ನಾಲ್ಕರ ಘಟ್ಟಕ್ಕೆ ಸಾಮರ್ಸೆಟ್

5

ನಾಲ್ಕರ ಘಟ್ಟಕ್ಕೆ ಸಾಮರ್ಸೆಟ್

Published:
Updated:

ಬೆಂಗಳೂರು: ವಾರಿಯರ್ಸ್ ವಿರುದ್ಧ 12 ರನ್‌ಗಳ ಗೆಲುವು ಪಡೆದ ಸಾಮರ್ಸೆಟ್ ತಂಡ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು. ಚೆನ್ನೈನಲ್ಲಿ ಶನಿವಾರ ನಡೆಯುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಸಾಮರ್ಸೆಟ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಪೈಪೋಟಿ ನಡೆಸಲಿದೆ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ `ಬಿ~ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಾಮರ್ಸೆಟ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 146 ರನ್ ಪೇರಿಸಿತು. ದಕ್ಷಿಣ ಆಫ್ರಿಕದ ವಾರಿಯರ್ಸ್ 8 ವಿಕೆಟ್‌ಗೆ 134 ಗಳಿಸಲಷ್ಟೇ ಯಶಸ್ವಿಯಾಯಿತು.ನಾಯಕ ಅಲ್ಫೋನ್ಸೊ ಥಾಮಸ್ (16ಕ್ಕೆ 2), ಸ್ಟೀವ್ ಕರ್ಬಿ (33ಕ್ಕೆ 2) ಮತ್ತು ಮುರಳಿ ಕಾರ್ತಿಕ್ (23ಕ್ಕೆ 2) ತೋರಿದ ಪ್ರಭಾವಿ ಬೌಲಿಂಗ್ ಸಾಮರ್ಸೆಟ್ ಗೆಲುವಿಗೆ ಕಾರಣವಾಯಿತು.ಸಂಕ್ಷಿಪ್ತ ಸ್ಕೋರ್: ಸಾಮರ್ಸೆಟ್: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 146 (ಕ್ರೆಗ್ ಕೀಸ್‌ವೆಟರ್ ಔಟಾಗದೆ 56, ವಾನ್ ಡೆರ್ ಮೆರ್ವ್ 32, ರಸ್ಟಿ ಥೆರಾನ್ 23ಕ್ಕೆ 1). ವಾರಿಯರ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 134 (ಜಾನ್ ಟ್ರೆವರ್ ಸ್ಮಟ್ಸ್ 38, ಅಲ್ಫೋನ್ಸೊ ಥಾಮಸ್ 16ಕ್ಕೆ 2, ಸ್ಟೀವ್ ಕರ್ಬಿ 33ಕ್ಕೆ 2, ಮುರಳಿ ಕಾರ್ತಿಕ್ 23ಕ್ಕೆ 2). ಫಲಿತಾಂಶ: ಸಾಮರ್ಸೆಟ್‌ಗೆ 12 ರನ್ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry