ನಾನು ಶಾಂತಿದೂತ: ಅಲಿ ಜಫರ್

7
ಬೊಂಬಾಟ್ ಬಾಲಿವುಡ್

ನಾನು ಶಾಂತಿದೂತ: ಅಲಿ ಜಫರ್

Published:
Updated:
ನಾನು ಶಾಂತಿದೂತ: ಅಲಿ ಜಫರ್

ಪಾಕಿಸ್ತಾನಿ ಗಾಯಕ ಮತ್ತು ನಟ ಅಲಿ ಜಫರ್ ತಮ್ಮನ್ನು `ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಶಾಂತಿದೂತ' ಎಂದು ಬಣ್ಣಿಸಿಕೊಂಡಿದ್ದಾರೆ.


2003ರಲ್ಲಿ `ಶರಾರತ್' ಚಿತ್ರಕ್ಕೆ ಹಾಡುವ ಮೂಲಕ ಬಾಲಿವುಡ್ ಪ್ರವೇಶಿಸಿದ ಅಲಿ ಜಫರ್ `ತೇರೆ ಬಿನ್ ಲಾಡೆನ್' ಚಿತ್ರದಲ್ಲಿ ಹಾಡಿ, ನಟನೆಯನ್ನೂ ಮಾಡಿದರು. ನಂತರ `ಲವ್ ಕ ದಿ ಎಂಡ್', `ಮೇರೆ ಬ್ರದರ್ ಕಿ ದುಲ್ಹನ್', `ಲಂಡನ್ ಪ್ಯಾರಿಸ್ ನ್ಯೂಯಾರ್ಕ್' ಚಿತ್ರಗಳಲ್ಲಿ ನಟಿಸಿದರು.

ಇದೀಗ ಅವರು ನಟಿಸಿರುವ `ಛಶ್ಮೆ ಬದ್ದೂರ್', `ಅಮೀನ್ ಕಿ ಆಶಾ', `ಕಿಲ್ ದಿಲ್', `ಗೋಲ್‌ಮಾಲ್ 4', `ತೇರೆ ಬಿನ್ ಲಾಡೆನ್-3' ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದೆ. `ಛಶ್ಮೆ ಬದ್ದೂರ್' ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದಿವೆ.`ನನ್ನನ್ನು ಬಾಲಿವುಡ್ ಸೋದರನಂತೆ ಸ್ವೀಕರಿಸಿದೆ. ನನಗೆ ಪಾಕಿಸ್ತಾನ ಎಷ್ಟು ಮುಖ್ಯವೋ ಭಾರತವೂ ಅಷ್ಟೇ ಮುಖ್ಯ. ನನ್ನ ಪ್ರತಿಭೆಗೆ ವೇದಿಕೆ ನೀಡಿದ ಭಾರತೀಯರ ಮನಸ್ಸು ದೊಡ್ಡದು' ಎಂದು ಅಲಿ ಹೇಳಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry