ಶುಕ್ರವಾರ, ಮೇ 14, 2021
27 °C

ನಾದಲೋಕದಲ್ಲಿ ತೇಲಿದ ಬಾನುಲಿಪ್ರಿಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಹಿಂದೂಸ್ತಾನಿ ಸಿತಾರ್ ವಾದನದ ಮೋಡಿ ಒಂದೆಡೆಯಾದರೆ, ಸುಮಧುರ ಗಾಯನ ಇನ್ನೊಂದೆಡೆ. ನಗರದ ಕುಮಾರ ಗಂಧರ್ವ ಸಭಾಂಗಣದಲ್ಲಿ ಭಾನುವಾರ ಸಂಜೆ `ನಾದ ಲೋಕ~ವೇ ಸೃಷ್ಟಿಯಾಗಿತ್ತು.ಹದಿನೆಂಟು ವರ್ಷದ ಬಳಿಕ ಬೆಳಗಾವಿಯಲ್ಲಿ ನಡೆದ `ಆಕಶಾವಾಣಿ ಸಂಗೀತ ಸಮ್ಮೇಳನ-2011~ ಬಾನುಲಿ ಪ್ರಿಯರ ಮನಸೂರೆಗೊಂಡಿತು. ಖ್ಯಾತ ಸಿತಾರ್ ವಾದಕ ಲಖನೌದ ಸತೀಶಚಂದ್ರ ಅವರು ರಾಗ ಪೂರಿಯಾ ಕಲ್ಯಾಣದೊಂದಿಗೆ ನಾದ ಲೋಕಕ್ಕೆ ಸಭಿಕರನ್ನು ಕರೆದೊಯ್ದರು.  ತಬಲಾ ಸಾಥ್ ನೀಡಿದ ಮುಕುಂದ ಭಾಲೆ ಅವರೊಂದಿಗೆ ಜುಗಲ್‌ಬಂದಿ ನಡೆಸಿ ಸಭಿಕರಿಂದ ಶಹಭಾಸ್‌ಗಿರಿ ಪಡೆದರು. ಬಳಿಕ ಮಿಶ್ರಗಾರಾ ಧುನ್ ಪ್ರಸ್ತುತಪಡಿಸುವ ಮೂಲಕ ಸಿತಾರ್ ರಸದೌತಣ ಉಣಬಡಿಸಿದರು. ಶ್ರೀಪಾದ ಹೆಗಡೆ ತಂಬೂರಿ ಸಾಥ್ ನೀಡಿದರು.ರಾಗಶ್ರೀ ರಾಗದೊಂದಿಗೆ ಗಾಯನ ಆರಂಭಿಸಿದ ಕೋಲ್ಕತ್ತಾದ ಖ್ಯಾತ ಹಿಂದೂಸ್ತಾನಿ ಗಾಯಕ ಸಮರೇಶ ಚೌಧರಿ ಅವರ ಸುಮಧುರ ಕಂಠದಿಂದ ತೇಲಿ ಬಂದ ಗಾಯನವು ಮೈನವಿರೇಳಿಸಿದವು. ಬಳಿಕ ಪ್ರಸ್ತುತ ಪಡಿಸಿದ ನಾಯಕಿಕಾನಡಾ ರಾಗದ ಗಾಯನದಲ್ಲಿ ಮೋಡಿ ಮಾಡಿದ ಸಮರೇಶ್, ಸಭಿಕರ ಚಪ್ಪಾಳೆಯಿಂದ ಪುಳಕಗೊಂಡರು. ಧಾರವಾಡ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಸಿ.ಯು. ಬೆಳ್ಳಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.