ನಾನು ಸಿ.ಎಂ ಆಗಿದ್ದರೆ, ಸಚಿವರನ್ನು ಕಿತ್ತು ಹಾಕುತ್ತಿದ್ದೆ

7
ವಿಧಾನಸೌಧ ಗೋಡೆ ಒಡೆದ ಪ್ರಕರಣ: ಪೂಜಾರಿ ಕಿಡಿ

ನಾನು ಸಿ.ಎಂ ಆಗಿದ್ದರೆ, ಸಚಿವರನ್ನು ಕಿತ್ತು ಹಾಕುತ್ತಿದ್ದೆ

Published:
Updated:

ಮಂಗಳೂರು: ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ವಿಧಾನ ಸೌಧದ ಗೋಡೆ ಒಡೆದಿದ್ದಕ್ಕೆ ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಕಿಡಿ ಕಾರಿದ್ದಾರೆ.‘ನಾನು ಮುಖ್ಯಮಂತ್ರಿಯಾಗಿರುತ್ತಿದ್ದರೆ, ಆಂಜನೇಯ ಅವರು ಮನೆಯನ್ನು ತಲುಪುವ ಮೊದಲೇ ಸಂಪುಟದಿಂದ ಕಿತ್ತುಹಾಕುತ್ತಿದ್ದೆ’ ಎಂದು ಅವರು ಹೇಳಿದರು.ಇಲ್ಲಿನ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿಮಗೆ ಅಧಿಕಾರ ಸಿಕ್ಕಿದರೆ ಸಾಕಾಗುವುದಿಲ್ಲವೇ? ಎಂಥಾ ಢಂಬಾ­ಚಾರ ಇದು. ಇಷ್ಟರವರೆಗೆ ವಿಧಾನಸೌಧದ ಆ ಕೊಠಡಿ­ಯಲ್ಲಿ ಯಾರೂ ಆಡಳಿತವನ್ನೇ ನಡೆಸಿಲ್ಲವೇ?’ ಎಂದು ಅವರು ಪ್ರಶ್ನಿಸಿದರು.‘ಎಲ್ಲಾ ಪಕ್ಷದವರೂ ಈ ಕೆಟ್ಟ ಸಂಪ್ರದಾಯವನ್ನು ಮುಂದು­­ವರಿಸು­ತ್ತಿದ್ದಾರೆ’ ಎಂದು ಅವರು ಬೇಸರ ವ್ಯಕ್ತಪ­ಡಿಸಿದರು. ಡಿ.ಕೆ.ಶಿವಕುಮಾರ್‌ ಹಾಗೂ ರೋಷನ್‌ಬೇಗ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದನ್ನು ಪೂಜಾರಿ ಸಮರ್ಥಿ­ಸಿಕೊಂಡರು.‘ಎಸ್‌.ಆರ್‌.ಹಿರೇಮಠ್‌ ಅವರು ಈ ಇಬ್ಬರು ಸಚಿವರ ವಿರುದ್ಧ ಬಿಡುಗಡೆ ಮಾಡಿದ ದಾಖಲೆಗಳಲ್ಲಿ ಹೊಸ ಅಂಶಗಳೇನೂ ಇಲ್ಲ’ ಎಂದು ಪೂಜಾರಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry