ನಾಮಪತ್ರ: ಮುಷರಫ್ ಮೇಲ್ಮನವಿ ವಜಾ

7

ನಾಮಪತ್ರ: ಮುಷರಫ್ ಮೇಲ್ಮನವಿ ವಜಾ

Published:
Updated:

ಇಸ್ಲಾಮಾಬಾದ್ (ಪಿಟಿಐ) : ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಕರಾಚಿ ಕ್ಷೇತ್ರದಿಂದ ಸಲ್ಲಿಸಿದ್ದ ತಮ್ಮ ನಾಮಪತ್ರ ವನ್ನು ತಿರಸ್ಕರಿಸಿದ್ದರ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ಅಲ್ಲಿನ ಚುನಾವಣಾ ನ್ಯಾಯಮಂಡಳಿ ಸೋಮವಾರ ತಳ್ಳಿಹಾಕಿದೆ.

2007ರ ತುರ್ತುಪರಿಸ್ಥಿತಿಯಲ್ಲಿ ಉನ್ನತ ನ್ಯಾಯಾಂಗದ ಸದಸ್ಯರನ್ನು ಅಗೌರವಿಸಿದ್ದಷ್ಟೇ ಅಲ್ಲದೆ ಸಂವಿಧಾನದ ಉಲ್ಲಂಘನೆ ಮಾಡಿದ್ದಾರೆ ಎಂಬುದನ್ನು ಆಧಾರವಾಗಿಟ್ಟುಕೊಂಡು ಮತ್ತೋರ್ವ ಅಭ್ಯರ್ಥಿ ಮುಷರಫ್ ಅವರು ಸಂಸದೀಯ ಕ್ಷೇತ್ರ ಸಂಖ್ಯೆ 205ಕ್ಕೆ ಸಲ್ಲಿಸಿದ್ದ ನಾಮಪತ್ರವನ್ನು ಪ್ರಶ್ನಿಸಿದ್ದರು. ಹೀಗಾಗಿ ಮುಷರಫ್ ಅವರು ನಾಮಪತ್ರ ತಿರಸ್ಕೃತಗೊಂಡಿತ್ತು.

ಬಳಿಕ ಮುಷರಫ್ ಅವರು ನಾಮಪತ್ರ ತಿರಸ್ಕೃತಗೊಂಡದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಚುನಾವಣಾ ನ್ಯಾಯಮಂಡಳಿ ಸೋಮವಾರ ಪುರಸ್ಕರಿಸಲಿಲ್ಲ.

ಮುಷರಫ್ ಅವರು ನಾಲ್ಕು ಸಂಸದೀಯ ಕ್ಷೇತ್ರಗಳಿಂದ ಸ್ಪರ್ಧಿಸಲು ಯೋಜನೆ ರೂಪಿಸಿದ್ದರು. ಆದರೆ ಕರಾಚಿ, ಕಸೂರ್ ಮತ್ತು ಇಸ್ಲಾಮಾಬಾದ್ ಕ್ಷೇತ್ರದಿಂದ ಅವರು ಸಲ್ಲಿಸಿದ್ದ ನಾಮಪತ್ರವನ್ನು ಚುನಾವಣಾ ಅಧಿಕಾರಿ ಮಾನ್ಯ ಮಾಡಲಿಲ್ಲ.

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಮೇ 11 ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ದೇಶಕ್ಕೆ ಮರಳಿದಾಗಿನಿಂದ ಸಾಕಷ್ಟು ರಾಜಕೀಯ ಮತ್ತು ಕಾನೂನು ಸವಾಲುಗಳನ್ನು ಎದುರಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry