ನಾರಾಯಣಸಾ ನಿಧನ

7

ನಾರಾಯಣಸಾ ನಿಧನ

Published:
Updated:

ಬೆಂಗಳೂರು: ‘ದಿ ಪ್ರಿಂಟರ್ಸ್‌ (ಮೈಸೂರ್) ಪ್ರೈ ಲಿಮಿಟೆಡ್’ನ ನಿರ್ದೇಶಕ ಎಸ್.ಡಿ. ನಾರಾಯಣಸಾ (89) ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತದಿಂದ ಶುಕ್ರವಾರ ನಿಧನರಾದರು.

ಅವರು ಪುತ್ರರಾದ ಎಸ್.ಎನ್.ಶ್ರೀನಿವಾಸಮೂರ್ತಿ,ಎಸ್.ಎನ್.ಶಿವಶಂಕರ್, ಪುತ್ರಿಯರಾದ ಚಂದ್ರಕಾಂತಾ ಕಬಾಡಿ, ಅಮರ ರತ್ನಾ ಡೊಂಡಾಳೆ ಹಾಗೂ ಕುಟುಂಬದವರನ್ನು ಅಗಲಿದ್ದಾರೆ.

‘ಪ್ರಜಾವಾಣಿ’,  ‘ಡೆಕ್ಕನ್‌ಹೆರಾಲ್ಡ್’ ಮಾಲೀಕತ್ವದ ದಿ ಪ್ರಿಂಟರ್ಸ್‌ (ಮೈಸೂರ್) ಪ್ರೈ ಲಿಮಿಟೆಡ್‌ನ ನಿರ್ದೇಶಕರಾಗಿ ಕಳೆದ 20 ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಅವರು ಎಸ್. ಧೋಂಡುಸಾ ಗೋಲ್ಡ್‌ಥ್ರೆಡ್ ಕಾರ್ಖಾನೆಯ ಮಾಲೀಕರಾಗಿದ್ದರು.

ಶ್ರೀ ಸುಧಾ ಕೋ ಆಪರೇಟಿವ್ ಬ್ಯಾಂಕ್‌ನ ಸಂಸ್ಥಾಪಕ ನಿರ್ದೇಶಕರಾಗಿ, ಬೆಂಗಳೂರು ಟರ್ಫ್ ಕ್ಲಬ್‌ನ ಹಿರಿಯ ಸದಸ್ಯರಾಗಿ ಹಾಗೂ ಧೋಂಡುಸಾ ಧರ್ಮಸಂಸ್ಥೆಯ ಟ್ರಸ್ಟಿಯಾಗಿ ಅವರು ಸೇವೆ ಸಲ್ಲಿಸಿದ್ದರು. ಶನಿವಾರ ಮಧ್ಯಾಹ್ನ 2.30ಕ್ಕೆ ಚಾಮರಾಜಪೇಟೆಯ ಪಾಲಿಕೆ ಚಿತಾಗಾರದಲ್ಲಿ ಮೃತರ ಅಂತ್ಯಸಂಸ್ಕಾರ ನಡೆಯಲಿದೆ. ಮಾಹಿತಿಗೆ ಮೊಬೈಲ್: 98450 07945, 9845062118 ಅನ್ನು ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry