ನಾರಾಯಣ ಸಾಯಿ ನ್ಯಾಯಾಂಗ ವಶಕ್ಕೆ

7

ನಾರಾಯಣ ಸಾಯಿ ನ್ಯಾಯಾಂಗ ವಶಕ್ಕೆ

Published:
Updated:

ಸೂರತ್‌ (ಪಿಟಿಐ): ಪೊಲೀಸರು ಮತ್ತು ನ್ಯಾಯಾಲಯದ ಸಿಬ್ಬಂದಿಗೆ ಲಂಚ ನೀಡಲು ಯತ್ನಿಸಿದ ಆರೋಪದ ಮೇರೆಗೆ ಸ್ವಯಂಘೋಷಿತ ದೇವಮಾನವ ಆಸಾರಾಂ ಬಾಪು ಅವರ ಪುತ್ರ ನಾರಾಯಣ ಸಾಯಿ ಅವರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.ತಮ್ಮ ಮೇಲೆ ದಾಖಲಾಗಿದ್ದ ಅತ್ಯಾಚಾರ ಪ್ರಕರಣವನ್ನು ಮುಚ್ಚಿ­ಹಾಕಲು ನಾರಾಯಣ ಸಾಯಿ ಅವರು ಸಿಬ್ಬಂದಿಗೆ  ಲಂಚ ನೀಡಲು ಯತ್ನಿಸಿದ್ದರು.

ನಾರಾಯಣ ಸಾಯಿ ವಿಚಾರಣೆ ನಡೆಸಲು ಇನ್ನೂ ನಾಲ್ಕು ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕೆಂದು ಪೊಲೀಸರು ಕೋರಿದ್ದ ಅರ್ಜಿಯನ್ನು ಜಿಲ್ಲಾ ಸೆಷೆನ್ಸ್‌ ಮುಖ್ಯ ನ್ಯಾಯಾಧೀಶ ಐ.ಸಿ. ಷಾ ತಿರಸ್ಕರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry