ಶುಕ್ರವಾರ, ಮೇ 20, 2022
20 °C

ನಾಪೋಕ್ಲು: ರಂಜಿಸಿದ ಬೈಕ್ ರಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಪೋಕ್ಲು: ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ಬಳಿಯ ಗದ್ದೆಯಲ್ಲಿ ಭಾನುವಾರ ಮೋಟರ್ ಬೈಕ್‌ಗಳದ್ದೇ ಕಾರುಬಾರು.ಕೂರ್ಗ್ ಬೈಕ್ ಲಿಂಕ್ಸ್ ಮತ್ತು ಫ್ರೆಂಡ್ಸ್ ಆಯೋಜಿಸಿದ್ದ ಕೂರ್ಗ್ ಬೈಕ್ ಟ್ರ್ಯಾಕ್-2012 ಇಲ್ಲಿನ ಚೆರಿಯಪರಂಬು ಗದ್ದೆಯಲ್ಲಿ ಭಾನುವಾರ ಆರಂಭವಾಯಿತು.ಕ್ರೀಡಾಪಟುಗಳು ಕೆಸರುಗದ್ದೆಯಲ್ಲಿ ಬಿದ್ದು, ಎದ್ದು, ಕೆಸರು ಚಿಮ್ಮಿಸಿ ಬೈಕ್ ಓಡಿಸಿದರು. 1.2 ಕಿಮೀ ಅಂತರ ಕ್ರಮಿಸಬೇಕಿತ್ತು. ಕೂರ್ಗ್ ಬಾಯ್ಸ, ಇಂಡಿಯನ್ ಓಪನ್, ಫೋರ್ ಸ್ಟ್ರೋಕ್, ನಾವೆಲ್ಸ್ ಹಾಗೂ ಇಂಟರ್ ಮೀಡಿಯೆಟ್ ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಎಲ್ಲ ವಿಭಾಗದಲ್ಲೂ ಅಧಿಕ ಸಂಖ್ಯೆಯಸ್ಪರ್ಧಾಳುಗಳು ಪಾಲ್ಗೊಂಡಿದ್ದರು.ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಲೀಂ ಹ್ಯಾರೀಸ್ ರ‌್ಯಾಲಿಗೆ ಚಾಲನೆ ನೀಡಿದರು. ಠಾಣಾಧಿಕಾರಿ ಪುನೀತ್, ಮನ್ಸೂರ್ ಆಲಿ ಮತ್ತಿತರರು ಉಪಸ್ಥಿತರಿದ್ದರು. ಚೆನ್ನೈ, ಬೆಂಗಳೂರು, ಮೈಸೂರು, ತುಮಕೂರು, ಹಾಸನ ಸೇರಿದಂತೆ ಕೊಡಗು ಜಿಲ್ಲೆಯ ವಿವಿಧ ಭಾಗಗಳಿಂದಲೂ ಸ್ಪರ್ಧಾಳುಗಳು ಆಗಮಿಸಿದ್ದರು.ಕೂರ್ಗ್ ಬಾಯ್ಸ ವಿಭಾಗದಲ್ಲಿ ಶಿಯಾಬ್, ಮೀರಜ್ ಮತ್ತು ಆದಿಲ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತಿಯ ಸ್ಥಾನಗಳಿಸಿದರೆ, ಇಂಡಿಯನ್ ಓಪನ್ ವಿಭಾಗದಲ್ಲಿ ನಟರಾಜ್, ಶರತ್, ಹಾಗೂ ಬಿನ್ನಿ ಪ್ರಶಸ್ತಿ ಗಳಿಸಿದರು.ಫೋರ್ ಸ್ಟ್ರೋಕ್ ವಿಭಾಗದಲ್ಲಿ ಮಧು, ನರೇಶ್, ನಟರಾಜ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು. ನೋವೆಲ್ಸ್ ವಿಭಾಗದಲ್ಲಿ ಜಹೀರ್, ಸೂರಜ್ ಮತ್ತು ಯುವ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಸಿದರೆ, ಇಂಟರ್ ಮೀಡಿಯಟ್ ವಿಭಾಗದಲ್ಲಿ ನರೇಶ್, ಸಲ್ಮಾನ ಮತ್ತು ಶರತ್‌ಕುಮಾರ್ ಪ್ರಶಸ್ತಿಗಳಿಸಿದರು. ನಾಪೋಕ್ಲುವಿನ ಅಲ್ತಾಫ್, ಮಹಮದ್ ಖಾನ್ ಹಾಗೂ ಜೈಸಲ್ ರ‌್ಯಾಲಿಯನ್ನು ಸಂಘಟಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.