸಮಿತಿ, ಕನ್ನಡ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ವೇದಿಕೆಗಳ ತಾಲ್ಲೂಕು ಘಟಕಗಳು ಸಂಯುಕ್ತವಾಗಿ ಪ್ರಥಮ ಬಾರಿಗೆ ಆಯೋಜಿಸಿದ್ದ ನಾಡ ಹಬ್ಬ ಉತ್ಸವದ ಅಂಗವಾಗಿ ಶ್ರೀ ಭುವ ನೇಶ್ವರಿ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.ಪ್ರತಿಯೊಬ್ಬ ಕನ್ನಡಿಗನು ತನ್ನ ನೆಲ, ಜಲ, ಭಾಷಾಭಿಮಾನ ಬೆಳೆಸಿಕೊಂಡಾಗ ಮಾತ್ರ ಭಾಷೆ, ಸಾಹಿತ್ಯ ಸಮೃದ್ಧವಾಗಿ ಬೆಳೆಯಲು ಸಾಧ್ಯವೆಂದರು.   ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಮಾಲತೇಶ ಅರಳಿಮಟ್ಟಿ, ಜನಪದ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ವೈ.ಟಿ.ಹೆಬ್ಬಳ್ಳಿ, ಸಂಧ್ಯಾ ದೇಶ ಪಾಂಡೆ, ಪ್ರಾಚಾರ್ಯ ಎಚ್.ಬಿ. ಲಿಂಗಯ್ಯ, ಬಿ.ಎಫ್.ದೊಡ್ಡಮನಿ, ಬಿ.ಎಂ.ಜಗಾಪೂರ, ಎಂ.ಎಂ.ಪಾಟೀಲ, ದ್ರಾಕ್ಷಾಯಿಣಿ ಹರಮಗಟ್ಟಿ, ಮಂಜು ನಾಥ ಶಿರವಾಡಕರ, ವಿ.ವಿ.ಮಾತನವರ, ಗೀತಕ್ಕಾ ಕಬ್ಬೂರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.ನೂರಾರು ಸುಮಂಗಲೆಯರು ಕುಂಭದೊಂದಿಗೆ ಮೆರವಣೆಗೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry