ಭಾನುವಾರ, ಜೂನ್ 13, 2021
22 °C

ನಾರ್ವೆಯಲ್ಲಿ ನೈಸರ್ಗಿಕ ಛಾಯಾಚಿತ್ರಗಳ ವಿಶ್ವ ಕಪ್ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾರ್ವೆಯಲ್ಲಿ ನೈಸರ್ಗಿಕ ಛಾಯಾಚಿತ್ರಗಳ ವಿಶ್ವ ಕಪ್ ಸ್ಪರ್ಧೆ

ಬೆಂಗಳೂರು: ದಿ ಫೆಡರೇಷನ್ ಇಂಟರ್ ನ್ಯಾಷನಲ್ ಆರ್ಟ್ ಫೋಟೋಗ್ರಾಫಿಕ್ (ಎಫ್‌ಐಎಪಿ) ನಾರ್ವೆಯಲ್ಲಿ ಇತ್ತೀಚೆಗೆ ನಡೆಸಿದ 16ನೇ ನೈಸರ್ಗಿಕ ಛಾಯಾಚಿತ್ರಗಳ ವಿಶ್ವ ಕಪ್ ಸ್ಪರ್ಧೆಯ ಪ್ರೊಜೆಕ್ಟೆಡ್ ಇಮೇಜಸ್ ವಿಭಾಗದಲ್ಲಿ ಭಾರತ ತಂಡವು ಚಿನ್ನದ ಪದಕ ಗೆದ್ದಿದೆ.ಭಾರತ ತಂಡದಿಂದ 15 ಮಂದಿ ನಿಸರ್ಗ ಹವ್ಯಾಸಿ ಛಾಯಾಗ್ರಾಹಕರು ತಲಾ ಎರಡು ಚಿತ್ರಗಳನ್ನು ಸ್ಪರ್ಧೆಗೆ ಕಳಿಸಿದ್ದರು. ಬಿಹಾರದ ಡಾ.ಬಿ.ಕೆ. ಸಿನ್ಹ ಹೊರತುಪಡಿಸಿದರೆ ಉಳಿದವರೆಲ್ಲರೂ ಕರ್ನಾಟದವರು ಎಂಬುದು ಇಲ್ಲಿ ಗಮನಾರ್ಹ.ಡಾ.ಬಿ.ಕೆ. ಸಿನ್ಹ, ಸಿ.ಆರ್. ಸತ್ಯನಾರಾಯಣ, ಡಾ. ಪ್ರಮೋದ್ ಶಾನಭಾ, ಡಾ.ಎಸ್.ಆರ್. ಜಯಪ್ರಕಾಶ್, ಕೆ. ವಿನಯ್ ವಡೇರು, ಎ.ಜಿ. ಗಂಗಾಧರ್, ಡಾ.ಎಚ್. ರಾಮಕೃಷ್ಣಯ್ಯ, ಜಿ.ಎಸ್. ಕೃಷ್ಣಮೂರ್ತಿ, ಎಸ್. ಆನಂದಕುಮಾರ್, ಎಸ್.ಪಿ. ನಾಗೇಂದ್ರ, ಕಿರಣ್ ಪೂಣಚ್ಚ, ಕೆ.ಪಿ. ಮಾರ್ಟಿನ್, ಎಂ. ರಾಮು, ಎಸ್. ದೇವೇಂದ್ರಕುಮಾರ್, ಎಸ್. ತಿಪ್ಪೇಸ್ವಾಮಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.ಇದಲ್ಲದೆ, ಪ್ರಿಂಟ್ ವಿಭಾಗದಲ್ಲಿ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರೊಫೆಸರ್ ಡಾ.ಎ.ಎಚ್. ರಾಮಕೃಷ್ಣಯ್ಯ ವೈಯಕ್ತಿಕ ಚಿನ್ನದ ಪದಕ ಪಡೆದಿದ್ದಾರೆ. ಮೈಸೂರು ಬಳಿಯ ಕಾವೇರಿ ತೀರದ ನಗುವಿನಹಳ್ಳಿ ಬಳಿ ತೆಗೆದ `ಬ್ಲೂ ಟೈಲ್ಡ್ ಬೀ ಈಟರ್~ (ನೀಲಿ ಬಾಲದ ಕಳ್ಳಿಪೀರ) ಚಿತ್ರಕ್ಕೆ ಈ ಪ್ರಶಸ್ತಿ ಲಭಿಸಿದೆ.ಎಫ್‌ಐಎಪಿ ವಿಶ್ವಕಪ್ ಸ್ಪರ್ಧೆಯಲ್ಲಿ ಇವರು ಚಿನ್ನದ ಪದಕ ಗೆದ್ದಿರುವುದು ಇದು ಮೊದಲು. ಆದರೆ, ವಿವಿಧ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಇವರು 10 ಪದಕಗಳನ್ನು ಗೆದ್ದಿದ್ದಾರೆ. ಅದರಲ್ಲಿ ಏಳು ಚಿನ್ನ, ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳು ಸೇರಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.