ನಾಣ್ಯಗಳ ಕೊರತೆಗೆ ಭಕ್ತಿಯೇ ಕಾರಣ

7

ನಾಣ್ಯಗಳ ಕೊರತೆಗೆ ಭಕ್ತಿಯೇ ಕಾರಣ

Published:
Updated:

ಜನರಲ್ಲಿ ಧಾರ್ಮಿಕ ಪ್ರವೃತ್ತಿ ಹೆಚ್ಚಾಗುತ್ತಿರುವುದಕ್ಕೂ ನಾಣ್ಯಗಳ ಕೊರತೆಗೂ ನೇರ ಸಂಬಂಧವಿದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ನಾಣ್ಯಗಳ ಕೊರತೆ ಹೆಚ್ಚು. ಇಲ್ಲಿ ಅತಿ ಹೆಚ್ಚು ದೇವಸ್ಥಾನಗಳಿವೆ. ಜೊತೆಗೆ ದೈವ - ಭೂತ ಸ್ಥಾನಗಳು, ನಾಗ ಬನಗಳೂ ಇವೆ. ಇಲ್ಲಿನ ಹುಂಡಿ, ಕಾಣಿಕೆ ಡಬ್ಬಿಗಳಲ್ಲಿ ಭಾರೀ ಪ್ರಮಾಣದ ನಾಣ್ಯಗಳು ಶೇಖರವಾಗುತ್ತವೆ.

 

ಮೂರು ತಿಂಗಳು, ಕೆಲವೆಡೆ  ವರ್ಷಕ್ಕೊಮ್ಮೆ ಕಾಣಿಕೆ ಹುಂಡಿಗಳನ್ನು ತೆರೆಯುವುದರಿಂದ ಈ ಅವಧಿಯಲ್ಲಿ ಅವು ಚಲಾವಣೆ ಇಲ್ಲದೆ ಒಂದೆಡೆ ಸಂಗ್ರಹವಾಗಿರುತ್ತವೆ. ಇದರಿಂದಾಗಿ ಸದಾ ನಾಣ್ಯಗಳ ಕೊರತೆ ಇರುತ್ತದೆ.ಕರಾವಳಿ ಜಿಲ್ಲೆಗಳಲ್ಲಿ ತಿರುಪತಿ ತಿಮ್ಮಪ್ಪನ ಹೆಸರಿನಲ್ಲಿ `ಮುಡಿಪು~ ಕಟ್ಟಿಡುವ ಪದ್ಧತಿ ಇದೆ. ಇತರ ಜಿಲ್ಲೆಗಳಲ್ಲೂ ಈ ಪದ್ಧತಿ ಇರಬಹುದು. ಕೆಲವರಂತೂ ಹಿತ್ತಾಳೆ ಬಿಂದಿಗೆ ಅಥವಾ ಹಂಡೆಯನ್ನು ಸೀಲ್ ಮಾಡಿ ಹುಂಡಿಯಾಗಿಸುತ್ತಾರೆ.ಕುಟುಂಬದ ಸದಸ್ಯರೆಲ್ಲ ಮುಡಿಪು ಹಂಡೆಯನ್ನು ಪೂಜಿಸಿ ಅದರೊಳಕ್ಕೆ  ನಾಣ್ಯಗಳನ್ನು ಹಾಕುತ್ತಾರೆ. ಒಂದು ವರ್ಷಕ್ಕೆ ಕನಿಷ್ಠ ಒಂದು ಸಾವಿರ ನಾಣ್ಯಗಳು ಹುಂಡಿ ಸೇರುತ್ತವೆ. 10 ವರ್ಷಕ್ಕೊಮ್ಮೆ ತಿರುಪತಿಗೆ ಸಾಗಿಸುವ ಈ ಹುಂಡಿಗಳಲ್ಲಿ ಭಾರೀ ಸಂಖ್ಯೆಯ ನಾಣ್ಯಗಳು ಇರುತ್ತವೆ. ಹೀಗೆ ಹುಂಡಿಗಳಲ್ಲಿ ಹಣ ಸಂಗ್ರಹವಾಗುವುದರಿಂದ ಸಾರ್ವಜನಿಕರಿಗೆ ಚಿಲ್ಲರೆ ಅಭಾವ ಉಂಟಾಗುತ್ತದೆ.ಈ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುವ ಅಗತ್ಯವಿದೆ. ದೇವಸ್ಥಾನ ಹಾಗೂ ಖಾಸಗಿ ಹುಂಡಿಗಳನ್ನು ವಾರಕ್ಕೊಮ್ಮೆ ತೆರೆದು ನಾಣ್ಯಗಳನ್ನು ಬ್ಯಾಂಕ್‌ನಲ್ಲಿ ಜಮೆ ಮಾಡುವ ಪದ್ಧತಿ ರೂಢಿಗೆ ಬಂದರೆ ನಾಣ್ಯಗಳ ಕೊರತೆ ನೀಗಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry