ನಾಯಿ, ಕೋತಿ ಹಾವಳಿ ತಡೆಗೆ ರೈತ ಸಂಘ ಆಗ್ರಹ

7

ನಾಯಿ, ಕೋತಿ ಹಾವಳಿ ತಡೆಗೆ ರೈತ ಸಂಘ ಆಗ್ರಹ

Published:
Updated:

ಬಂಗಾರಪೇಟೆ: ಪಟ್ಟಣದಲ್ಲಿ ಬೀದಿ ನಾಯಿ ಕಾಟ ಹಾಗೂ ಕೋತಿಗಳ ಹಾವಳಿ ಮೀತಿ ಮೀರಿದೆ. ಕೂಡಲೇ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮಂಗಳವಾರ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಹಲವರು ಕೋತಿ ಹಾಗೂ ನಾಯಿಗಳ ಕಡಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೂ ಪುರಸಭೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಅಬ್ಬಣಿ ಶಿವಪ್ಪ, ಕೋಟಗಾನಹಳ್ಳಿ ಗಣೇಶ ಗೌಡ, ಟಿ.ಎನ್.ರಾಮೇಗೌಡ, ಅಂಜಿ, ರಾಮಚಂದ್ರ, ಮಾಗೇರಿ ಸೀನಪ್ಪ, ಶ್ರೀನಿವಾಸ್, ನಾಗೇಶ್, ಚಂದ್ರಶೇಖರ್, ಉದಯಕುಮಾರ್, ಚಲಪತಿ, ನಾಗರಾಜು, ನಾರಾಯಣಸ್ವಾಮಿ, ವೆಂಕಟೇಶಪ್ಪ, ರಘುನಾಥ, ಶಿವಕುಮಾರ್, ಜಯಪ್ಪ, ಬಾಬು, ಶ್ರೀನಿವಾಸಗೌಡ, ಲಕ್ಷ್ಮಣ, ಕೃಷ್ಣಪ್ಪ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry