ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಲಹೆ

ಗುರುವಾರ , ಜೂಲೈ 18, 2019
24 °C

ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಲಹೆ

Published:
Updated:

ಕುಕನೂರು: ಶಾಲಾ ಹಂತದಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು ಶಾಲಾ ಸಂಸತ್ತು ರಚನೆ ಮಾಡಲಾಗುತ್ತದೆ ಎಂದು ಪ್ರಾಚಾರ್ಯ ಮಂಜುನಾಥ ಅಂಗಡಿ ಹೇಳಿದರು.ಸಮೀಪದ ತಳಕಲ್ ಗ್ರಾಮದ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶಾಲಾ ಸಂಸತ್ತು ಉದ್ಘಾಟನಾ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.ನಿತ್ಯದ ವಿದ್ಯಾಭ್ಯಾಸದ ಜೊತೆಗೆ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಸಂಗತಿಯನ್ನು ಅರಿತುಕೊಂಡು ಭವಿಷ್ಯದಲ್ಲಿ ದೇಶದ ಸಂಪನ್ಮೂಲ ವ್ಯಕ್ತಿಗಳಾಗಿ ರೂಪುಗೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮೇಲ್ವಿಚಾರಕ ಭೀಮಣ್ಣ ವಾಲಿಕಾರ, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.ಶಾಲಾ ಸಂಸತ್ತಿಗೆ ಆಯ್ಕೆಯಾದ ಸುನೀಲಕುಮಾರ (ಪ್ರಧಾನ ಮಂತ್ರಿ), ರೇಷ್ಮಾಬೇಗಂ ಮುಧೋಳ (ಮಹಿಳಾ ಪ್ರತಿನಿಧಿ), ಅರುಣಕುಮಾರ ವಿ.ಜಿ (ಕ್ರೀಡಾ ಮಂತ್ರಿ), ಆಫ್ರಿನ್‌ತಾಜ್ ಯಾವಗಲ್ (ವಿದ್ಯಾರ್ಥಿನಿ ವಿಭಾಗದ ಕ್ರೀಡಾ ಮಂತ್ರಿ), ಆರೀಫ್ ಮುಲ್ಲಾ (ಆರೋಗ್ಯ ಮಂತ್ರಿ), ಪ್ರಮೋದ ಯರಾಶಿ (ಸಂಸ್ಕೃತಿ ಮಂತ್ರಿ), ವಿನೋದಕುಮಾರ ಅರವುಣಸಿ, ಆರ್ಶಿಯಾಬಾನು ವಾಲಿಕಾರ (ಆಹಾರ ಮಂತ್ರಿ), ರಮಜಾನ್‌ಬಿ ಮ್ಯಾಗೇರಿ ವಾರ್ತಾ ಮಂತ್ರಿ ವಿದ್ಯಾರ್ಥಿ ಪ್ರತಿನಿಧಿಗಳಗೆ ಪ್ರಮಾಣ ವಚನ ಬೋಧಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry