ಮಂಗಳವಾರ, ಮೇ 18, 2021
28 °C

ನಾಯಿ ತಂದೀತು ನಾಯಿಪಾಡು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್, (ಪಿಟಿಐ): ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ಇನ್ನು ಮುಂದೆ ನಾಯಿ ಸಾಕುವವರು ಅತ್ಯಂತ ಎಚ್ಚರದಿಂದ ಇರಬೇಕಾಗುತ್ತದೆ. ಇಲ್ಲದಿದ್ದರೆ ಅವರ ಬದುಕೇ `ನಾಯಿಪಾಡು~ ಆಗಿ ಬಿಡುವ ಅಪಾಯ ಇದೆ!ಒಂದು ವೇಳೆ ಇಲ್ಲಿನ ನಾಯಿಗಳು ಯಾರಿಗಾದರೂ ಮಾರಣಾಂತಿಕವಾಗಿ ಕಚ್ಚಿದ್ದೇ ಆದರೆ ಅವುಗಳ ಮಾಲೀಕರು 10 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.ತನ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಹೆಣ್ಣು ಮಗುವನ್ನು ನೆರೆಮನೆಯ ನಾಯಿಯೊಂದು ಕಚ್ಚಿ ಕೊಂದ ಹಿನ್ನೆಲೆಯಲ್ಲಿ ಈ ಹೊಸ ಕಾನೂನನ್ನು ಜಾರಿಗೆ ತರಲಾಗಿದೆ.

ಇದರ ಅನ್ವಯ, ನಾಯಿಗಳ ಮಾಲೀಕರು ತಮ್ಮ `ಕ್ರೂರ~ ನಾಯಿಗಳನ್ನು ನೆರೆಮನೆಯವರು ಮತ್ತು ದಾರಿಹೋಕರಿಂದ ದೂರವಿರಿಸಬೇಕು.ಇದುವರೆಗೆ ನಾಯಿ ಮಾಲೀಕರು ತಪ್ಪಿತಸ್ಥರು ಎಂದು ಕಂಡುಬಂದಲ್ಲಿ ಸಣ್ಣ ಪ್ರಮಾಣದ ದಂಡವನ್ನು ಮಾತ್ರ ವಿಧಿಸಲಾಗುತ್ತಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.