ನಾರಾಯಣ ಗುರುಗಳ ೧೫೯ನೇ ಜಯಂತಿ

7

ನಾರಾಯಣ ಗುರುಗಳ ೧೫೯ನೇ ಜಯಂತಿ

Published:
Updated:

ಬೆಂಗಳೂರು: ‘ಸಾಮಾಜಿಕ ತಾರತಮ್ಯ ವನ್ನು ಹೋಗಲಾಡಿಸಿ ಸಮಾನತೆ ಯನ್ನು ತರುವಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪಾತ್ರ ಮಹತ್ವದ್ದಾಗಿದೆ’ ಎಂದು ನಗರಾಭಿ ವೃದ್ಧಿ ಸಚಿವ ವಿನಯ್‌ಕುಮಾರ್‌ ಸೊರಕೆ ಹೇಳಿದರು.ಬಿಲ್ಲವ ಅಸೋಸಿಯೇಷನ್‌ ಇತ್ತೀಚೆಗೆ  ನಗರದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 159 ನೇ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ವಿದ್ಯೆಯಿಂದ ಬದುಕು ಉಜ್ವಲ ವಾಗುತ್ತದೆ, ವಿದ್ಯೆಯಿಂದ ಸ್ವತಂತ್ರರಾಗಿ ಎಂದು ಹೇಳಿದ ಗುರುಗಳ ತತ್ವವನ್ನು ಪಾಲಿಸಬೇಕು’ ಎಂದು ತಿಳಿಸಿದರು.ನಾರಾಯಣ ನೇತ್ರಾಲಯ ಆಸ್ಪತ್ರೆಯ ಮುಖ್ಯಸ್ಥ ಡಾ. ಕೆ. ಭುಜಂಗ ಶೆಟ್ಟಿ ಮಾತನಾಡಿ, ‘ನಾರಾಯಣ ಗುರುಗಳ ತತ್ವವನ್ನು ಎಲ್ಲರೂ ಅಳವಡಿಸಿಕೊಂಡು ಸಮಾಜದ ಏಳಿಗೆಗೆ ಶ್ರಮಿಸಬೇಕು’ ಎಂದರು.ಸಮಾಜದ ೨೨ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ೬೨ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry