ನಾಡು ಸೇರಿದ ಜಿಂಕೆಗೆ ಸ್ಥಳೀಯರ ಜೀವದಾನ

7

ನಾಡು ಸೇರಿದ ಜಿಂಕೆಗೆ ಸ್ಥಳೀಯರ ಜೀವದಾನ

Published:
Updated:
ನಾಡು ಸೇರಿದ ಜಿಂಕೆಗೆ ಸ್ಥಳೀಯರ ಜೀವದಾನ

ಹೊಸಕೋಟೆ: ಪಟ್ಟಣದ ಕನಕನಗರದ ನಿರ್ಮಾಣ ಹಂತದ ಮನೆಯೊಂದರ ಹಿಂಭಾಗದಲ್ಲಿ ಭಾನುವಾರ ಜಿಂಕೆ ಮರಿಯೊಂದು ಪ್ರತ್ಯಕ್ಷವಾಗಿದ್ದು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿತು.ಬಹಳಷ್ಟು ನಿತ್ರಾಣಗೊಂಡಿದ್ದ ಆ ಜಿಂಕೆಯನ್ನು ನೋಡಲು ಸಾರ್ವಜನಿಕರು ಜಮಾಯಿಸುತ್ತಿದ್ದಂತೆ ಬೆದರಿದ ಅದು ಅಲ್ಲಿಂದ ಚಂಗನೆ ಎಗರಿ ಬಡಾವಣೆಯಲ್ಲಿ ಓಟ ಕಿತ್ತಿತು.ಅಲ್ಲಿನ ನಿವಾಸಿಗಳಾದ ಆನಂದ್, ನೂತಿ ಮಂಜುನಾಥ್ ಹಾಗು ಸ್ನೇಹಿತರು ಪ್ರಯಾಸಪಟ್ಟು ಅದನ್ನು ಹಿಡಿದರು. ನಾಯಿಪಾಲಾಗುವುದನ್ನು ತಪ್ಪಿಸಿದ ಸಂತಸ ಅವರಲ್ಲಿತ್ತು.ಜಿಂಕೆಗೆ ನೀರು ಕುಡಿಸಿ ನಂತರ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry