ನಾಯರ್, ಬಾಹ್ಯಾಕಾಶ ಇಲಾಖೆಗೆ ತರಾಟೆ

7

ನಾಯರ್, ಬಾಹ್ಯಾಕಾಶ ಇಲಾಖೆಗೆ ತರಾಟೆ

Published:
Updated:

ನವದೆಹಲಿ (ಪಿಟಿಐ): ವಿವಾದಾತ್ಮಕ ಅಂತರಿಕ್ಷ್- ದೇವಾಸ್ ಒಪ್ಪಂದದ್ಲ್ಲಲಿ,  ನಿಯಮಾವಳಿಗಳನ್ನು ಗಾಳಿಗೆ ತೂರಿ,  ಖಾಸಗಿ ಸಂಸ್ಥೆಗೆ ಅನುಕೂಲ ಮಾಡಿಕೊಡಲು ಅನೇಕ ಸಂಗತಿಗಳನ್ನು ಮುಚ್ಚಿಟ್ಟಿದ ಕಾರಣಕ್ಕೆ, ಬಾಹ್ಯಾಕಾಶ ಇಲಾಖೆಯನ್ನು,  ವಿಶೇಷವಾಗಿ ಅದರ ಮಾಜಿ ಕಾರ್ಯದರ್ಶಿ ಜಿ. ಮಾಧವನ್ ನಾಯರ್ ಅವರನ್ನು ಮಹಾಲೇಖ     ಪಾಲರು (ಸಿಎಜಿ) ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.`ಸೇವೆಯಲ್ಲಿರುವ ಕೆಲವೇ ಆಯ್ದ ವ್ಯಕ್ತಿಗಳು ಹಾಗೂ ನಿವೃತ್ತ ಸರ್ಕಾರಿ ಅಧಿಕಾರಿಗಳು ಸೇರಿ ತಮ್ಮ ವ್ಯಾಪ್ತಿಯಲ್ಲಿ  ಇಲ್ಲದ ಅಧಿಕಾರವನ್ನೂ ತಾವೇ ಚಲಾಯಿಸಿ ಆಡಳಿತ ವ್ಯವಸ್ಥೆಯನ್ನು ಹೇಗೆ ವಿಫಲಗೊಳಿಸುತ್ತಾರೆ ಎಂಬುದಕ್ಕೆ ಇದೊಂದು ಅತ್ಯುತ್ತಮ ನಿದರ್ಶನೆ~ ಎಂದು `ಸಿಎಜಿ~ ವರದಿ ಚಾಟಿ ಬೀಸಿದೆ.ಹಲವು ಮಹತ್ವದ ಸ್ಥಾನಗಳಿಗೆ ನೇಮಕವಾಗಿದ್ದ ನಾಯರ್ ಅವರು ಹಿತಾಸಕ್ತಿಗಳ ಸಂಘರ್ಷಕ್ಕೆ ಒಳಗಾಗಿದ್ದಾರೆ. ನಿಯಂತ್ರಣ ಹಾಗೂ ಸಮತೋಲನ ಸಾಧಿಸುವ ನಿಟ್ಟಿನಲ್ಲಿ ಬೇರೆ ಬೇರೆ ಮಹತ್ವದ ಸ್ಥಾನಗಳಿಗೆ  ಅನ್ಯ ವ್ಯಕ್ತಿಗಳನ್ನು ನೇಮಕ ಮಾಡಿದ್ದರೆ ಇದನ್ನು ತಪ್ಪಿಸಬಹುದಿತ್ತು ಎಂದು ಮಂಗಳವಾರ ಸಂಸತ್ತಿನಲ್ಲಿ ಮಂಡನೆಯಾದ `ಸಿಎಜಿ~ ವರದಿಯಲ್ಲಿ ಹೇಳಲಾಗಿದೆ.ದೇವಾಸ್ ಸಂಸ್ಥೆಗೆ ಅನಿಯಮಿತ ಅವಧಿಗೆ ನೀಡಲಾದ 70 ಮೆಗಾಹರ್ಟ್ಜ್ ಎಸ್- ಬ್ಯಾಂಡ್ ತರಂಗಾಂತರದಿಂದ ಬರಬಹುದಾದ ಆದಾಯವನ್ನು ಸರಿಯಾಗಿ ಅಂದಾಜು ಮಾಡದಿರುವುದಕ್ಕೂ ಬಾಹ್ಯಾಕಾಶ ಇಲಾಖೆಯನ್ನು ವರದಿಯಲ್ಲಿ ತರಾಟೆಗೆ ತೆಗೆದುಕೊಳ್ಳಲಾಗಿದೆ.ಮೆಸರ್ಸ್ ಫೋರ್ಜ್ ಅಡ್ವೈಸರ್ಸ್‌ನ ಪ್ರಸ್ತಾವಗಳನ್ನು ಪರಿಶೀಲಿಸಲು `ಇಸ್ರೊ~ ಅಧ್ಯಕ್ಷರಾಗಿದ್ದ ನಾಯರ್ ಅವರು ಶಂಕರ್ ಸಮಿತಿಯನ್ನು ನೇಮಿಸಿದರು. ಇದೇ ವೇಳೆ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯೂ ಆಗಿದ್ದ ನಾಯರ್ ಅವರು, ಮಹತ್ವದ ಅಂಶಗಳನ್ನು ಮುಚ್ಚಿಟ್ಟ ಟಿಪ್ಪಣಿಯನ್ನು ಕೇಂದ್ರ ಸಚಿವ ಸಂಪುಟಕ್ಕೆ ಸಲ್ಲಿಸಿದ್ದರು ಎನ್ನುವುದರತ್ತಲೂ ಎಂದು ಸಿಎಜಿ ಬೆಟ್ಟು ಮಾಡಿದೆ.ಜಿಸ್ಯಾಟ್-6 ಮತ್ತು 6ಎ ಉಪಗ್ರಹಗಳಿಗೆ ಅನುಮತಿ ದೊರೆತ ಸಭೆಗಳ ಅಧ್ಯಕ್ಷತೆಯನ್ನು ಅಂತರಿಕ್ಷ ಆಯೋಗದ ಅಧ್ಯಕ್ಷರಾಗಿ ನಾಯರ್ ವಹಿಸಿದ್ದರು ಎಂದೂ ವರದಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry