ಶುಕ್ರವಾರ, ನವೆಂಬರ್ 15, 2019
22 °C
5 ಕ್ಷೇತ್ರ: 73 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ

ನಾಮಪತ್ರ ಪರಿಶೀಲನೆ; ಚುನಾವಣಾ ಕಣ ಸಿದ್ಧ

Published:
Updated:

ಚಿಕ್ಕಮಗಳೂರು: ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಗೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರರು ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆ ಗುರುವಾರ ನಡೆಯಿತು. ಒಟ್ಟು 73 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿವೆ.ಚಿಕ್ಕಮಗಳೂರು ಕ್ಷೇತ್ರಕ್ಕೆ 20 ಅಭ್ಯರ್ಥಿಗಳ ನಾಮಪತ್ರ ಕ್ರಮ ಬದ್ಧವಾಗಿವೆ. ಎನ್‌ಸಿಪಿಯ ಅಪ್ಸರ್ ಪಾಶ, ಜೆಡಿಎಸ್‌ನ ಎಸ್.ಎಲ್.ಧರ್ಮೇಗೌಡ, ಬಿಜೆಪಿಯ ಸಿ.ಟಿ.ರವಿ, ಕಾಂಗ್ರೆಸ್‌ನ ಕೆ.ಎಸ್.ಶಾಂತೇಗೌಡ, ಹಿಂದೂಸ್ಥಾನ್ ನಿರ್ಮಾಣ ದಳದ ದ್ವಾರಕೀಶ್, ಕೆಜೆಪಿಯ ಕೆ.ಬಿ.ವೇದಮೂರ್ತಿ, ಸಿಪಿಐ (ಎಂ.ಎಲ್) ರೆಡ್‌ಸ್ಟಾರ್‌ನ ಸುರೇಶ್, ಜನತಾದಳ (ಸಂಯುಕ್ತ)ದ ಟಿ.ಹರೀಶ್, ಪಕ್ಷೇತರ ಅಭ್ಯರ್ಥಿಗಳಾದ ಅಪ್ಸರ್‌ಪಾಶ, ಡಿ.ಎಸ್.ಅಶೋಕ್, ಉದ್ದಪ್ಪ, ಬಿ.ಎಂ. ಕಲ್ಲೇಶ್ವರ್, ಯು.ಕೆ.ಗುರುಶಾಂತಪ್ಪ, ಧರ್ಮೇಗೌಡ, ಮುನಿ ಯ ಬೋವಿ, ರಮೇಶ್, ಕೆ.ರೇವಣ್ಣ, ವಿಜಯಕುಮಾರ್, ಎಂ.ಎಂ.ಸುಧೀರ್, ಸ್ನೇಕ್ ನರೇಶ್ ಕುಮಾರ್ ಕಣದಲ್ಲಿದ್ದಾರೆ. ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬೀರೂರು ದೇವರಾಜ್, ಕಾಂಗ್ರೆಸ್‌ನ ಕೆ.ಬಿ.ಮಲ್ಲಿಕಾರ್ಜುನ, ಜೆಡಿಎಸ್‌ನ ವೈ.ಎಸ್.ದತ್ತ, ಕೆಜೆಪಿ ಕೆ.ಎಸ್.ಪ್ರಕಾಶ್, ಬಿ.ಎಸ್.ಆರ್.ಕಾಂಗ್ರೆಸ್‌ನ ಕೆಂಪರಾಜು, ಲೋಕಸತ್ತ ಪಾರ್ಟಿಯ ಜಿ.ಎಂ. ಮಧು, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕುಮಾರ್ ನಾಯ್ಕ,  ಪಕ್ಷೇತರ ಅಭ್ಯರ್ಥಿಗಳಾದ ಜಿ.ಕೆ.ಗಿರೀಶ್, ಕೆ.ಆರ್.ಗಂಗಾಧರಪ್ಪ, ಶಿವರುದ್ರಪ್ಪ, ಕೆ.ಎಚ್.ನಾಗರಾಜು ಹಾಗೂ ಟಿ.ಜನಾರ್ಧನ್ ರಾವ್ ಕಣದಲ್ಲಿದ್ದಾರೆ. ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅವಿನಾಶ್, ಕಾಂಗ್ರೆಸ್‌ನ ಜಿ.ಎಚ್.ಶ್ರೀನಿವಾಸ್, ಜೆಡಿಎಸ್‌ನ ಟಿ.ಆರ್.ನಾಗರಾಜ್, ಸಮಾಜವಾದಿ ಜನತಾ ಪಾರ್ಟಿಯ ಟಿ.ಎಸ್.ಜೀವರಾಜ್, ಕೆಜೆಪಿ ಡಿ.ಎಸ್.ಸುರೇಶ್, ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದ ಕೆ.ಮಂಜುನಾಥ್, ಸರ್ವೋದಯ ಕರ್ನಾಟಕ ಪಕ್ಷ ಡಿ.ಸಿ.ಸುರೇಶ್, ಪಕ್ಷೇತರ ಅಭ್ಯರ್ಥಿಗಳಾದ ಎಚ್.ಎಸ್.ನೀಲಕಂಠಪ್ಪ, ಬಿ.ಆರ್.ನೀಲಕಂಠಪ್ಪ, ಅನುಸೂಯಾ, ಎ.ಸುರೇಶ್, ಬಿ.ತಿಮ್ಮಯ್ಯ, ವಿ.ಜಯರಾಂ, ಕಾಂತರಾಜು, ಎಚ್.ಎಂ.ಗೋಪಿ, ತೀರ್ಥಪ್ಪ, ಡಿ.ಆರ್.ಪರಮೇಶ್ ನಾಯ್ಕ, ಜಿ.ಮಂಜುನಾಥ್, ಎ.ಆರ್.ಕೆ.ಶ್ರೀನಿವಾಸ್, ಮೆಹಬೂಬ್, ಎಚ್.ಓಂಕಾರಪ್ಪ, ಟಿ.ಎಸ್.ಸುರೇಶ್, ಎಚ್.ಪಿ.ಅಶೋಕ್ ಕಣದಲ್ಲಿದ್ದಾರೆ. ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ 9 ಅಭ್ಯರ್ಥಿಗಳ ನಾಮಪತ್ರ ಕ್ರಮ ಬದ್ಧವಿದೆ. ಬಿಜೆಪಿ ಎಂ.ಪಿ.ಕುಮಾರಸ್ವಾಮಿ, ಕಾಂಗ್ರೆಸ್‌ನ ಬಿ.ಎನ್.ಚಂದ್ರಪ್ಪ, ಜೆಡಿಎಸ್‌ನ ಬಿ.ಬಿ.ನಿಂಗಯ್ಯ, ಬಹುಜನ ಸಮಾಜ ಪಕ್ಷದ ಯು.ಬಿ.ಮಂಜಯ್ಯ, ಸಿಪಿಐ ಸಾತಿಸುಂದರೇಶ್, ಸಿಪಿಐ (ಮಾರ್ಕ್ಸ್‌ಸಿಸ್ಟ್ ಲೆನಿನಿಸ್ಟ್) ಕುಮಾರ, ಪಕ್ಷೇತರ ಅಭ್ಯರ್ಥಿಗಳಾದ ಬಿ.ಕೆ.ಗೋಪಾಲ್, ನಂಜುಂಡ ಹಾಗೂ ಬಿ.ಎಂ.ರಮೇಶ್ ಕಣದಲ್ಲಿದ್ದಾರೆ.

ಮೂಡಿಗೆರೆ: ಒಂದು ನಾಮಪತ್ರ ತಿರಸ್ಕೃತ

ಮೂಡಿಗೆರೆ: ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ನಡೆದ ನಾಮಪತ್ರ ಪರಿಶೀಲನೆಯಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್. ಮಂಜುನಾಥ್ ಅವರ ನಾಮಪತ್ರ ತಿರಸ್ಕೃತವಾಯಿತು.ಬೆಳಗ್ಗೆ ಹನ್ನೊಂದು ಗಂಟೆಗೆ ಚುನಾವಣಾಧಿಕಾರಿ ಡಾ. ಪ್ರಶಾಂತ್ ಅವರ ನೇತೃತ್ವದಲ್ಲಿ ಪ್ರಾರಂಭವಾದ ನಾಮಪತ್ರ ಪರಿಶೀಲನೆಯಲ್ಲಿ ಕ್ಷೇತ್ರದ ವಿಧಾನ ಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಹತ್ತು ಅಭ್ಯರ್ಥಿಗಳ ನಾಮಪತ್ರಗಳನ್ನು ಪರಿಶೀಲಿಸಿದಾಗ, ಅದರಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ಎಚ್. ಮಂಜುನಾಥ್ ಅವರ ನಾಮಪತ್ರದಲ್ಲಿ ಸೂಚಕರ ಕೊರತೆ ಮತ್ತು ಸೂಚಿಸಿದ್ದ ಅಭ್ಯರ್ಥಿಗಳ ಭಾಗದ ಸಂಖ್ಯೆ ಮತ್ತಿತರ ಮಾಹಿತಿಗಳ ಕೊರತೆ ಇದ್ದ ಕಾರಣ ತಿರಸ್ಕರಿಸಲಾಗಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ನಾಮಪತ್ರ ಸಲ್ಲಿಸಿದ್ದ ಹತ್ತು ಅಭ್ಯರ್ಥಿಗಳಲ್ಲಿ, ಒಂಬತ್ತು ಅಭ್ಯರ್ಥಿಗಳು ಮಾತ್ರ ಕಣದಲ್ಲಿ ಉಳಿದಂತಾಗಿದೆ.ತರೀಕೆರೆ: ಎಲ್ಲ ನಾಮಪತ್ರ ಅಂಗೀಕಾರ

ತರೀಕೆರೆ : ತರೀಕೆರೆ ವಿಧಾನ ಸಭಾ ಕ್ಷೇತ್ರದ ಚುನಾವಣೆಗೆ ಸಲ್ಲಿಸಿದ್ದ ನಾಮಪತ್ರ ಪರಿಶೀಲನೆ ಗುರುವಾಗ  ಉಪವಿಭಾಗಾಧಿಕಾರಿ ಕಚೇರಿಯಲ್ಲಿ ನಡೆಯಿತು. ಚುನಾವಣಾಧಿಕಾರಿ ಜಿ. ಅನುರಾಧ ನಾಮಪತ್ರ ಪರಿಶೀಲಿಸಿದರು.ಒಟ್ಟು 23 ಅಭ್ಯರ್ಥಿಗಳು  ತಮ್ಮ ನಾಮ ಪತ್ರ ಸಲ್ಲಿಸಿದ್ದರು, ಅವುಗಳ ಪೈಕಿ  ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ  ಮತ್ತು ಪಕ್ಷೇತರ ಅಭ್ಯರ್ಥಿಯಾಗಿಯೂ  ಎರಡು ನಾಮಪತ್ರ ಸಲ್ಲಿಸಿದ್ದ ಜಿ. ಮಂಜುನಾಥ ಅವರ  ನಾಮಪತ್ರ ತಾಂತ್ರಿಕ ಕಾರಣದಿಂದ ತಿರಸ್ಕೃತಗೊಂಡರೂ ಸಹಾ ಪಕ್ಷದಿಂದ ಸಲ್ಲಿಸಿದ್ದ ನಾಮಪತ್ರ ಪುರಸ್ಕೃತವಾದ ಕಾರಣ ಎಲ್ಲಾ ಅಭ್ಯರ್ಥಿಗಳ ನಾಮ ಪತ್ರಗಳು ಅಂಗೀಕೃತವಾಗಿದೆ ಎಂದು ಚುನಾವಣಾಧಿಕಾರಿ ಜಿ.ಅನುರಾಧಾ ಘೋಷಿಸಿದರು.

ಶೃಂಗೇರಿ ಕ್ಷೇತ್ರ: ಎಲ್ಲ ನಾಮಪತ್ರ ಸಿಂಧು

ಕೊಪ್ಪ : ಶೃಂಗೇರಿ ಕ್ಷೇತ್ರಕ್ಕೆ 9 ಅಭ್ಯರ್ಥಿಗಳು ಸಲ್ಲಿಸಿದ ನಾಮಪತ್ರಗಳ ಪರಿಶೀಲನೆ ಕೊಪ್ಪ ತಾಲ್ಲೂಕು ಕಚೇರಿಯಲ್ಲಿ ಗುರುವಾರ ನಡೆಯಿತು.ಕೇಂದ್ರ ಚುನಾವಣಾ ಸಾಮಾನ್ಯ ವೀಕ್ಷಕ ಎಂ.ಎಂ. ನೂಲಿ ಅವರ ಸಮಕ್ಷಮ ಕ್ಷೇತ್ರ ಚುನಾವಣಾಧಿಕಾರಿ ರತ್ನಾಕರ್ ನಾಯಕ್ ಮತ್ತು ತಾಲ್ಲೂಕು ಚುನಾವಣಾಧಿಕಾರಿ ಶ್ರಿಧರಮೂರ್ತಿ ಎಸ್. ಪಂಡಿತ್ ನಾಮಪತ್ರಗಳ ಪರಿಶೀಲನೆ ನಡೆಸಿದರು.ಸಿಪಿಐಎಂಎಲ್(ರೆಡ್ ಸ್ಟಾರ್) ಪಕ್ಷದ ಅಭ್ಯರ್ಥಿ ಸಿ.ಇ. ಬಸವರಾಜ್ ಸಲ್ಲಿಸಿದ ನಾಮಪತ್ರದ ಜೊತೆ ಪಕ್ಷದ ಬಿ. ಫಾರಂ ಸಲ್ಲಿಸದ ಕಾರಣ ಅವರನ್ನು ಪಕ್ಷೇತರ ಅಭ್ಯರ್ಥಿಯೆಂದು ಪರಿಗಣಿಸಲಾಯಿತು. ಉಳಿದಂತೆ ಕಣದಲ್ಲಿರುವ ಡಿ.ಎನ್. ಜೀವರಾಜ್ (ಬಿಜೆಪಿ), ಟಿ.ಡಿ. ರಾಜೇಗೌಡ(ಕಾಂಗ್ರೆಸ್), ಟಿ.ಸಿ. ರಾಜೇಂದ್ರ (ಜೆಡಿಎಸ್), ಜಿ.ಆರ್. ಪೂರ್ಣೇಶ್ (ಬಿಎಸ್‌ಆರ್), ಉಮೇಶ್ (ಸಿಪಿಐಎಂಎಲ್-ರೆಡ್ ಸ್ಟಾರ್) ಕೆ.ಸಿ. ಪ್ರಕಾಶ್(ಪಕ್ಷೇತರ),  ಕೆ.ವಿ. ಮಹೇಶ್ ಕಟ್ಟಿನಮನೆ (ಪಕ್ಷೇತರ), ಮಂಜುನಾಥ ಯಾನೆ ಅಬ್ರಹಾಂ (ಪಕ್ಷೇತರ) ಎಲ್ಲರ ನಾಮಪತ್ರಗಳೂ ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿಗಳು ಪ್ರಕಟಿಸಿದ್ದಾರೆ.

 

ಪ್ರತಿಕ್ರಿಯಿಸಿ (+)