ನಾಯಕರಲ್ಲಿ ಮನ್ನಡೆಸುವ ಎದೆಗಾರಿಕೆ ಇರಲಿ

ಗುರುವಾರ , ಜೂಲೈ 18, 2019
28 °C

ನಾಯಕರಲ್ಲಿ ಮನ್ನಡೆಸುವ ಎದೆಗಾರಿಕೆ ಇರಲಿ

Published:
Updated:

ಸೇಡಂ: `ಒಂದು ಇಲಾಖೆಯ ಮುಖ್ಯಸ್ಥರಾಗಿ ಇರುವುದಕ್ಕಿಂತ ಒಂದು ಗುಂಪಿನ ನಾಯಕನಾಗಿರುವುದು ಒಳ್ಳೆಯದು~ ಎಂದು ವಾಸವದತ್ತಾ ಸಿಮೆಂಟ್ ಕಂಪೆನಿ ಸಿವಿಲ್ ವಿಭಾಗದ ಮುಖ್ಯಸ್ಥ ಶ್ರೀನಿವಾಸರಾವ ಹೇಳಿದ್ದಾರೆ.ಅವರು ಗುರುವಾರ ಇಲ್ಲಿಯ ವಾಸವದತ್ತಾ ವಿದ್ಯಾ ವಿಹಾರದಲ್ಲಿ ಶಾಲಾ ಶಿಸ್ತು ಪಾಲನಾ ಸಮಿತಿಗೆ ಆಯ್ಕೆಗೊಂಡ ವಿದ್ಯಾರ್ಥಿಗಳ ತಂಡದ ಪದಗ್ರಹಣ ಸಮಾರಂಭದಲ್ಲಿ  ಮಾತನಾಡಿದರು. `ಸಮಯ ಪರಿಪಾಲನೆ ಇರಲಿ. ಉತ್ತಮ ನಡೆ ನುಡಿಯಿಂದ ಎಲ್ಲರ ಜೊತೆಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಿ~ ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ಶಾಲೆಯ ಕಾರ್ಯಕಾರಿ ಸಮಿತಿ ಸದಸ್ಯ ಮತ್ತು ಕಂಪೆನಿ ಜನರಲ್ ಮ್ಯಾನೇಜರ್ ಆರ್.ಎಸ್.ಪಾಟೀಲ ಅವರು ಮಾತನಾಡಿ, `ದೇಶದ ಉತ್ತಮ ಭವಿಷ್ಯ ನಿರ್ಮಾಣ ಮಾಡುವಲ್ಲಿ ಮಕ್ಕಳ ಪಾತ್ರ ಹಿರಿದಾಗಿದೆ~ ಎಂದರು.ಪ್ರಾಚಾರ್ಯೆ ನೀತಾ ಪುರೋಹಿತ, ಮತದಾನದ ಪಾವಿತ್ರ್ಯತೆಯ ಬಗ್ಗೆ ವಿವರಿಸಿದರು. ವಿದ್ಯಾರ್ಥಿ ಶಿವಪ್ರಕಾಶ ಪಾಟೀಲ ಚುನಾವಣಾ ವರದಿ ಮಂಡಿಸಿದನು. ಶಿಕ್ಷಕಿ ಪುಷ್ಪಲತಾ ಬಳಿಗಾರ ಸ್ವಾಗತಿಸಿದರು. ಇಂದಿರಾ ಸಾತನೂರ ನಿರೂಪಿಸಿದರು. ಪಾಲಕರ ಪ್ರತಿನಿಧಿ ಡಾ. ರಾಜಶೇಖರ ಮಾಲಿ, ಅಬ್ದುಲ್ ಕರೀಮ್, ಡಿಜಿಎಂ ಪ್ರಸಾದರಾವ, ಉಪ-ಪ್ರಾಚಾರ್ಯೆ ಸುನೀತಾ ಕುಲಕರ್ಣಿ ಮಾತನಾಡಿದರು. ಮಲ್ಲಮ್ಮ ಮೈಲಾರ ವಂದಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry