ಭಾನುವಾರ, ನವೆಂಬರ್ 17, 2019
21 °C

ನಾಮಪತ್ರ ಹಿಂದಕ್ಕೆ ಪಡೆದವರು

Published:
Updated:

ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಶ್ರೀಪಾದ ಬೆಟಗೇರಿ, ದುರಗೇಶ ಮೇಗಳಮನಿ, ವಾಸಪ್ಪ ಬಸವ್ವನವರ, ಪ್ರಕಾಶ ಲಮಾಣಿ, ರಾಜೇಶ್ವರಿ ಮುಂದಿನಮನಿ ನಾಮಪ್ರ ವಾಪಸ್ಸು, ಪಡೆದರೆ, ರಾಣೆಬೆನ್ನೂರ ಕ್ಷೇತ್ರದ ಡಾ.ಮೋಹನ ಹಂಡೆ ಹಾಗೂ ಡಿಳ್ಳೆಪ್ಪ ಓಲೇಕಾರ ನಾಮಪತ್ರ ವಾಪಸ್ ಪಡೆದಿದ್ದಾರೆ.ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಾದ ವಿರೇಶ ರುದ್ರಪ್ಪ ಪಾಟೀಲ, ಬಸವರಾಜ ಕಂಬಾರ, ಇಮ್ತಿಯಾಜ್‌ಅಹ್ಮದ್ ಅಜೀಜ್‌ಸಾಬ್ ಬಟ್ಟಿಪುರ, ಮೆಹಬೂಬಸಾಬ್ ಖಾಲೆಭಾಗ ತಮ್ಮ ನಾಮಪತ್ರ ಹಿಂಪಡೆದರೆ, ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರಾಗಿ ನಾಮಪತ್ರ ಸಲ್ಲಿಸಿದ ಮಲ್ಲಿಕಾರ್ಜುನ ಬೇವಿನಮರದ, ರಾಜೀವ್ ಶಿಗ್ಲಿ, ಶಂಕರಗೌಡ ಪಾಟೀಲ, ಬಸವರಾಜ ಬಳ್ಳಾರಿ ನಾಮಪತ್ರ ವಾಪಸ್ಸು ಪಡೆದಿದ್ದಾರೆ.ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಂ.ಕೊತಂಬರಿ, ಪಕ್ಷೇತರ ಅಭ್ಯರ್ಥಿಗಳಾದ ಉಡಚಪ್ಪ ಉದ್ದನಕಾಲ, ಚನ್ನಬಸನಗೌಡ ಪಾಟೀಲ, ನಾರಾಯಣ ಭೀಮರಾವ ರಾಯ್ಕರ, ಬಾರ್ಕಿ ನಿಂಗಪ್ಪ, ಭಂಡಾರಿ ಅಬ್ದುಲ್‌ವಹಾಬ್ ಅಲ್ಲಾಭಕ್ಷ, ಮಾಲತೇಶ ಜಾಡರ, ಶ್ರೀನಿವಾಸ ಸಂಕಪಾಳೆ, ಸುರೇಶ ಸಂಕ್ರಪ್ಪ ನಾಯಕ ನಾಮಪತ್ರ ವಾಪಸ್ಸು ಪಡೆದರೆ, ಹಿರೇಕೆರೂರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಾರುತಿ ಜೋಕನಾಳ ನಾಮಪತ್ರ ವಾಪಸ್ ಪಡೆದಿದ್ದಾರೆ.

ಪ್ರತಿಕ್ರಿಯಿಸಿ (+)