ನಾಡು ಕಟ್ಟುವ ಕೆಲಸದಲ್ಲಿ ಮಗ್ನ: ಸಿಎಂ

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542

ನಾಡು ಕಟ್ಟುವ ಕೆಲಸದಲ್ಲಿ ಮಗ್ನ: ಸಿಎಂ

Published:
Updated:

ಬೆಂಗಳೂರು: `ಅಧಿಕಾರದಲ್ಲಿ ಎಷ್ಟು ದಿನ ಇರುತ್ತೇನೊ ಅಷ್ಟೂ ದಿನ ನಾಡು ಕಟ್ಟುವ ಕೆಲಸದಲ್ಲಿ ಪ್ರಾಮಾಣಿಕತೆಯಿಂದ ತೊಡಗಿಸಿಕೊಳ್ಳುತ್ತೇನೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಇಲ್ಲಿ ಹೇಳಿದರು.ಉತ್ತರಹಳ್ಳಿ ಸಮೀಪದ ಎಸ್.ಜೆ.ಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.`ಆದಿಚುಂಚನಗಿರಿ ಶ್ರೀಗಳು ಮಠದ ಪತ್ರಿಕೆಯಲ್ಲಿ ಸ್ವಾರ್ಥ ಬಿಟ್ಟು, ದುರಾಸೆಯನ್ನು ದೂರವಿಟ್ಟು ಕೆಲಸ ಮಾಡುವ ಅಗತ್ಯ ಇದೆ~ ಎಂದು ಹೇಳಿದ್ದಾರೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇನೆ. ಸ್ವಾರ್ಥ ಸಾಧನೆಗೆ ಮುಂದಾಗದೆ, ಜನಪರ ಕೆಲಸಗಳನ್ನು ಮಾಡುತ್ತೇನೆ~ ಎಂದು ಹೇಳಿದರು.ಮುಖ್ಯಮಂತ್ರಿಯವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರ್.ಅಶೋಕ ಅವರು `ಸದಾನಂದ ಗೌಡರು ಬಾಕಿ ಉಳಿದಿರುವ 20 ತಿಂಗಳೂ ಮುಖ್ಯಮಂತ್ರಿಯಾಗಿರುತ್ತಾರೆ. ಇದರಲ್ಲಿ ಒಂದು ದಿನವೂ ಕಡಿಮೆ ಆಗುವುದಿಲ್ಲ~ ಎಂದು ಸ್ಪಷ್ಟಪಡಿಸಿದರು.`ಗೌಡರು ಮಂಗಳೂರು ಮೀನು ಇದ್ದಂತೆ. ಮೀನು ಯಾರ ಕೈಗೂ ಸಿಗುವುದಿಲ್ಲ. ಹಾಗಾಗಿ ಅವರು ಅವಧಿಯನ್ನು ಪೂರೈಸುತ್ತಾರೆ. ಈ ವಿಷಯದಲ್ಲಿ ಆತಂಕ ಬೇಡ~ ಎಂದು ಹೇಳಿದರು. ಗೌಡರು ಉತ್ತಮ ಆಡಳಿತ ನೀಡಿ ಕರ್ನಾಟಕವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲಿದ್ದಾರೆ. ಸ್ವಜನ ಪಕ್ಷಪಾತದಿಂದ ದೂರ ಉಳಿಯಲಿದ್ದಾರೆ ಎಂದರು.ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅಶೋಕ, ಕೊಪ್ಪಳ ಉಪ ಚುನಾವಣೆಯನ್ನು ಸಾಮೂಹಿಕ ನಾಯಕತ್ವದ ಮೇಲೆ ಎದುರಿಸುತ್ತೇವೆ ಎಂದರು. `ಬಿಜೆಪಿ ಯಾವುದೇ ಒಬ್ಬ ವ್ಯಕ್ತಿಯ ಪಕ್ಷವಲ್ಲ; ಕಾರ್ಯಕರ್ತರ ಪಕ್ಷ~ ಎಂದೂ ಹೇಳಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry