ನಾನು, ನೀನು ಜೋಡಿ; ಟಪಾಲು ಹಂಚೋಣ ನಡಿ

7

ನಾನು, ನೀನು ಜೋಡಿ; ಟಪಾಲು ಹಂಚೋಣ ನಡಿ

Published:
Updated:
ನಾನು, ನೀನು ಜೋಡಿ; ಟಪಾಲು ಹಂಚೋಣ ನಡಿ

ಸಣ್ಣ, ಪುಟ್ಟ ವಿಷಯಗಳಿಗೂ ಜಾತಿ, ಧರ್ಮಗಳ ಬಣ್ಣ ಬಳಿದು ಸಮಾಜದ ಸ್ವಾಸ್ಥ್ಯ ಕೆಡಿಸುವವರು ಅನೇಕರು ಸಿಗುತ್ತಾರೆ. ಅದಕ್ಕೆ ಅಪವಾದ ಎನ್ನುವಂತೆ ಮುಂಡರಗಿಯ ಅಂಚೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಜೀರ ಅಹಮ್ಮದ ಖಾನ್ ಎಸ್.ಘೋರಿ ಹಾಗೂ  ಸತ್ಯನಾಥ ಶ್ರಿನಿವಾಸಾಚಾರ್ಯ ಇನಾಮದಾರ ಅವರ ಗೆಳೆತನವು ದೋಸ್ತಿಗೆ ಧರ್ಮ ಅಡ್ಡಿಯಾಗ ಲಾರದು ಎನ್ನುವುದನ್ನು ತೋರಿಸಿ ಕೊಟ್ಟಿದೆ.ಕಳೆದ 30ವರ್ಷಗಳ ಹಿಂದೆ ಅಂಚೆ ಇಲಾಖೆಯ ಗುತ್ತಿಗೆ ನೌಕರರ ಸಂಘದಲ್ಲಿ ಮೊಳಕೆಯೊಡೆದ ಇವರ ಸ್ನೇಹ ಈಗಲೂ ನಿರಾತಂಕವಾಗಿ ಮುಂದುವರಿದಿದೆ. ಅಂದಿನ ಗುತ್ತಿಗೆ ನೌಕರರ ಸಂಘದಲ್ಲಿ ಎನ್.ಎಸ್.ಘೋರಿ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಎಸ್.ಎಸ್.ಇನಾಮದಾರ ಸಹ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಸಿದ್ದರು. ಹಳೆಯದನ್ನೆಲ್ಲ ವಿನೀತರಾಗಿ ಸ್ಮರಿಸಿಕೊಳ್ಳುವ ಈ ಸ್ನೇಹಿತರು ಅಂದಿನ ಕಷ್ಟದ ದಿನಗಳನ್ನು ಆಗಾಗ ಮೆಲುಕು ಹಾಕುತ್ತಾರೆ.  1970ರ ದಶಕದಲ್ಲಿ ಮಾಸಿಕ ಕೇವಲ 75ರೂಪಾಯಿಗೆ ಗುತ್ತಿಗೆ ನೌಕರರಾಗಿ ಕೆಲಸಕ್ಕೆ ಸೇರಿದ ಎನ್.ಎಸ್.ಘೋರಿ ಹಾಗೂ ಎಸ್.ಎಸ್.ಇನಾಮದಾರ ನಂತರದ ದಿನಗಳಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಅಂಚೆಪೇದೆಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಯಾವುದೇ ಆರೋಪ, ಅಪರಾಧ ಹಾಗೂ ಗೊಂದಲಗಳಲ್ಲಿ ಸಿಲುಕದೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿರುವ ಅವರು ಸಾರ್ವಜನಿಕರಿಂದ ಹಾಗೂ ಇಲಾಖೆಯಿಂದ ಮೆಚ್ಚಿಗೆ ಗಳಿಸಿದ್ದಾರೆ. ಈರ್ವರು ಸ್ನೇಹಿತರು ಅನ್ಯ ಧರ್ಮಕ್ಕೆ ಸೇರಿದವರಾಗಿದ್ದರೂ ಅವರವರ ಹಬ್ಬ ಹರಿದಿನಗಳಂದು ಒಬ್ಬರಿಗೊಬ್ಬರು ಶುಭಾಶಯ ಹಾಗೂ ಕಾಣಿಕೆಗಳನ್ನು ಪ್ರೀತಿಯಿಂದ ವಿನಿಮಯ ಮಾಡಿ ಕೊಳ್ಳುತ್ತಾರೆ, ತಮ್ಮ ತಮ್ಮ ಮನೆಯಲ್ಲಿ ಜರುಗುವ ಪ್ರತಿಯೊಂದು ಸಮಾರಂಭ ದಲ್ಲಿ ತಮ್ಮ ಕುಟುಂಬದ  ಸದಸ್ಯರೊಡನೆ ಭಾಗವಹಿಸಿ ಸಂಭ್ರಮದಿಂದ ಓಡಾಡುತ್ತಾರೆ.  ಏನೆ ಮಾಡಿದರೂ ಈರ್ವರು ಸ್ನೇಹಿತರು ಒಬ್ಬರಿಗೊಬ್ಬರನ್ನು ವಿಚಾರಿಸಿ ಸರಿ ತಪ್ಪುಗಳನ್ನು ಪರಾಮರ್ಶಿಸಿ ಇಬ್ಬರೂ ಸೇರಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಕಳೆದ ವರ್ಷ ಈರ್ವರು ಒಂದೊಂದು ದ್ವಿಚಕ್ರ ವಾಹನ (ಟಿವಿಎಸ್ )ಖರೀದಿಸಿದ್ದು ವಾಹನದ ನೋಂದಣಿ ಸಂಖ್ಯೆಯನ್ನು ಪಡೆದು ಕೊಂಡಿರ‌್ದುವುದು ಅವರ ಗಾಢ ಸ್ನೇಹಕೊಂದು ಉತ್ತಮ ಉದಾಹರಣೆ. ಎನ್.ಎಸ್.ಘೋರಿ ಯವರ ವಾಹನ ಸಂಖ್ಯೆ ಕೆಎ26 2040 ಎಸ್.ಎಸ್.ಇನಾಮದಾರ ಅವರ ವಾಹನ ಸಂಖ್ಯೆ ಕೆಎ26 2041.     ದಿನನಿತ್ಯ ಮುಂಜಾನೆ ಅಂಚೆ ಕಚೇರಿಗೆ ಒಟ್ಟಿಗೆ ಬರುವ ಇವರಿಬ್ಬರು ನಂತರ ಕಚೇರಿಯಲ್ಲಿ ಮುಖಾ ಮುಖಿಯಾಗಿ ಕುಳಿತು ನಗುನಗುತ್ತಾ ಅಂದು ಪಟ್ಟಣದಲ್ಲಿ ವಿತರಿಸಬೇಕಿದ್ದ ಟಪಾಲುಗಳನ್ನು ವಿಂಗಡಿಸಿ ಕೊಳ್ಳುತ್ತಾರೆ. ಕಳೆದ ಹಲವು ವರ್ಷಗಳಿಂದ ದಿನವಿಡಿ ಒಟ್ಟಾಗಿ ಕೆಲಸ ಮಾಡುತ್ತಾ ಪಟ್ಟಣದ  ಜನಮನವನ್ನು ಗೆದ್ದಿರುವ ಸ್ನೇಹಿತರು ಇತರರಿಗೆ ಮಾದರಿಯಾಗಿದ್ದಾರೆ.                          

                                      

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry