ನಾಣ್ಯ, ಸ್ಟ್ಯಾಂಪ್ ಪ್ರದರ್ಶನ

7

ನಾಣ್ಯ, ಸ್ಟ್ಯಾಂಪ್ ಪ್ರದರ್ಶನ

Published:
Updated:
ನಾಣ್ಯ, ಸ್ಟ್ಯಾಂಪ್ ಪ್ರದರ್ಶನ

ಅಪರೂಪ ಎನ್ನಬಹುದಾದ ಹವ್ಯಾಸವನ್ನು ಬೆಳಸಿಕೊಳ್ಳುವ ಮಂದಿ ಬಹಳ ಕಡಿಮೆ. ಅಂತಹ ಪಟ್ಟಿಯಲ್ಲಿ ವಿಶಿಷ್ಟವಾಗಿ ಕಾಣುವುದು ರಾಜೇಂದ್ರ ಮಾರು ಅವರ ಹೆಸರು.

ಹಳೆಯ ನಾಣ್ಯಗಳು ಮತ್ತು ಸ್ಟ್ಯಾಂಪ್‌ಗಳನ್ನು ಸಂಗ್ರಹಿಸುವುದು. ಅದನ್ನು ಸಂಗ್ರಹಿಸುವವರಿಗೆ ಬೆಂಬಲ ನೀಡುವುದು ಇವರ ವಿಶಿಷ್ಟ ಹವ್ಯಾಸಗಳಲ್ಲಿ ಒಂದು.ಈಚೆಗೆ ನಗರದಲ್ಲಿ ರಾಜೇಂದ್ರ ಮಾರು ಅವರ ಹಳೆಯ ನಾಣ್ಯಗಳ ಸಂಗ್ರಹ ಮತ್ತು ಸ್ಟ್ಯಾಂಪ್‌ಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಮೂರು ದಿನ ನಡೆದ ಈ ಪ್ರದರ್ಶನ ನಾಣ್ಯ ಮತ್ತು ಸ್ಟ್ಯಾಂಪ್ ಸಂಗ್ರಹ ಆಸಕ್ತರನ್ನು ಸೆಳೆಯಿತು.ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಮಹಾತ್ಮ ಗಾಂಧೀಜಿ ಬರೆದ ಪತ್ರ ಪ್ರದರ್ಶನದಲ್ಲಿತ್ದ್ತು. ಗಾಂಧೀಜಿ ಅವರ ಹೆಸರಿಗೆ ಬಂದಿದ್ದ, `ಮಹಾತ್ಮ ಗಾಂಧಿ, ಭಂಗಿ ಬಸ್ತಿ, ನವದೆಹಲಿ~ ಎಂದು ನಮೂದಿಸಿದ ಪತ್ರವೂ ಪ್ರದರ್ಶನಕ್ಕಿಟ್ಟಿದ್ದು ಕೂಡ ವಿಶೇಷವಾಗಿತ್ತು.ಅಲ್ಲದೇ, ಪ್ರಾಚೀನ ಇತಿಹಾಸವುಳ್ಳ ನಾಣ್ಯಗಳಾದ `ಗಾಂಧಾರ ಜನಪದದ (ಸಿ.600 ಬಿಸಿ) ನಾಣ್ಯಗಳು, ಶಾಕ್ಯ ಜನಪದದ (ಸಿ.600-500ಬಿಸಿ), ವಿದರ್ಭ ಜನಪದದ (ಸಿ.600 ಬಿಸಿ), ಈರೀಚ್ ಜನಪದದ (ಸಿ.500 ಬಿಸಿ), ಈರಾನ್ ವಿದೀಶಾ ಧರ್ಮದ ನಾಣ್ಯಗಳು, ಕುನಿದಾಸ್ ಡೈನಸ್ಟಿ, ಮಾಳ್ವರ ನಾಣ್ಯಗಳು ಹೀಗೆ ಪ್ರಾಗೈತಿಹಾಸಕಾಲದಿಂದ ಹಿಡಿದು ಇಂದಿನವರೆಗಿನ ಐದು ಪೈಸೆ, ಹತ್ತು ಪೈಸೆ ಮತ್ತು ಐವತ್ತು ಪೈಸೆ ನಾಣ್ಯಗಳನ್ನು ಪ್ರದರ್ಶನಕ್ಕಿಡಲಾಗಿತ್ತು.ಇದರೊಂದಿಗೆ ಬ್ರಿಟಿಷ್ ಇಂಡಿಯಾದ ನಾಣ್ಯಗಳು, ಈಸ್ಟ್ ಇಂಡಿಯಾ ಜಾರಿಗೆ ತಂದಂತಹ ಅಪರೂಪದ ನಾಣ್ಯಗಳು ಪ್ರದರ್ಶನಗೊಂಡಿದ್ದವು.ಈಗ ಅಪರೂಪ ಎನಿಸುವ, ಕಾಣಲು ಸಿಗದಿರುವ ಹಳೆಯ ಸ್ಟ್ಯಾಂಪ್‌ಗಳ ಪ್ರದರ್ಶನವೂ ಇಲ್ಲಿತ್ತು. ಐಸ್‌ಲ್ಯಾಂಡ್‌ನ ಸಂತ ಥಾಮಸ್ ಇರುವ ಸ್ಟ್ಯಾಂಪ್, ಶ್ರೀಲಂಕಾದ ಸ್ಟ್ಯಾಂಪ್‌ಗಳು, ಯುಎಸ್‌ಎ,  ನಮ್ಮ ದೇಶದ 1594, 1595 ರ ಸ್ಟ್ಯಾಂಪ್‌ಗಳು ಹೀಗೆ ಅನೇಕ ವಿಶೇಷಗಳಿರುವ ಸ್ಟ್ಯಾಂಪ್‌ಗಳಿದ್ದವು.ಈ ಪ್ರದರ್ಶನದಲ್ಲಿ ಹವ್ಯಾಸಿಗಳು ಬಂದು ತಮ್ಮ ಸಂಗ್ರಹವನ್ನು ಇಲ್ಲಿ ನೀಡುವ ಅಥವಾ ಕೊಳ್ಳುವ ಅವಕಾಶವನ್ನು ಕೂಡ ಕಲ್ಪಿಸಲಾಗಿತ್ತು.ಭಾರತ ದೇಶದ ಎಲ್ಲೆಡೆಯಿಂದ ಅಂದರೆ ನವದೆಹಲಿ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡುಗಳಿಂದ ಅನೇಕ ಸಂಗ್ರಹಕಾರರು ತಮ್ಮ ಸಂಗ್ರಹದ ಪ್ರದರ್ಶನ ಮಾಡಿದ್ದರು.  

`ನನಗೆ ಹಳೆಯದೆಲ್ಲವನ್ನೂ ಸಂಗ್ರಹ ಮಾಡುವ ಹುಚ್ಚು. ಏಕೆಂದರೆ ಹಳೆಯದೆಲ್ಲವೂ ಅಮೂಲ್ಯವಾದದ್ದು. ಅದರಲ್ಲೂ ವಿಶೇಷವಾಗಿ ನಾಣ್ಯ, ಸ್ಟ್ಯಾಂಪ್‌ಗಳನ್ನು ಸಂಗ್ರಹಿಸುವುದು. ಏಕೆಂದರೆ, ಅವೆಲ್ಲವೂ ಆಯಾ ಕಾಲಘಟ್ಟದ ಸಂಸ್ಕೃತಿ, ಪರಿಸರ, ಆರ್ಥಿಕ ಸ್ಥಿತಿಗತಿಗಳನ್ನು ಹೇಳುತ್ತದೆ~

`ನನ್ನಂತೆ ಎಲ್ಲ ಸಂಗ್ರಹಕಾರರಿಗೆ ಒಂದು ವೇದಿಕೆಯನ್ನು ಸೃಷ್ಟಿಸುವ ಹಂಬಲದಿಂದ ಈ ಪ್ರದರ್ಶನ~ ಎಂದು ರಾಜೇಂದ್ರ ಮಾರು ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಳ್ಳುತ್ತಾರೆ.

  -

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry