ನಾಯಿ ಬಂಧನಕ್ಕೆ ಪಾಲಿಕೆ ಅಸ್ತು

7

ನಾಯಿ ಬಂಧನಕ್ಕೆ ಪಾಲಿಕೆ ಅಸ್ತು

Published:
Updated:
ನಾಯಿ ಬಂಧನಕ್ಕೆ ಪಾಲಿಕೆ ಅಸ್ತು

ಗುಲ್ಬರ್ಗ: ಎಲ್ಲ ಬೀದಿ ನಾಯಿಗಳನ್ನು ಬಂಧಿಸಿ ಒಂದೆಡೆ ಕೂಡಿಹಾಕುವ ನಿರ್ಣಯವನ್ನು ಮಹಾನಗರ ಪಾಲಿಕೆ ವಿಶೇಷ ಸಾಮಾನ್ಯ ಸಭೆಯು ಶುಕ್ರವಾರ ಅಂಗೀಕರಿಸಿದೆ.ಇಂದಿರಾ ಸ್ಮಾರಕ ಭವನದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಬೀದಿ ನಾಯಿ ಹಾವಳಿ ನಿಯಂತ್ರಣ, ಕುಡಿಯುವ ನೀರಿನ ದರ ಪರಿಶೀಲನೆ, ನಗರದ ಹಿಂದುಳಿದ- ಕೊಳಚೆ ಪ್ರದೇಶದಲ್ಲಿ ವಾಸಿಸುವ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಶಿಕ್ಷಣ ಜ್ಞಾನ ಹೆಚ್ಚಿಸಲು ವಿಶೇಷ ತರಗತಿ ಆರಂಭ ಮತ್ತು ಪಾಲಿಕೆ ವ್ಯಾಪ್ತಿಯ ಉದ್ಯಾನ ಜಾಗವನ್ನು ಪರಭಾರೆ ಮಾಡಿರುವ ಬಗ್ಗೆ ಕ್ರಮಕೈಗೊಳ್ಳುವ ವಿಚಾರಗಳು ಪ್ರಸ್ತಾಪವಾಯಿತು.ಸ್ವತಃ ಮೇಯರ್ ಅಷ್ಫಕ್ ಚುಲ್‌ಬುಲ್ 45 ನಿಮಿಷ ತಡವಾದ ಪರಿಣಾಮ ಸಭೆ ವಿಳಂಬವಾಗಿ ಆರಂಭಗೊಂಡಿತು. `ನಗರದಲ್ಲಿರುವ ನಾಯಿಗಳ ಸಂಖ್ಯೆ, ಹುಚ್ಚು ಹಿಡಿದ ನಾಯಿಗಳು, ಈ ತನಕ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಎಲ್ಲಿದೆ~ ಎಂದು  ವಿಪಕ್ಷ ಮುಖಂಡ ವಿನೋದ್ ಕೆ.ಬಿ., ಭೀಮರೆಡ್ಡಿ, ಅಹ್ಮದ್, ಲಾಲ್ ಅಹ್ಮದ್ ಮತ್ತಿತರರು ಪ್ರಸ್ತಾಪಿಸಿದರು. ಇದಕ್ಕೆ ಅಧಿಕಾರಿಗಳ ಬಳಿ  ಉತ್ತರವಿರಲಿಲ್ಲ. ಕಳೆದ ಸಭೆಯ ಬಳಿಕ ಕ್ರಮಕೈಗೊಂಡ ಬಗ್ಗೆಯೂ ಮಾಹಿತಿ ಇರಲಿಲ್ಲ.ನಾಯಿ ಕಡಿತದ ಬಗ್ಗೆ ಲೆಕ್ಕ ನೀಡಿದ ಆರೋಗ್ಯಾಧಿಕಾರಿ ಶ್ಯಾಮರಾವ್, ಗುಲ್ಬರ್ಗದಲ್ಲಿ 2009ರಲ್ಲಿ 5,497, 2010ರಲ್ಲಿ 6,715 ಮತ್ತು 2011ರಲ್ಲಿ 6,411 ನಾಯಿಗಳು ಮನುಷ್ಯರಿಗೆ  ಕಚ್ಚಿವೆ. ಆ ಪೈಕಿ ಸತ್ತವರ ವಿವರಗಳಿಲ್ಲ~ ಎಂದರು.`ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯು ವಿಫಲ ಕಾರ್ಯ ಎಂದು ಪಶುವೈದ್ಯಕೀಯ ವಿಶ್ವವಿದ್ಯಾಲಯದ ಡೀನ್ ಹೇಳಿದ್ದಾರೆ. ಮತ್ತೆ ಅದನ್ನೇ ಅನುಸರಿಸಿ ಪ್ರಯೋಜನವಿಲ್ಲ~ ಎಂದು ಲಾಲ್ ಅಹ್ಮದ್ ಹೇಳಿದರು.`ಅಧಿಕಾರಿಗಳ, ಮುಖಂಡರ ಮಕ್ಕಳಿಗೆ ನಾಯಿ ಕಚ್ಚಿದ್ದರೆ ಅವುಗಳ ಸಂತಾನ ನಾಶ ಮಾಡುತ್ತಿದ್ದರು. ಜನತೆಯನ್ನು ಒಕ್ಕಲೆಬ್ಬಿಸಿ ಓಡಿಸುವ ಜಿಲ್ಲಾಡಳಿತಕ್ಕೆ ನಾಯಿಯನ್ನು ತೆರವು ಮಾಡಲಾಗುತ್ತಿಲ್ಲ. ಬಡಜನ ಹಾಗೂ ಮಕ್ಕಳು ಸಾಯುತ್ತಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳಿ~ ಎಂದು ಅಹ್ಮದ್ ಆಗ್ರಹಿಸಿದರು.ಕೊನೆಗೂ ವಿನೋದ್ ಕೆ.ಬಿ. ಸಲಹೆಯನ್ನು ಸ್ವೀಕರಿಸಿದ ಪಾಲಿಕೆಯು ಪಾಲಿಕೆಯ ಜಾಗವೊಂದಕ್ಕೆ ವಾರದೊಳಗೆ ಭದ್ರ ಬೇಲಿಯನ್ನು ಹಾಕಲಾಗುವುದು. ನಗರದ ಎಲ್ಲ ಬೀದಿನಾಯಿಗಳನ್ನು ಹಿಡಿದು ಇಲ್ಲಿ ಬಿಡಲಾಗುವುದು. ಈ ಪೈಕಿ ರೋಗಿಷ್ಠ ನಾಯಿಗಳಿಗೆ `ಮುಕ್ತಿ~ ನೀಡಲಾಗುವುದು~ ಎಂಬ ನಿರ್ಣಯ ಅಂಗೀಕರಿಸಿತು. ಇದರೊಂದಿಗೆ ಹಂದಿಗಳನ್ನು ಕೂಡಾ ತೆರವು ಮಾಡಲು ನಿರ್ಧರಿಸಿತು.ನಾಯಿಗೆ ಹಾಕಿದ ಹಣವೆಷ್ಟು?

*ನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿದ ಬಗ್ಗೆ 2008ರಿಂದ ಇಲ್ಲಿ ತನಕ ಗುತ್ತಿಗೆದಾರರು ಬಿಲ್ ಕೊಡುತ್ತಿದ್ದರು. ಅದಕ್ಕೆ ಪಾಲಿಕೆಯ ಹಲವು ಸದಸ್ಯರು ಸಹಿ ಹಾಕಿ ಲೆಕ್ಕ ಕೊಟ್ಟಿದ್ದರು. ಆದರೆ ಸಮರ್ಪಕ ದಾಖಲೆಗಳಿರಲಿಲ್ಲ.

 

ಆ ಚಿಕಿತ್ಸೆ ಏನಾಯಿತು? ನಾಯಿಗಳು ಎಲ್ಲಿಗೆ ಹೋದವು? ಎಷ್ಟು ಮಂದಿ ಸುಳ್ಳು ಲೆಕ್ಕ ಕೊಟ್ಟು ದುಡ್ಡು ನುಂಗಿದ್ದಾರೆ? ಯಾವ್ಯಾವ ಸದಸ್ಯರು ಈ ವ್ಯವಹಾರ ನಡೆಸಿದ್ದಾರೆ? ಇಲ್ಲಿ ತನಕ ಎಷ್ಟು ಹಣ ಖರ್ಚಾಗಿದೆ? ಎಷ್ಟು ನಾಯಿಗೆ ಚಿಕಿತ್ಸೆ ನೀಡಲಾಗಿದೆ ಎಂಬ ಮಾಹಿತಿಯನ್ನು ನೀಡಿ~ ಎಂದು ಸದಸ್ಯ ಭೀಮರೆಡ್ಡಿ ಪ್ರಶ್ನಿಸಿದರು.ಆಗ ಗರಂ ಆದ ಸಯ್ಯದ್ ಸಜ್ಜಾದ್ ಆಲಿ, `ಹಳೇ ಲೆಕ್ಕ ಬೇಡ. ಈಗ ಹೊಸದಾಗಿ ಕ್ರಮಕೈಗೊಳ್ಳುವ~ ಎಂದರು. ಈ ಮಧ್ಯೆ ಅವರಿಬ್ಬರ ನಡುವೆ ಮಾತಿನ `ಕಚ್ಚಾಟ~ ನಡೆಯಿತು.*ನಾಯಿಯ ಹೆಸರಲ್ಲಿ ಆರಂಭವಾದ ಚರ್ಚೆಯು ಕೊನೆಗೆ ಕಾಂಗ್ರೆಸ್-ಬಿಜೆಪಿ ಮಧ್ಯೆ ತಿರುಗಿತು. ಕಾಂಗ್ರೆಸ್-ಬಿಜೆಪಿ ಸದಸ್ಯರು ಪರಸ್ಪರ `ಆರ್ಭಟಿಸಿಕೊಂಡು ಕಚ್ಚಾಡಿ~ದರು. ಮಧ್ಯೆ ಪ್ರವೇಶಿಸಿದ ವಿನೋದ್ ಕೆ.ಬಿ. `ನಾಯಿ ಎಲ್ಲಿ ಹೋಯಿತು?~ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry