ನಾನು ಬಂದಿರೊ ಟೈಮ್ ಸರಿಯಾಗಿದೆ: ಮಂಡ್ಯ ರಮೇಶ

7

ನಾನು ಬಂದಿರೊ ಟೈಮ್ ಸರಿಯಾಗಿದೆ: ಮಂಡ್ಯ ರಮೇಶ

Published:
Updated:

ಗುಲ್ಬರ್ಗ: `ಗುಲ್ಬರ್ಗದಲ್ಲಿ ಭಾರಿ ಬಿಸಿಲು, ಚಳಿ ಇರುತ್ತದೆ ಎಂದು ಪೂರ್ವಾಗ್ರಹವಿತ್ತು. ಇಲ್ಲಿಗೆ ಬಂದ್ಮೆಲೆ ಹಾಂಗೇನು ಅನ್ಸ್‌ತಿಲ್ಲ. ಬಹುಶಃ ನಾನು ಬಂದಿರೋ ಟೈಮ್ ಸರಿಯಾಗಿದೆ. ಬಹಳ ವರ್ಷಗಳ ಬಳಿಕ ಗುಲ್ಬರ್ಗಕ್ಕೆ ಬಂದಿದೀನಿ~ ಎಂದು ನಟ ಮಂಡ್ಯ ರಮೇಶ ಪತ್ರಕರ್ತರ ಜತೆ ಭಾನುವಾರ ರಂಗಭೂಮಿಯ ಆಗುಹೋಗುಗಳ ಕುರಿತು ಮಾತು ಆರಂಭಿಸಿದರು.



`ಕಲಬುರ್ಗಿ ರಂಗತೋರಣ~ವು ಫೆ.3ರಿಂದ 7ರ ವರೆಗೆ ಇಲ್ಲಿನ `ಡಾ. ಎಸ್.ಎಂ. ಪಂಡಿತ ರಂಗಮಂದಿರ~ದಲ್ಲಿ ಆಯೋಜಿರುವ ನಾಟಕೋತ್ಸವದಲ್ಲಿ `ನಟನ~ ನಾಟಕ ತಂಡವು ನಾಟಕಗಳನ್ನು ಪ್ರದರ್ಶಿಸುತ್ತಿದೆ. ಶನಿವಾರ ಪ್ರದರ್ಶನವಾದ `ಗಾಂಧಿ- ಅಂಬೇಡಕರ್~ ನಾಟಕಕ್ಕೆ ದೊರೆತ ಪ್ರತಿಕ್ರಿಯೆ ಹಾಗೂ ನಟನ ಕಟ್ಟಿ ಬೆಳೆಸುತ್ತಿರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ  ಮಂಡ್ಯರಮೇಶ ವಿಚಾರ ಹಂಚಿಕೊಂಡರು.



ಗುಲ್ಬರ್ಗ ಪ್ರೇಕ್ಷಕರ ಪ್ರತಿಕ್ರಿಯೆ ಅಗಾಧವಾಗಿ ವ್ಯಕ್ತವಾಗಿದ್ದನ್ನು ನೋಡಿ, ವೃತ್ತಿರಂಗಭೂಮಿಯಲ್ಲಿ ಹೊಸ ಆಯಾಮ, ಪ್ರಯೋಗಕ್ಕೆ ತೆರೆದುಕೊಳ್ಳುವ ಹುಮ್ಮಸ್ಸು ಹುಟ್ಟಿಕೊಂಡಿದೆ. ಆಧುನಿಕ ರಂಗಭೂಮಿಯ ಮೂಲಕ ಭಾಷೆಯನ್ನು `ನುಡಿಸುವ~ ಕೆಲಸವನ್ನು ಇನ್ನಷ್ಟು ಗಟ್ಟಿಗೊಳಿಸುವ ಛಲ ಬಂದಿದೆ. `ಗಾಂಧಿ-ಅಂಬೇಡಕರ್~ ನಾಟಕ ಗುಲ್ಬರ್ಗದಲ್ಲಿ ನಡೆದಿದ್ದು 92ನೇ ಪ್ರಯೋಗ.  ನಾಟಕದ ಮೊದಲ ಪ್ರಯೋಗದಲ್ಲಿ ಸಿಕ್ಕಿದ್ದ ಪ್ರತಿಕ್ರಿಯೆ ಇಲ್ಲಿ ವ್ಯಕ್ತವಾಯಿತು.



ಈ ಭಾಗದ ಹಿರಿಯ ನಾಟಕಕಾರದ ಚಂದ್ರಕಾಂತ ಕುಸನೂರ, ಪ್ರಭಾಕರ ಸಾತಖೇಡ ಅವರು ಮಾಡಿದ ಪ್ರಯೋಗಗಳ ಫಲಶೃತಿ ಇದಾಗಿರಬಹುದು. ಮೈಸೂರಿನ `ರಂಗಾಯಣ~ ಹಾಗೂ ಶಿವಮೊಗ್ಗದ `ನೀನಾಸಂ~ ಆರಂಭವಾದಾಗ ಮೊದಲನೆ ತಂಡದಲ್ಲಿ ನಾನಿದ್ದೆ. ಇವರೆಡೂ ನಾಟಕ ತಂಡಗಳು ನಿರಂತರತೆ ಹಾಗೂ ಪ್ರಯೋಗಶೀಲತೆಯನ್ನು ಪ್ರದರ್ಶಿಸುತ್ತಿವೆ.



ಗ್ರಾಮೀಣ ಭಾಗದ ಜಾನಪದ ಕಲೆಗಳು, ಭಾಷಾ ಸೊಗಡನ್ನು ಆಯಾ ಪ್ರಾದೇಶಿಕ ಮಟ್ಟದಲ್ಲಿ ಸತ್ವಪೂರ್ಣಗೊಳಿಸುವ ಸಲುವಾಗಿ `ನಟನ~ ಎನ್ನುವ ನಾಟಕ ಶಾಲೆಯನ್ನು ಮೈಸೂರಿನಲ್ಲಿ ಆರಂಭಿಸಿದ್ದೇನೆ. ಬೇರೆಬೇರೆ ವೃತ್ತಿ, ಬೇರೆಬೇರೆ ಜಾತಿ, ಬೇರೆಬೇರೆ ಹವ್ಯಾಸ, ಎಲ್ಲಾ ವಯಸ್ಸಿನ ಜನರು ಶಾಲೆಗೆ ಸೇರಿಕೊಂಡಿದಾರೆ. 30 ಮಕ್ಕಳದ್ದು ಒಂದು ತಂಡ, 40 ಜನ ದೊಡ್ಡವರದ್ದು ಇನ್ನೊಂದು ತಂಡವಿದೆ.



`ಕರ್ನಾಟಕದಲ್ಲಿರುವ ಕೃಷಿಕರು, ವ್ಯಾಪಾರಿಗಳು, ಜನಪದ ಜನರು ಆಯಾ ಪ್ರದೇಶಕ್ಕೆ ಅನುಗುಣವಾಗಿ ಭಾಷೆಯನ್ನು ಕೇವಲ ಆಡುವುದಿಲ್ಲ, ಭಾಷೆಯನ್ನು ಭಾವನೆಯೊಂದಿಗೆ ನುಡಿಸುತ್ತಾರೆ~ ಎಂದು  ಪ್ರಾದೇಶಿಕವಾಗಿ ಬದಲಾಗುವ ಕನ್ನಡಭಾಷೆ ಬಗ್ಗೆ ನನ್ನ ಗುರುಗಳಾದ ಬಿ.ವಿ. ಕಾರಂತರು ಹೇಳುತ್ತಿದ್ದರು.



128 ಉಪವಿಭಾಗದಲ್ಲಿ ಕನ್ನಡ ಭಾಷೆ ಇದ್ದು, ಒಂದೇ ನಾಟಕವನ್ನು ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಸರಳವಾಗಿ ನುಡಿಸುವ ಕೆಲಸವನ್ನು ನಟನ ತಂಡವು ಪ್ರಯೋಗ ರೀತಿಯಲ್ಲಿ ಮಾಡುತ್ತಿದೆ. `ನಟನ~ ನಾಟಕ ತಂಡವು ಇದೀಗ ದೇಶ, ವಿದೇಶಗಳಲ್ಲಿ ನಾಟಕ ಪ್ರದರ್ಶನ ಮಾಡುತ್ತಿದೆ. ಸರಳವಾಗಿ ಹೇಳಿದರೆ ಎಲ್ಲ ಭಾಷೆಗಳು ಪ್ರೇಕ್ಷಕನಿಗೆ ತಲುಪುತ್ತದೆ ಎಂದರು.



ಕನಸುಗಳು ಬೆಟ್ಟದಷ್ಟಿವೆ. ಗುಲ್ಬರ್ಗದಲ್ಲೂ ಕನಿಷ್ಠ `ರಜಾ ಮಜಾ~ ನಾಟಕ ಶಿಬಿರ ಮಾಡುವ ಆಸೆ ಇದೆ. ಮೈಸೂರಿನಲ್ಲಿ ಪ್ರತಿ ವರ್ಷ ಏಪ್ರಿಲ್ 12ರಿಂದ 28 ದಿನ ರಜಾಮಜಾ ಶಿಬಿರ ಆಯೋಜಿಸಲಾಗುತ್ತಿದೆ. ಕಂಸಾಳೆ, ಯಕ್ಷಗಾನದ ಬಗ್ಗೆ ಧ್ವನಿ ಹಾಗೂ ಭಾಷೆಯ ಬಳಕೆ ಬಗ್ಗೆ ಶಿಬಿರದಲ್ಲಿ ತರಬೇತಿ ನೀಡಲಾಗುತ್ತದೆ. ಹಿರಿಯ ರಂಗ ಕಲಾವಿದರಾದ ಸಿ.ಆರ್. ಸಿಂಹ, ಉಮಾಶ್ರೀ ಹಾಗೂ ಬಿ. ಜಯಶ್ರೀ ಅವರು ಶಿಬಿರಕ್ಕೆ ಬಂದು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಾರೆ.



ಮುಖ್ಯವಾಗಿ ಇಂಗ್ಲಿಷ್ ಭಾಷೆ ಗೊತ್ತಿಲ್ಲದ ಕಾರಣ, ನಾಟಕ.. ಇತ್ಯಾದಿ ರಂಗ ಚಟುವಟಿಕೆಗಳಿಗೆ ಹಣ ನೀಡಲು ಆಯೋಜಕರನ್ನು ಹುಡುಕುವುದು  ಕಷ್ಟವಾಗುತ್ತಿದೆ. ಆರ್ಥಿಕ ಬಲವನ್ನು ನೋಡಿಕೊಂಡು ಒಂದೊಂದೆ ಕನಸನ್ನು ಸಾಕಾರಗೊಳಿಸುತ್ತಿದ್ದೇನೆ. ಕಾಲ ಕೂಡಿ ಬಂದರೆ ಧಾರಾವಾಹಿಯೊಂದನ್ನು ನಿರ್ದೇಶಿಸುವ ಆಸೆಯೊಂದು ಮನಸ್ಸಿನ ಮೂಲೆಯಲ್ಲಿದೆ ಎಂದರು.



ಮಂಡ್ಯ ರಮೇಶ ಅವರು ನಟಿಸಿದ ಮೊದಲ ಕನ್ನಡ ಚಿತ್ರ `ಜನುಮದ ಜೋಡಿ~, ಈಚೆಗೆ `ಸಾವಿತ್ರಿ~ ಸೇರಿದಂತೆ ಮೂರು ಧಾರವಾಹಿಗಳಲ್ಲಿ ನಟಿಸುತ್ತಿದ್ದಾರೆ.

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry