ನಾಲ್ಕನೇ ಟೆಸ್ಟ್ : ಜಹೀರ್, ಯುವಿಗೆ ಕೋಕ್

7

ನಾಲ್ಕನೇ ಟೆಸ್ಟ್ : ಜಹೀರ್, ಯುವಿಗೆ ಕೋಕ್

Published:
Updated:

ಕೋಲ್ಕತ್ತ (ಪಿಟಿಐ) : ಮುಂಬೈ ಮತ್ತು ಕೋಲ್ಕತ್ತದಲ್ಲಿ ನಡೆದ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಹೀನಾಯ ಸೋಲುಂಡ ಬಳಿಕ ಬಿಸಿಸಿಐ ಆಯ್ಕೆ ಸಮಿತಿ ಎಚ್ಚೆತ್ತುಕೊಂಡಿದ್ದು, ನಾಗ್ಪುರದಲ್ಲಿ ಗುರುವಾರದಿಂದ ನಡೆಯಲಿರುವ ನಾಲ್ಕನೇ ಟೆಸ್ಟ್ ಕ್ರಿಕೆಟ್‌ಗೆ ಭಾರತ ತಂಡದಿಂದ ವೇಗಿ ಜಹೀರ್ ಖಾನ್ ಮತ್ತು ಯುವರಾಜ್ ಸಿಂಗ್ ಅವರನ್ನು ಕೈಬಿಟ್ಟಿದೆಭಾನುವಾರ ಇಲ್ಲಿ ಸಭೆ ಸೇರಿದ ಬಿಸಿಸಿಐ ಆಯ್ಕೆ ಸಮಿತಿ ಜಹೀರ್ ಮತ್ತು ಯುವರಾಜ್ ಅವರನ್ನು ತಂಡದಿಂದ ಕೈಬಿಡುವ ನಿರ್ಧಾರ ತೆಗೆದುಕೊಂಡಿತು.ಇದೇ ವೇಳೆ 15 ಆಟಗಾರರ ಪಟ್ಟಿಯಲ್ಲಿದ್ದ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಬದಲಾಗಿ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಹಾಗೂ ದೆಹಲಿಯ ವೇಗಿ ಪರವಿಂದರ್ ಅವಾನ ಮತ್ತು ಸೌರಾಸ್ಟ್ರದ ಆಲ್‌ರೌಂಡರ್ ರವೀಂದ್ರ ಜಡೇಜಾಗೆ ಅವರಿಗೆ ಅವಕಾಶ ಕಲ್ಪಿಸಲಾಗಿದೆ.ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ ಇಂತಿದೆ : ಮಹೇಂದ್ರ ಸಿಂಗ್ ಧೋನಿ (ನಾಯಕ) ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ರವೀಂದ್ರ ಜಡೇಜಾ, ಆರ್. ಅಶ್ವಿನ್, ಪಿಯೂಷ್ ಚಾವ್ಲಾ, ಇಶಾಂತ್ ಶರ್ಮಾ, ಅಜಿಂಕ್ಯಾ ರಹಾನೆ, ಅಶೋಕ್ ದಿಂಡಾ, ಎಂ. ವಿಜಯ್, ಪರವಿಂದರ್ ಅವಾನ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry