`ನಾಯಕ್' ನಿರೀಕ್ಷೆಯಲ್ಲಿ...

7

`ನಾಯಕ್' ನಿರೀಕ್ಷೆಯಲ್ಲಿ...

Published:
Updated:
`ನಾಯಕ್' ನಿರೀಕ್ಷೆಯಲ್ಲಿ...

ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಡಿ.ವಿ.ವಿ.ಧನಯ್ಯ ತಮ್ಮ ಮುಂದಿನ ಚಿತ್ರ `ನಾಯಕ್' ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. `ದುಬೈ ಸೀನು', `ಜುಲಾಯಿ' ತರಹದ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದ ಅವರಿಗೆ `ನಾಯಕ್' ಕೂಡ ಯಶಸ್ಸು ನೀಡುತ್ತದೆ ಎಂಬ ಭರವಸೆ ಇದೆಯಂತೆ. ಖ್ಯಾತ ನಿರ್ದೇಶಕ ವಿ.ವಿ. ವಿನಾಯಕ್ ಹಾಗೂ ರಾಮ್ ಚರಣ್ ತೇಜಾ ಈ ಚಿತ್ರದಲ್ಲಿ ಒಂದಾಗಿರುವುದೇ ಇವರ ನಿರೀಕ್ಷೆಗಳು ಗರಿಗೆದರಲು ಕಾರಣವಂತೆ. `ರಾಮ್ ಚರಣ್ ತೇಜಾ ಹಾಗೂ ವಿನಾಯಕ್ ಜೋಡಿ ಪ್ರೇಕ್ಷಕರಿಗೆ ರಸದೌತಣ ನೀಡಲಿದೆ. `ಟ್ಯಾಗೂರ್' ಚಿತ್ರದಲ್ಲಿ ಚಿರಂಜೀವಿ ಜತೆ ಕೆಲಸ ಮಾಡಿದ್ದ ವಿನಾಯಕ್ ದೊಡ್ಡ ಹಿಟ್ ನೀಡಿದ್ದರು. ಅದಕ್ಕಿಂತಲೂ ದೊಡ್ಡ ಯಶಸ್ಸು `ನಾಯಕ್' ಚಿತ್ರಕ್ಕೆ ಸಿಗಲಿದೆ. `ನಾಯಕ್' ಸಿನಿಮಾ ಅದ್ದೂರಿಯಾಗಿ ಮೂಡಿಬರಬೇಕು ಎಂದು ನಿರ್ದೇಶಕರು ಸಾಕಷ್ಟು ಶ್ರಮವಹಿಸಿದ್ದಾರೆ. ಬಿಡುವಿಲ್ಲದಂತೆ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರೇಕ್ಷಕರಿಗೆ ಇಷ್ಟವಾಗುವಂತೆ ಚಿತ್ರ ರೂಪಿಸಿದ್ದಾರೆ' ಎನ್ನುತ್ತಿದ್ದಾರೆ ಧನಯ್ಯ.ಜನವರಿ 9ರಂದು ತೆರೆಗೆ ಬರಲು ಸಿದ್ಧಗೊಂಡಿರುವ `ನಾಯಕ್' ಸಿನಿಮಾದಲ್ಲಿ ರಾಮ್‌ಚರಣ್‌ಗೆ ಜತೆಯಾಗಿರುವುದು ಕಾಜಲ್ ಅಗರ್‌ವಾಲ್ ಮತ್ತು ಅಮಲಾ ಪೌಲ್. `ನಾಯಕ್' ಚಿತ್ರದಲ್ಲಿ ಚಾರ್ಮಿ ಕೌರ್ ಐಟಂ ನಂಬರ್‌ನಲ್ಲಿ ಕಾಣಿಸಿಕೊಂಡಿದ್ದಾರಂತೆ.

ಅಂದಹಾಗೆ, ಸದ್ಯಕ್ಕೆ ರಾಮ್ ಚರಣ್ ತೇಜಾ ಹಿಂದಿ ಹಾಗೂ ತೆಲುಗು ಎರಡು ಭಾಷೆಗಳಲ್ಲೂ ನಿರ್ಮಾಣವಾಗುತ್ತಿರುವ `ಜಂಜೀರ್' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry