ನಾಯಕರ ಸಮುದಾಯ ಭವನ ಕಾಮಗಾರಿಗೆ ಭೂಮಿಪೂಜೆ

7

ನಾಯಕರ ಸಮುದಾಯ ಭವನ ಕಾಮಗಾರಿಗೆ ಭೂಮಿಪೂಜೆ

Published:
Updated:

ಸಂತೇಮರಹಳ್ಳಿ: ‘ಬಹುತೇಕ ಸಮುದಾಯ ಭವನಗಳು ನಿರ್ವಹಣೆ ಇಲ್ಲದೇ ಪಾಳು ಬೀಳುತ್ತಿವೆ. ಗ್ರಾಮಸ್ಥರು ಇದಕ್ಕೆ ಅವಕಾಶ ನೀಡಬಾರದು’ ಎಂದು ಸಂಸದ ಆರ್‌. ಧ್ರುವನಾರಾಯಣ್‌ ಸಲಹೆ ನೀಡಿದರು.ಸಂತೇಮರಹಳ್ಳಿ ಸಮೀಪದ ಉಮ್ಮತ್ತೂರು ಗ್ರಾಮದಲ್ಲಿ ರೂ 20 ಲಕ್ಷ ವೆಚ್ಚದ ನಾಯಕರ ಸಮುದಾಯ ಭವನದ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ, ಮಾತನಾಡಿದರು.ಸಮುದಾಯ ಭವನಗಳನ್ನು ನಿರ್ಮಾಣ ವಾದ ಬಳಿಕ ಗ್ರಾಮಸ್ಥರು ನಿರ್ವಹಣೆ ಮಾಡಬೇಕು. ಜತೆಗೆ ಅದನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿಸಿ ಅಭಿವೃದ್ಧಿ ಗೊಳಿಸಬೇಕು ಎಂದರು.ಮಹಿಳೆಯರು ಜಗಲಿಕಟ್ಟೆಯಲ್ಲಿ ಕುಳಿತು ಸ್ತ್ರೀ ಶಕ್ತಿ ಸಂಘಗಳನ್ನು ನಡೆಸು ವುದನ್ನು ಬಿಟ್ಟು ಸಮುದಾಯ ಭವನಗಳನ್ನು ಬಳಸಿಕೊಳ್ಳಬೇಕು. ಬಡಾವಣೆಯಲ್ಲಿ ವಾಸಿಸುವ ವಿದ್ಯಾರ್ಥಿ ಗಳು ಮನೆ ಪಾಠಗಳ ಬಳಕೆಗೂ ಉಪಯೋಗಿಸಿ ಕೊಳ್ಳಬಹುದು ಎಂದು ಹೇಳಿದರು.ಗ್ರಾಮದಲ್ಲಿ ಈಗಾಗಲೇ ಅಂಬೇಡ್ಕರ್‌ ಭವನ ಪ್ರಗತಿಯಲ್ಲಿದೆ. ಆದಿಜಾಂಬವರ ಭವನದ ಕಾಮಗಾರಿಗೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ಉಪ್ಪಾರ ಸಮುದಾಯ ಭವನದ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.ಗ್ರಾಮದಲ್ಲಿ ತಲೆದೂರಿರುವ ಕುಡಿಯುವ ನೀರಿನ ಸಮಸೆ್ಯಗೆ ಬರ ಪರಿಹಾರದಲಿ್ಲ ಅನುದಾನ ನೀಡಲಾಗುವುದು. ಸಂತೇಮರಹಳಿ್ಳ ಹೋಬಳಿ ವಾ್ಯಪಿ್ತಿಯ ಕುಡಿಯುವ ನೀರಿನ ಸಮಸೆ್ಯ ಬಗೆಹರಿಸಲು ಶಾಸಕರು ಶ್ರಮ ವಹಿಸುತಿ್ತದ್ದಾರೆ. 300 ಹಳಿ್ಳ ಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಟೆಂಡರ್‌ ಪ್ರಕಿ್ರಯೆ ಪಾ್ರರಂಭವಾಗಿದೆ. ಉಮ್ಮತೂ್ತರು ಕೆರೆಗೆ ನೀರು ತುಂಬಿಸುವ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು ಎಂದರು.ಶಾಸಕ ಎಸ್‌. ಜಯಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಪಿ. ಪುಟ್ಟಬುದಿ್ಧ, ಕೊಪ್ಪಾಳಿ ಮಹದೇವ ನಾಯಕ, ತಾಲೂ್ಲಕು ಪಂಚಾಯಿತಿ ಉಪಾಧ್ಯಕ್ಷೆ ಪಾರ್ವತಮ್ಮ ಟಿ.ಕೆ. ರಂಗಯ್ಯ, ಗ್ರಾ. ಪಂ. ಅಧ್ಯಕ್ಷ ಬಸವರಾಜು, ಉಪಾಧ್ಯಕ್ಷೆ ಸುಧಾ, ಚಂದ್ರು, ಉಮ್ಮತೂ್ತರು ನಾಗೇಶ್‌, ಬಸವನಾಯಕ, ಸುಬ್ಬನಾಯಕ, ಕುಮಾರ ನಾಯಕ, ದುಂಡನಾಯಕ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry