ಶುಕ್ರವಾರ, ಜೂನ್ 25, 2021
28 °C

ನಾನು ಹರಕೆಯ ಕುರಿ ಅಲ್ಲ:ಅಜರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್‌): ‘ಉತ್ತರ­ಪ್ರದೇಶದ ಮೊರದಾಬಾದ್‌ ಕ್ಷೇತ್ರದಿಂದ ಈ ಬಾರಿ ಸ್ಪರ್ಧಿಸುವುದಕ್ಕೆ ಹಿಂದೇಟು ಹಾಕಿದ ಕಾರಣ  ರಾಜಸ್ತಾನದ  ಅವಳಿ ನಗರ ಟಂಕ್‌ಸವಾಯ್‌ ಮಾಧೋಪುರ­ದಿಂದ ಟಿಕೆಟ್‌ ನೀಡಿ ಮೊಹಮ್ಮದ್‌ ಅಜರುದ್ದೀನ್‌ ಅವರನ್ನು ಹರಕೆಯ ಕುರಿ ಮಾಡಲಾಗಿದೆ’ ಎಂಬ ಮಾತು ಅಜರ್‌ ಪಿತ್ತ ಕೆರಳಿಸಿದೆ.‘ಇದು ಪಕ್ಷದ ನಿರ್ಧಾರ. ನಾನೇನು ಹರಕೆಯ ಕುರಿ ಅಲ್ಲ. ಮೊರಾದಾಬಾದ್‌ ಬಿಡುವುದಕ್ಕೆ ನನಗೆ ಯಾವ ಕಾರಣವೂ ಇಲ್ಲ. ಅಲ್ಲಿ ಚೆನ್ನಾಗಿ ಕೆಲಸ ಮಾಡಿದ್ದೇನೆ. ಐದು ವರ್ಷಗಳಲ್ಲಿ ಈ ಭಾಗದಲ್ಲಿ ಮೂಲಸೌಕರ್ಯ ಕಲ್ಪಿಸಿ­ಕೊಡಲು ಕೋಟಿಗಟ್ಟಲೆ ಹಣ ಖರ್ಚು ಮಾಡಿದ್ದೇನೆ. ಅದೆಷ್ಟೋ ಜನರು ಉದ್ಯೋಗ ಪಡೆಯಲು ನೆರವು ನೀಡಿದ್ದೇನೆ’ ಎಂದು ಅಜರ್‌  ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.ಮಾಜಿ ಕ್ರಿಕೆಟಿಗ ಹೇಳಿದ್ದು...

*ಮೊರಾದಾಬಾದ್‌ ಕ್ಷೇತ್ರದಲ್ಲಿ ಜನಸೇವೆ ಮಾಡಿದ್ದಕ್ಕೆ ಖುಷಿ ಇದೆ. ಈಗ ನಾನು  ಟಂಕ್‌ಸವಾಯ್‌ ಮಾಧೋಪುರದಿಂದ ಸ್ಪರ್ಧಿಸಬೇಕೆಂದು ಪಕ್ಷ ಬಯಸಿದೆ.  ಅದಕ್ಕೆ ಒಪ್ಪಿಗೆ ಸೂಚಿಸಿದ್ದೇನೆ*ಒಬ್ಬ ಕ್ರಿಕೆಟಿಗನಾಗಿ ನಾನು ಎಲ್ಲ ರೀತಿಯ ಪಿಚ್‌ನಲ್ಲಿಯೂ ಬ್ಯಾಟಿಂಗ್‌ ಮಾಡಲು ಸಿದ್ಧನಿರಬೇಕು. ಎಲ್ಲ ಸಮಯದಲ್ಲಿಯೂ ಬ್ಯಾಟಿಂಗ್‌ಗೆ ಅನುಕೂಲವಾದ  ಪಿಚ್‌ ಕೇಳಲು ಸಾಧ್ಯವಿಲ್ಲ*ನನ್ನ ಪಕ್ಷಕ್ಕಾಗಿ ಈ ಕ್ಷೇತ್ರದಿಂದ ಗೆಲ್ಲಲು  ಶಕ್ತಿ ಮೀರಿ ಪ್ರಯತ್ನಿಸುವೆ. ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಕಾಂಗ್ರೆಸ್‌ ನಾಯಕತ್ವ  ನನ್ನನ್ನು ಇಲ್ಲಿಂದ ಕಣಕ್ಕಿಳಿಸಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ*ಆರಿಸಿ ಬಂದರೆ ಇಲ್ಲಿ ವಿಶೇಷವಾಗಿ ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸುವೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.