ನಾಮಫಲಕಗಳು ಇಲ್ಲ

7

ನಾಮಫಲಕಗಳು ಇಲ್ಲ

Published:
Updated:

ರಾಜಾಜಿನಗರದ ಭಾಷ್ಯಂ ವೃತ್ತದ ಬಳಿ ಇರುವ ಕೆಲವು ಅಡ್ಡರಸ್ತೆಗಳಿಗೆ ನಾಮಫಲಕಗಳು ಇಲ್ಲ. ಕೆಲವು ರಸ್ತೆಗಳಿಗೆ ಮಾತ್ರ ಇದೆ. ಉದಾಹರಣೆಗೆ: 57ನೇ ಅಡ್ಡ ರಸ್ತೆಯಿಂದ 45ನೇ ಅಡ್ಡರಸ್ತೆವರೆಗೆ ಕೆಲವು ರಸ್ತೆಗಳಿಗೆ ನಾಮಫಲಕಗಳು ಇಲ್ಲ. ಅಲ್ಲಿನ ಮಹಾನಗರಪಾಲಿಕೆ ಸದಸ್ಯರು ಪ್ರದಕ್ಷಿಣೆ ನೀಡಿ ನಾಮಫಲಕಗಳನ್ನು ಹಾಕಿಸಬೇಕಾಗಿ ಮನವಿ.

- ವಿ. ಕೆ. ಸುಬ್ಬಣ್ಣ

ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯ

ಬಿ.ಬಿ.ಎಂ.ಪಿ. ವಾರ್ಡ್ 43, ದಾಸರಹಳ್ಳಿಗೆ ಒಳಪಡುವ ಸೋನಾಲ್ ಗಾರ್ಮೆಂಟ್ಸ್‌ನಿಂದ ಐ. ಆರ್. ಪಾಲಿಟೆಕ್ನಿಕ್ಸ್‌ವರೆಗೂ ಇರುವ ರಸ್ತೆಯನ್ನು ಜಲಮಂಡಲಿಯವರು ಒಂದೂವರೆ ತಿಂಗಳಿಂದ ಅಗೆದು ಪೈಪ್ ಹಾಕುವ ಕೆಲಸ ಮುಗಿಸಿದರು. ಆ ಕಾಮಗಾರಿ ಮುಗಿದರೂ ರಸ್ತೆ ರಿಪೇರಿ ಮಾಡಿಲ್ಲ.

 ಆದ್ದರಿಂದ ಲಕ್ಷ್ಮೀದೇವಿನಗರ, ವಿಧಾನಸೌಧ ಬಡಾವಣೆಗೆ ನಾಗರಿಕರು ಎರಡು ಕಿಲೋಮೀಟರ್ ನಡೆದು ಮನೆ ತಲುಪಬೇಕಾಗಿದೆ. ಬಿಎಂಟಿಸಿ ಸಾರಿಗೆ ಬಸ್ಸುಗಳನ್ನು 2 ಕಿ.ಮೀ. ಹಿಂದೆ ಸೋನಾಲ್ ಗಾರ್ಮೆಂಟ್ಸ್ ಬಳಿ ನಿಲ್ಲಿಸುತ್ತಾರೆ. ಆದ್ದರಿಂದ ಜಲಮಂಡಳಿಯವರು ಕೂಡಲೇ ರಸ್ತೆ ರಿಪೇರಿ ಮಾಡಿಸಿ ಈ ಮಾರ್ಗದಲ್ಲಿ ಬಸ್ಸುಗಳು ಸಂಚರಿಸುವಂತೆ ಮಾಡಲು ಮನವಿ.

- ಮಹಾದೇವ ಎಸ್

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry