ನಾನು ನಿಮ್ಮ ಮನೆಗೆ ಬಂದ ಸೊಸೆ

7

ನಾನು ನಿಮ್ಮ ಮನೆಗೆ ಬಂದ ಸೊಸೆ

Published:
Updated:

ಬೆಂಗಳೂರು: `ನೆಂಟರು ಬಂದರೆ ಮನೆಯವರು ಊಟ ಹಾಕುವುದು ಸಂಪ್ರದಾಯ. ಅಂತೆಯೇ ನಾನು ನಿಮ್ಮ ಮನೆಗೆ `ಸೊಸೆ~ಯಾಗಿ ಬಂದಿದ್ದೇನೆ. ಊಟ ಹಾಕುವುದು ನಿಮಗೆ ಬಿಟ್ಟದ್ದು~ವಿಧಾನ ಪರಿಷತ್ತಿನಲ್ಲಿ ಬುಧವಾರ ಕಾಂಗ್ರೆಸ್‌ನ ವಿ.ಆರ್. ಸುದರ್ಶನ್ `ನಮಗೆ ಈವರೆಗೆ ಮುಖ್ಯಮಂತ್ರಿಗಳು ಊಟ ಬಿಡಿ ಕನಿಷ್ಠ ಟೀ ಕೂಡ ಕೊಡಿಸಿಲ್ಲ~ ಎಂದು ಛೇಡಿಸಿದಾಗ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ನೀಡಿದ ಉತ್ತರ ಇದು.`ನಿಮ್ಮ ಮನೆಗೆ `ಸೊಸೆ~ಯಾಗಿ ಬಂದಿದ್ದೇನೆ. ನೀವೇ ಊಟ ಹಾಕಿಸಿ ಬಿಡಿ~ ಎಂದು ಮುಖ್ಯ ಮಂತ್ರಿಗಳು ಹಾಸ್ಯ ಚಟಾಕಿ ಹಾರಿಸಿದರು. ಕೊನೆಗೆ ಊಟ ಕೊಡಿಸೋಣ ಎನ್ನುವ ರೀತಿ ಸನ್ನೆ ಮಾಡುತ್ತಾ ಮುಗುಳ್ನಗುತ್ತಲೇ ಕುಳಿತರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry