ನಾಪತ್ತೆಯಾದ ನಟಿ ಚೆನ್ನೈನಲ್ಲಿ ಪತ್ತೆ

7

ನಾಪತ್ತೆಯಾದ ನಟಿ ಚೆನ್ನೈನಲ್ಲಿ ಪತ್ತೆ

Published:
Updated:

ಮುಂಬೈ (ಪಿಟಿಐ): ಹತ್ತು ದಿನಗಳ ಹಿಂದೆ ಸ್ಟೇಜ್‌ ಷೋ ನೀಡಲು ತೆರಳುತ್ತಿದ್ದಾಗ  ಅಚಾನಕ್ಕಾಗಿ ಕಣ್ಮರೆಯಾಗಿದ್ದ ಮರಾಠಿ ನಟಿ ಅಲ್ಕಾ ಪುಣೆವರ್‌ ಚೆನ್ನೈನಲ್ಲಿ ತನ್ನ ಪ್ರಿಯಕರನ ಜತೆ ಕಾಣಿಸಿಕೊಡಿದ್ದಾಳೆ.ಅಲ್ಕಾ ಪ್ರಿಯಕರ ಅಲೋಕ್‌ ಪಾಲಿವಾಲ್‌ ಆಕೆಗಿಂತ ದುಪ್ಪಟ್ಟು  ವಯಸ್ಸಿನವ.‘ಡಿ. 27ರಂದು ನವಿಮುಂಬೈನ ಉರಾನ್‌ನಲ್ಲಿ ಸ್ಟೇಜ್‌ ಷೋ ನೀಡಲು ಅಲ್ಕಾ ತೆರಳಿದ್ದಳು. ಕಾರ್ಯಕ್ರಮದ ನಂತರ ಪುಣೆಯಲ್ಲಿ ಮತ್ತೊಂದು ಷೋಗೆ ಹೋಗಬೇಕಿತ್ತು. ಈ ನಡುವೆ, ಅಲ್ಕಾ, ಆಕೆಯ ಪ್ರಿಯಕರ ಹಾಗೂ ಮತ್ತೊಬ್ಬ ಸ್ನೇಹಿತ ಸೇರಿ ರಾಯಗಡ ಜಿಲ್ಲೆಯ ಖೊಪೊಲಿಯಲ್ಲಿ ‘ಅಪ­ಘಾತ’ದ ನಾಟಕ ಆಡಿದರು. ಅಲ್ಕಾ ಕಾರು 700 ಅಡಿ ಕಂದರಕ್ಕೆ ಬಿದ್ದಿತ್ತು. ಈ ಜೋಡಿ ಓಡಿಹೋಗುವುದಕ್ಕಾಗಿ ಹೆಣೆದ ನಾಟಕ ಇದಾಗಿತ್ತು’ ಎಂದು ನವಿಮುಂಬೈ ಪೊಲೀಸರು ತಿಳಿಸಿದ್ದಾರೆ.ಇವರಿಬ್ಬರ ಸ್ನೇಹಿತ ಸಂಜಯ್‌ ಸೋನ್‌­ಕರ್‌ ಪೊಲೀಸರ ಕೈಗೆ ಸಿಕ್ಕಿ­ಬಿದ್ದಾಗ ನಿಜ ಬಯಲಾಯಿತು. ಈ ಪ್ರಕರಣ­ದಲ್ಲಿ ತನ್ನ ತಪ್ಪು ಒಪ್ಪಿ­ಕೊಂ­ಡಿರುವ ಸೋನ್‌­ಕರ್‌ ಡಿ.27ರ ರಾತ್ರಿ­ಯಿಂದ ಹಿಡಿದು 28ರ ಬೆಳಿಗ್ಗೆ­ವರೆಗೆ ನಡೆದ ಘಟನೆ­ಯನ್ನು ಚಾಚೂ­ತಪ್ಪದೇ ಹೇಳಿದ್ದಾನೆ.ಈ ಜೋಡಿಯನ್ನು ಚೆನ್ನೈಗೆ ಕಳಿಸಲು ಈ ನಾಟಕ ಮಾಡಿದ್ದಾಗಿ ವಿಚಾರಣೆ ವೇಳೆ ಸೋನ್‌ಕರ್‌ ಒಪ್ಪಿಕೊಂಡಿದ್ದಾನೆ. ನಾಪತ್ತೆಯಾಗುವ ಮುನ್ನ ಅಲ್ಕಾ ಮತ್ತು ಅಲೋಕ್‌ ಸಾಕಷ್ಟು ಬಾರಿ ಮೊಬೈಲ್‌­ನಲ್ಲಿ ಸಂಭಾಷಣೆ ನಡೆಸಿ­ದ್ದಾರೆ. ಇದು ಪ್ರಕರಣ ಭೇದಿಸುವಲ್ಲಿ ಪೊಲೀಸರಿಗೆ ಸಹಕಾರಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry